ರಾಜ್ಯಕ್ಕೆ ಬಂದ ರಾಹುಲ್ ಯಾತ್ರೆಗೆ ಬಿಜೆಪಿಯಿಂದ ಟ್ವೀಟ್ ಟಾಂಗ್ ಸ್ವಾಗತ

Social Share

ಬೆಂಗಳೂರು,ಸೆ.30- ಕಾಂಗ್ರೆಸ್ ಯುವಕ ನಾಯಕ ರಾಹುಲ್ ಗಾಂಧಿ ನಡೆಸುತ್ತಿರುವುದು ಭಾರತ್ ಜೋಡೋ ಯಾತ್ರೆಯಲ್ಲ. ಎಐಸಿಸಿ ಮುಂದಿನ ಅಧ್ಯಕ್ಷ ಸ್ಥಾನವನ್ನು ನಕಲಿ ಗಾಂಧಿಗಳ ಕುಟುಂಬದಲ್ಲೇ ಇರಿಸಿಕೊಳ್ಳಲು ಮತ್ತು ನಿಯಂತ್ರಿಸಲು ನಡೆಸುತ್ತಿರುವ ಕಸರತ್ತು ಎಂದು ರಾಜ್ಯ ಬಿಜೆಪಿ ಘಟಕ ವ್ಯಂಗ್ಯವಾಡಿದೆ. ಈ ಕುರಿತು ಸರಣಿ ಟ್ವೀಟ್ ಮಾಡಿರುವ ಬಿಜೆಪಿ ಮಾನ್ಯ ರಾಹುಲ್ ಗಾಂಯವರೇ ಅಪರಾಧ ಪ್ರಮಾಣ ಕಡಿಮೆ ಇರುವ ಕರ್ನಾಟಕಕ್ಕೆ ಸ್ವಾಗತ. ನಿಮ್ಮ ಶಾಂತಿಯ ಮಂತ್ರ ಕರುನಾಡಿಗೆ ಅಗತ್ಯವಿಲ್ಲ ಎಂದು ತಿರುಗೇಟು ನೀಡಿದೆ.

ಎನ್‍ಸಿಆರ್‍ಬಿ ವರದಿ ಪ್ರಕಾರ ಅಪರಾಧ ಸೂಚ್ಯಂಕ ತಮಿಳುನಾಡು 422-1, ಕೇರಳ 401ಕ್ಕೆ 4, ರಾಜಸ್ಥಾನ 269ಕ್ಕೆ 6, ಕರ್ನಾಟಕ 172ಕ್ಕೆ 8 ಎಂದು ಅಂಕಿಅಂಶಗಳ ಸಮೇತ ತಿರುಗೇಟು ಕೊಟ್ಟಿದೆ.

ರಾಹುಲ್ ಗಾಂಧಿಯವರೇ ದಲಿತರಿಗೆ ಸುರಕ್ಷಿತವಾಗಿರುವ ಕರ್ನಾಟಕಕ್ಕೆ ಸ್ವಾಗತ ಎಂದು ಮತ್ತೊಂದು ಟ್ವೀಟ್ ಮಾಡಿರುವ ಬಿಜೆಪಿ, ಕಾಂಗ್ರೆಸ್ ಆಡಳಿತವಿರುವ ರಾಜಸ್ಥಾನದಲ್ಲಿ ದಲಿತರಿಗೆ ರಕ್ಷಣೆ ನೀಡಿ. ರಾಜಸ್ಥಾನದಲ್ಲಿ 476 ಅತ್ಯಾಚಾರ ಮತ್ತು ಅಪರಾಧ ಪ್ರಕರಣಗಳು ದಾಖಲಾಗಿದ್ದರೆ, ಕರ್ನಾಟಕದಲ್ಲಿ 124 ಪ್ರಕರಣಗಳು ಇವೆ ಎಂದು ಹೇಳಿದೆ.

ಪರಿಶಿಷ್ಟ ಪಂಗಡದ ಸಮುದಾಯ ಸುರಕ್ಷಿತವಾಗಿರುವ ಕರುನಾಡಿಗೆ ಆಗಮಿಸುತ್ತಿರುವ ನಿಮಗೆ ಸ್ವಾಗತ. ರಾಜಸ್ಥಾನದಲ್ಲಿ ಈ ಸಮುದಾಯದ ಮೇಲೆ 119 ಪ್ರಕರಣಗಳು ದಾಖಲಾಗಿದ್ದರೆ ಕರ್ನಾಟಕದಲ್ಲಿ 29 ಇದೆ ಎಂದು ಅಂಕಿಅಂಶಗಳ ದಾಖಲೆಯ ವಿವರ ಮೂಲಕ ರಾಹುಲ್ ಗಾಂಧಿಗೆ ಠಕ್ಕರ್ ಕೊಟ್ಟಿದೆ.

Articles You Might Like

Share This Article