ಬೆಂಗಳೂರು,ಫೆ.25- ರಾಜ್ಯ ವಿಧಾನಸಭೆ ಚುನಾವಣೆಗೆ ದಿನಗಣನೆ ಆರಂಭವಾಗಿರುವಂತೆ ಈ ಬಾರಿ ಶತಾಯಗತಾಯ ಬಿಜೆಪಿಯನ್ನು ಅಧಿಕಾರಕ್ಕೆ ತರಲೇಬೇಕೆಂದು ತೀರ್ಮಾನಿಸಿರುವ ಪ್ರಧಾನಿ ನರೇಂದ್ರಮೋದಿ ರಾಜ್ಯಕ್ಕೆ ದಾಂಗುಡಿ ಇಡಲಿದ್ದಾರೆ.
ಫೆ.27ರಿಂದ ಎರಡು ವಾರಗಳ ಅವಧಿಯಲ್ಲಿ ಕರ್ನಾಟಕಕ್ಕೆ ವಿವಿಧ ಅಭಿವೃದ್ದಿ ಕಾಮಗಾರಿಗಳನ್ನು ಉದ್ಘಾಟನೆ ಮಾಡಲು ಅವರು ಆಗಮಿಸುತ್ತಿದ್ದು,ಬಿಜೆಪಿಗೆ ಮೋದಿ ಪ್ರವಾಸ ವರವಾಗಲಿದೆ ಎಂದು ಪಕ್ಷದ ನಾಯಕರು ನಿರೀಕ್ಷೆಯಲ್ಲಿದ್ದಾರೆ.
ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದಲ್ಲಿ ಸೋಮವಾರ ವಿಮಾನ ನಿಲ್ದಾಣವನ್ನು ಲೋಕಾರ್ಪಣೆ ಮಾಡಿದ ಮೋದಿ ಅವರು ನಂತರ ಕುಂದಾನಗರಿ ಬೆಳಗಾವಿಯಲ್ಲಿ ಭರ್ಜರಿ ರೋಡ್ ಶೋ ನಡೆಸಿ ಪಕ್ಷದ ಕಾರ್ಯಕರ್ತರಿಗೆ ಪ್ರೇರಣೆ ನೀಡಲಿದ್ದಾರೆ.
ಬಿಜೆಪಿ ಸರ್ಕಾರಕ್ಕೆ ಇನ್ನೆಷ್ಟು ಶಿಕ್ಷಕರ ಹೆಣ ಬೇಕು..? ” ಸಿದ್ದರಾಮಯ್ಯ ಆಕ್ರೋಶ
ಬಳಿಕ ಮಾ.11ರಂದು ಬಹುನಿರೀಕ್ಷಿತ ಬೆಂಗಳೂರು-ಮೈಸೂರು ಎಕ್ಸ್‍ಪ್ರೆಸ್ ಹೆದ್ದಾರಿ ಹಾಗೂ ಧಾರವಾಡದಲ್ಲಿ ಐಐಟಿ ಕೇಂದ್ರವನ್ನು ಲೋಕಾರ್ಪಣೆ ಮಾಡಲಿದ್ದಾರೆ. ಹೀಗೆ ಎರಡು ವಾರದ ಅವಧಿಯಲ್ಲಿ ಮೋದಿ ಅವರ ಕರ್ನಾಟಕ ಭೇಟಿ ಆಡಳಿತರೂಢ ಬಿಜೆಪಿಗೆ ಬಲ ನೀಡಲಿದೆ ಎಂದು ಹೇಳಲಾಗುತ್ತಿದೆ.
ಮೋದಿ ನಾಮಬಲದಿಂದಲೇ ಮತ್ತೊಮ್ಮೆ ಅಧಿಕಾರ ಹಿಡಿಯಲು ಶತ ಪ್ರಯತ್ನ ನಡೆಸುತ್ತಿರುವ ಬಿಜೆಪಿ ಚುನಾವಣೆಗೂ ಮುನ್ನವೇ ಅಭಿವೃದ್ಧಿ ಕಾರ್ಯಗಳ ಉದ್ಘಾಟನೆ ಮೂಲಕ ಚುನಾವಣಾ ಕಾವು ರಂಗೇರಿಸಲಿದೆ.
