4 ದಿಕ್ಕುಗಳಿಂದಲೂ ರಥಯಾತ್ರೆಗೆ ಬಿಜೆಪಿ ಸಿದ್ಧತೆ

Social Share

ಬೆಂಗಳೂರು,ಜ.17- ಬರಲಿರುವ ವಿಧಾನಸಭೆ ಚುನಾವಣೆಗೆ ಮತ್ತಷ್ಟು ಪರಿಣಾಮಕಾರಿಯಾಗಿ ಪ್ರಚಾರ ನಡೆಸಲು ಬಿಜೆಪಿ ರಾಜ್ಯದ ನಾಲ್ಕು ದಿಕ್ಕುಗಳಲ್ಲಿ ರಥಯಾತ್ರೆ ಮೂಲಕ ಪಾಂಚಜನ್ಯ ಮೊಳಗಿಸಲಿದೆ.

ಉತ್ತರಪ್ರದೇಶ, ಗುಜರಾತ್‍ನಲ್ಲಿ ಇದೇ ತಂತ್ರವನ್ನು ಅನುಸರಿಸಿ ಯಶಸ್ವಿಯಾಗಿದ್ದ ಬಿಜೆಪಿ ಕರ್ನಾಟಕದಲ್ಲೂ ನಾಲ್ಕು ದಿಕ್ಕಿನಲ್ಲಿ ರಥಯಾತ್ರೆ ಮೂಲಕ ಪ್ರಚಾರ ನಡೆಸಿ ಮತದಾರರ ಓಲೈಕೆಗೆ ಕಸರತ್ತು ನಡೆಸಲಿದೆ. ಮೈಸೂರು, ಮಂಗಳೂರು, ಬೆಳಗಾವಿ ಹಾಗೂ ಕಲಬುರಗಿ ವಿಭಾಗಗಳನ್ನು ಒಳಗೊಂಡ ಒಟ್ಟು ನಾಲ್ಕು ಕಡೆ ರಥಯಾತ್ರೆ ನಡೆಯಲಿದ್ದು, ಇಂದು ದಿನಾಂಕ ನಿಗದಿಯಾಗಲಿದೆ.

ಈ ರಥಯಾತ್ರೆಗೆ ಖುದ್ದು ಪ್ರಧಾನಿ ನರೇಂದ್ರ ಮೋದಿ ಅವರೇ ಚಾಲನೆ ಕೊಡಲಿದ್ದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಕೇಂದ್ರ ಗೃಹಸಚಿವ ಅಮಿತ್ ಷಾ, ಮುಖ್ಯಮಂತ್ರಿಗಳಾದ ಯೋಗಿ ಆದಿತ್ಯನಾಥ್, ಶಿವರಾಜ್ ಸಿಂಗ್ ಚವ್ಹಾಣ್, ಬಸವರಾಜ ಬೊಮ್ಮಾಯಿ, ಭೂಪೇಂದ್ರ ಪಟೇಲ್, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಕೇಂದ್ರ ಸಚಿವರು ಮತ್ತಿತರ ಘಟಾನುಘಟಿ ನಾಯಕರು ಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

ಬಿಎಸ್‍ವೈ-ಮೋದಿ ಗೌಪ್ಯ ಮಾತುಕತೆ, ರಾಜ್ಯ ಬಿಜೆಪಿಯಲ್ಲಿ ಸಂಚಲನ

ಈಗಾಗಲೇ ಜನಸಂಕಲ್ಪ ಹಾಗೂ ಮನೆ ಮನೆಯಲ್ಲಿ ಪಕ್ಷದ ಹಾರಿಸುವ ಮೂಲಕ ಒಂದು ಸುತ್ತಿನ ಪ್ರಚಾರ ನಡೆಸಿರುವ ಬಿಜೆಪಿ ಮುಂದಿನಗಳಲ್ಲಿ ಹಿಂದುತ್ವ ಮತ್ತು ಅಭಿವೃದ್ಧಿ ಅಜೆಂಡಾಗಳನ್ನು ಮುಂದಿಟ್ಟುಕೊಂಡು ಚುನಾವಣೆಗೆ ಧುಮುಕಲಿದೆ.