ವಿಮಾನ ನಿಲ್ದಾಣ ಉದ್ಘಾಟನೆ:
ಮಲೆನಾಡಿನ ತವರೂರು ಸಹ್ಯಾದ್ರಿ ಪರ್ವತದ ಹೆಬ್ಬಾಗಿಲು ಶಿವಮೊಗ್ಗದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ವಿಮಾನ ನಿಲ್ದಾಣವನ್ನು ಸೋಮವಾರ ಮೋದಿ ಅವರು ಸಾರ್ವಜನಿಕರ ಸೇವೆಗೆ ಸಮರ್ಪಿಸಲಿದ್ದಾರೆ.
ಶಿವಮೊಗ್ಗದ ಸೋಗಾನೆಯಲ್ಲಿ ನಿರ್ಮಿಸಿರುವ ಈ ವಿಮಾನ ನಿಲ್ದಾಣ ರಾಜ್ಯದಲ್ಲೇ 2ನೇ ಅತಿದೊಡ್ಡ ವಿಮಾನ ನಿಲ್ದಾಣ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಸುಮಾರು 650 ಕೋಟಿ ವೆಚ್ಚದಲ್ಲಿ ಅಂದಾಜು 650 ಎಕರೆ ಜಮೀನಿನಲ್ಲಿ ಈ ನಿಲ್ದಾಣವನ್ನು ನಿರ್ಮಿಸಿದ್ದು, ಶಿವಮೊಗ್ಗ, ಚಿಕ್ಕಮಗಳೂರು, ದಾವಣಗೆರೆ ಮತ್ತು ಚಿತ್ರದುರ್ಗ ಸೇರಿದಂತೆ ಅಕ್ಕಪಕ್ಕದ ಜಿಲ್ಲೆಗಳಲ್ಲಿ ವಾಣಿಜ್ಯ ವಹಿವಾಟು, ವ್ಯಾಪಾರ, ಕೈಗಾರಿಕೆಗಳ ಸ್ಥಾಪನೆ, ಬಂಡವಾಳ ಹೂಡಿಕೆ, ಉದ್ಯೋಗ ಸೃಷ್ಟಿಗೆ ಅನುಕೂಲವಾಗಲಿದೆ ಎಂದು ಹೇಳಲಾಗುತ್ತಿದೆ.
ಸೋಮವಾರ ನವದೆಹಲಿಯಿಂದ ವಿಶೇಷ ವಿಮಾನದಲ್ಲಿ ಶಿವಮೊಗ್ಗಕ್ಕೆ ಆಗಮಿಸುವ ಮೋದಿಯವರು ಲೋಕಾರ್ಪಣೆ ಜೊತೆಗೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡುವರು. ಇದು ಬಿಜೆಪಿಯ ಶಕ್ತಿ ಪ್ರದರ್ಶನ ಹೇಳಲಾಗುತ್ತಿದ್ದು, ಅಂದಾಜು 2 ಲಕ್ಷಕ್ಕೂ ಹೆಚ್ಚು ಕಾರ್ಯಕರ್ತರನ್ನು ಸೇರಿಸಲು ಕಮಲದ ಪಡೆ ಸಜ್ಜಾಗಿದೆ.
ಬೆಳಗಾವಿಯಲ್ಲಿ ರೋಡ್ ಶೋ:
ಶಿವಮೊಗ್ಗ ಕಾರ್ಯಕ್ರಮ ಮುಗಿದ ಬಳಿಕ ಬೆಳಗಾವಿಗೆ ಆಗಮಿಸಲಿರುವ ಮೋದಿ ಸುಮಾರು 8 ಕಿ.ಮೀವರೆಗೂ ರ್ಯಾಲಿ ನಡೆಸಿ ಚುನಾವಣೆಗೆ ಕಹಳೆ ಮೊಳಗಿಸಲಿದ್ದಾರೆ. ಅಶೋಕ ವೃತ್ತದಿಂದ ಆರಂಭಗೊಂಡು ಸಂಗೊಳ್ಳಿ ರಾಯಣ್ಣ ವೃತ್ತ, ಚನ್ನಮ್ಮ ವೃತ್ತ, ಕಾಲೇಜು ರಸ್ತೆ, ಧರ್ಮವೀರ ಸಂಭಾಜಿ ವೃತ್ತ, ಬಸವೇಶ್ವರ ವೃತ್ತದ ಮೂಲಕ ಬೆಳಗಾವಿ ಉತ್ತರ ಮತ್ತು ದಕ್ಷಿಣ ಕ್ಷೇತ್ರಗಳೆರಡರಲ್ಲೂ ಸುಮಾರು 5 ರಿಂದ 6 ಕಿಮೀ ರೋಡ್ ಶೋ ನಡೆಯಲಿದೆ.
ಸರಕಾರಿ ಯೋಜನೆಗಳ ಲೋಕಾರ್ಪಣೆ ಜತೆಗೆ ರೋಡ್ ಶೋ ನಡೆಸಿ ರಾಜ್ಯ ವಿಧಾನಸಭೆ ಚುನಾವಣೆ ಕಾವು ಹೆಚ್ಚಿಸಲಿದ್ದಾರೆ. ಪ್ರಧಾನಿ ಪಟ್ಟಕ್ಕೇರಿದ ನಂತರ ಮೂರನೇ ಬಾರಿಗೆ ನರೇಂದ್ರ ಮೋದಿ ಬೆಳಗಾವಿ ಜಿಲ್ಲೆಗೆ ಆಗಮಿಸುತ್ತಿದ್ದಾರೆ.
ಈ ವೇಳೆ ಕೇಂದ್ರ ಮತ್ತು ರಾಜ್ಯ ಸರಕಾರಗಳ ಅನುದಾನ ಅಡಿಯಲ್ಲಿ ನಿರ್ಮಾಣಗೊಂಡಿರುವ ವಿವಿಧ ಯೋಜನೆ ಮತ್ತು ಕಾಮಗಾರಿಗಳನ್ನು ಲೋಕಾರ್ಪಣೆಗೊಳಿಸಲಿದ್ದಾರೆ. ಹಳೇ ಪಿಬಿ ರಸ್ತೆಯ ಬಿ.ಎಸ್.ಯಡಿಯೂರಪ್ಪ ಮಾರ್ಗದ ಮಾಲಿನಿ ಸಿಟಿ ಪ್ರದೇಶದಲ್ಲಿ ವೇದಿಕೆ ಕಾರ್ಯಕ್ರಮ ನಡೆಯಲಿದೆ.
ಮಾದಕ ವ್ಯಸನದಿಂದ ದೂರವಿರುವಂತೆ ಕಾಂಗ್ರೆಸ್ ಸದಸ್ಯರಿಗೆ ಸೂಚನೆ
ಬೆಳಗಾವಿ ನಗರ ಪ್ರವೇಶ ದ್ವಾರದಂತಿರುವ ಅಶೋಕ ವೃತ್ತದಿಂದ ಆರಂಭಗೊಂಡು ಸಂಗೊಳ್ಳಿ ರಾಯಣ್ಣ ವೃತ್ತ, ಚನ್ನಮ್ಮ ವೃತ್ತ, ಕಾಲೇಜು ರಸ್ತೆ, ಧರ್ಮವೀರ ಸಂಭಾಜಿ ವೃತ್ತ, ಬಸವೇಶ್ವರ ವೃತ್ತದ ಮೂಲಕ ಬೆಳಗಾವಿ ಉತ್ತರ ಮತ್ತು ದಕ್ಷಿಣ ಕ್ಷೇತ್ರಗಳೆರಡರಲ್ಲೂ ಸುಮಾರು 5 ರಿಂದ 6 ಕಿಮೀ ರೋಡ್ ಶೋ ಆಯೋಜಿಸಲು ಬಿಜೆಪಿ ಉದ್ದೇಶಿಸಿದೆ.