ಪ್ರಧಾನಿ ಮೋದಿ ಅವರಿಂದ ಇದೇ 19ರಂದು ಕಲಬುರಗಿ ಮತ್ತು ಯಾದಗಿರಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡುವುದು, ಹಕ್ಕುಪತ್ರ ವಿತರಣೆ, ಕೃಷ್ಣ ಎಡದಂಡೆ ನಾಲೆ ಯೋಜನೆ ಲೋಕಾರ್ಪಣೆ, ನಂತರ ಮುಂದಿನ ತಿಂಗಳು ಶಿವಮೊಗ್ಗದಲ್ಲಿ ವಿಮಾನ ನಿಲ್ದಾಣ ಉದ್ಘಾಟನೆ, ಬಹುನಿರೀಕ್ಷಿತ ಮೈಸೂರು-ಬೆಂಗಳೂರು ನಡುವಿನ ಎಕ್ಸ್‍ಪ್ರೆಸ್ ಹೈವೇ ಲೋಕಾರ್ಪಣೆ ಹೀಗೆ ನರೇಂದ್ರ ಮೋದಿ ಅವರಿಂದ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ಕೊಡಿಸಲಾಗುತ್ತಿದೆ.

ಅದೇ ರೀತಿ ಹಿಂದೂ ಫೈರ್‍ಬ್ಯಾಂಡ್ ಖ್ಯಾತಿಯ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹಿಂದುತ್ವವನ್ನೇ ಮುಂದಿಟ್ಟುಕೊಂಡು ಪ್ರಚಾರ ನಡೆಸಲಿದ್ದಾರೆ. ವಿಶೇಷವಾಗಿ ಅವರು ಕರಾವಳಿ ಮತ್ತು ಮಧ್ಯ ಕರ್ನಾಟಕದಲ್ಲಿ ಪಕ್ಷದ ಪರ ಪ್ರಚಾರ ನಡೆಸುವರು.

ಉಳಿದಂತೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ರಾಜ್ಯದ ಇತರೆ ಭಾಗಗಳಲ್ಲಿ ಪ್ರಚಾರ ನಡೆಸಿದರೆ, ನರೇಂದ್ರಮೋದಿ ಮತ್ತು ಅಮಿತ್ ಷಾ ಜೋಡಿ ಮೈಸೂರು ಕರ್ನಾಟಕ, ಬೆಂಗಳೂರು, ಕಲ್ಯಾಣ ಕರ್ನಾಟಕ ಮತ್ತು ಉತ್ತರ ಕರ್ನಾಟಕದಲ್ಲಿ ಪ್ರಚಾರಕ್ಕೆ ಧುಮುಕಲಿದ್ದಾರೆ ಎಂದು ಗೊತ್ತಾಗಿದೆ.

23 ಲಕ್ಷ ಹೋಟೆಲ್ ಬಿಲ್ ಪಾವತಿಸದೆ ಪರಾರಿಯಾದ ರಾಜಮನೆತನದ ಉದ್ಯೋಗಿ

ಕೇಂದ್ರ ಚುನಾವಣಾ ಆಯೋಗ ರಾಜ್ಯ ವಿಧಾನಸಭೆ ಚುನಾವಣೆಗೆ ದಿನಾಂಕ ಘೋಷಣೆ ಮಾಡುವ ಮೊದಲೇ ಬಿಜೆಪಿಯ ಘಟಾನುಘಟಿ ನಾಯಕರು ಒಂದು ಸುತ್ತಿನ ಪ್ರಚಾರ ನಡೆಸಲಿದ್ದಾರೆ.

ನಂತರ ಅಧಿಕೃತ ವೇಳಾಪಟ್ಟಿ ಹೊರಬಿದ್ದ ಬಳಿಕ ಸರಿಸುಮಾರು 30ರಿಂದ 40 ದಿನಗಳ ಕಾಲ ಇಲ್ಲೇ ಟಿಕ್ಕಾಣಿ ಹೂಡಲಿರುವ ಕೇಂದ್ರ ನಾಯಕರು ಪಕ್ಷದ ಪ್ರಚಾರ ನಡೆಸಲಿದ್ದಾರೆ ಎಂದು ತಿಳಿದುಬಂದಿದೆ.

Karnataka, BJP, Rath Yatra, campaigning, assembly elections,

Articles You Might Like

Share This Article