ಪ್ರಧಾನಿ ಮೋದಿ ಬೆಳಗಾವಿ ಭೇಟಿ ಸಂಪೂರ್ಣವಾಗಿ ಸರಕಾರಿ ಕಾರ್ಯಕ್ರಮವಾಗಿದ್ದರೂ ಇದೇ ಅವಕಾಶವನ್ನು ರಾಜಕೀಯಕ್ಕೂ ಬಳಸಿಕೊಳ್ಳಲು ಮುಂದಾಗಿರುವ ಜಿಲ್ಲೆಯ ಬಿಜೆಪಿ ನಾಯಕರು 18 ವಿಧಾನಸಭಾ ಕ್ಷೇತ್ರಗಳಿಂದ 2 ಲಕ್ಷಕ್ಕೂ ಅಕ ಕಾರ್ಯಕರ್ತರನ್ನು ಕಾರ್ಯಕ್ರಮಕ್ಕೆ ಕರೆತರುವ ಯೋಜನೆ ರೂಪಿಸಿಕೊಂಡಿದ್ದಾರೆ.
ಬಿಡದಿಯಿಂದ ಮದ್ದೂರಿಗೆ ರೋಡ್ ಶೋ:
ಮಾರ್ಚ್ 11ರಂದು ಪುನಃ ಬೆಂಗಳೂರಿಗೆ ಆಗಮಿಸಲಿರುವ ಮೋದಿ ಅವರು ಬೆಂಗಳೂರು ಹಾಗೂ ಮೈಸೂರು ನಡುವೆ ನಿರ್ಮಾಣಗೊಂಡಿರುವ ಎಕ್ಸ್‍ಪ್ರೆಸ್ ಹೈವೇಯನ್ನು ಸಾರ್ವಜನಿಕರಿಗೆ ಸಮರ್ಪಿಸುವರು.
ಬಿಡದಿಯಲ್ಲಿ ಉದ್ಘಾಟನೆಗೊಂಡ ಬಳಿಕ ಅಲ್ಲಿಂದ ಮಂಡ್ಯ ಜಿಲ್ಲೆ ಮದ್ದೂರುವರೆಗೆ ಭರ್ಜರಿ ರೋಡ್ ಶೋ ನಡೆಸಲಿದ್ದಾರೆ. ಹಳೇ ಮೈಸೂರಿನಲ್ಲಿ ಶತಾಯ-ಗತಾಯ ಒಂದಿಷ್ಟು ಸ್ಥಾನಗಳನ್ನು ಗೆಲ್ಲಲ್ಲು ರಣತಂತ್ರ ರೂಪಿಸಿರುವ ಬಿಜೆಪಿ ಮೋದಿ ರೋಡ್ ಶೋನಿಂದ ಹಳೆ ಮೈಸೂರು ಭಾಗದಲ್ಲಿ ಎರಡಂಕಿ ದಾಟುವ ಲೆಕ್ಕಾಚಾರದಲ್ಲಿದೆ.
ಬಿಜೆಪಿ ಸರ್ಕಾರಕ್ಕೆ ಇನ್ನೆಷ್ಟು ಶಿಕ್ಷಕರ ಹೆಣ ಬೇಕು..? ” ಸಿದ್ದರಾಮಯ್ಯ ಆಕ್ರೋಶ
ಮದ್ದೂರುವರೆಗೂ ರೋಡ್ ಶೋ ನಡೆದ ಬಳಿಕ ಗೆಜ್ಜಲಗೆರೆಯಲ್ಲಿ ಬೃಹತ್ ಕಾರ್ಯಕರ್ತರ ಸಮಾವೇಶ ನಡೆಯಲಿದೆ. ಅಂದಾಜು 2 ಲಕ್ಷ ಕಾರ್ಯಕರ್ತರನ್ನು ಕರೆತರುವ ಲೆಕ್ಕಾಚಾರದಲ್ಲಿ ಬಿಜೆಪಿಯಿದೆ. ಮದ್ದೂರು ಕಾರ್ಯಕ್ರಮ ಮುಗಿದ ಬಳಿಕ ಧಾರವಾಡದಲ್ಲಿ ಐಐಟಿ ಕೇಂದ್ರವನ್ನು ಉದ್ಘಾಟಿಸಲಿದ್ದಾರೆ.
ಹೀಗೆ ಒಂದಿಲ್ಲೊಂದು ಅಭಿವೃದ್ಧಿ ಕಾರ್ಯಗಳಿಗೆ ಮೋದಿಯಿಂದಲೇ ಚಾಲನೆ ಕೊಡಿಸಿ ಚುನಾವಣೆ ರಂಗೇರುವಂತೆ ಮಾಡಲು ಬಿಜೆಪಿ ಮುಂದಾಗಿದೆ.