ಬಜೆಟ್ ಹೈಲೈಟ್ಸ್ :
# ಒಟ್ಟು 2.65 ಲಕ್ಷ ಕೋಟಿ ಗಾತ್ರದ ಬಜೆಟ್ ಮಂಡಿಸಿದ ಸಿಎಂ ಬೊಮ್ಮಾಯಿ
# ಕಟ್ಟಡ ಕಾರ್ಮಿಕರಿಗೆ ರಿಯಾಯ್ತಿ ಬಸ್ ಪಾಸ್, ಯೆಲ್ಲೋಬೋರ್ಡ್ ಚಾಲಕರ ಮಕ್ಕಳಿಗೆ ವಿದ್ಯಾನಿಧಿ
# ಬಜೆಟ್‍ನಲ್ಲಿ ಬೆಂಗಳೂರಿಗೆ ಮಹತ್ವದ ಘೋಷಣೆ ಮಾಡಿದ ಸಿಎಂ ಬೊಮ್ಮಾಯಿ
# ಸರ್ಕಾರಿ ನೌಕರರಿಗೆ ಸಪ್ಪೆಯಾದ ಬೊಮ್ಮಾಯಿ ಬಜೆಟ್
# ಬಜೆಟ್ ಹೈಲೈಟ್ : ಆ್ಯಸಿಡ್ ದಾಳಿಗೆ ಒಳಗಾದವರ ಪಿಂಚಣಿ ಮೊತ್ತ ಹೆಚ್ಚಳ
# ಬಜೆಟ್ ಹೈಲೈಟ್ : ಎಲ್ಲಾ ಜಿಲ್ಲೆಗಳಲ್ಲಿ ಮಿನಿ ಆಹಾರ ಪಾರ್ಕ್ ಸ್ಥಾಪನೆ
# 500 ಕೋಟಿ ರೂ. ವೆಚ್ಚದ ‘ರೈತ ಶಕ್ತಿ’ ಯೋಜನೆ ಘೋಷಣೆ
# ಯಲಹಂಕ ಬಳಿ ಅಟಲ್ ಬಿಹಾರಿ ವಾಜಪೇಯಿ ಉದ್ಯಾನವನ
# ದಾಖಲೆಗಳ ಡಿಜಟಲೀಕರಣಕ್ಕೆ 15 ಕೋಟಿ ರೂ. ಅನುದಾನ
# ಪತ್ರಿಕೋದ್ಯಮ ಉತ್ತೇಜನಕ್ಕೆ ಹೊಸ ಯೋಜನೆ
ಬೆಂಗಳೂರು, ಮಾ.4- ಪತ್ರಿಕೋದ್ಯಮವನ್ನು ಉತ್ತೇಜಿಸಲು ಮತ್ತು ಪ್ರಾದೇಶಿಕ ಪತ್ರಿಕೆಗಳನ್ನು ಸದೃಢಗೊಳಿಸಲು ಹೊಸ ಯೋಜನೆಯನ್ನು ರೂಪಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಹಣಕಾಸು ಸಚಿವರಾದ ಮುಖ್ಯಮಂತ್ರಿಗಳು 2022-23ನೆ ಸಾಲಿನ ಆಯವ್ಯಯ ಮಂಡಿಸಿ, ಪತ್ರಿಕೋದ್ಯಮವನ್ನು ಉತ್ತೇಜಿಸಲು ನಿಯಮಿತವಾಗಿ 8 ಪುಟಗಳಲ್ಲಿ ಪ್ರಕಟಗೊಳ್ಳುವ ಪ್ರಾದೇಶಿಕ ಪತ್ರಿಕೆಗಳಿಗೆ ಪ್ರೋತ್ಸಾಹ ನೀಡಲಾಗುವುದು. 20 ಸಾವಿರಕ್ಕೂ ಹೆಚ್ಚು ಪ್ರಸಾರ ಹೊಂದಿದ ವರ್ಣ ಪುಟಗಳಲ್ಲಿ ಪ್ರಕಟಗೊಳ್ಳುವ ಪ್ರಾದೇಶಿಕ ಪತ್ರಿಕೆಗಳನ್ನು ಸದೃಢಗೊಳಿಸಲು ಹೊಸ ಯೋಜನೆ ರೂಪಿಸಲಾಗುವುದು ಎಂದು ಹೇಳಿದರು.
# ಬಜೆಟ್ ಗೂ ಮುನ್ನ ಸಿಎಂ ಟೆಂಪಲ್ ರನ್
ಇಂದು ತಮ್ಮ ಚೊಚ್ಚಲ ಬಜೆಟ್ ಮಂಡನೆ ಮಾಡಲಿರುವ ಮುಖ್ಯಮಂತ್ರಿ ಒಮ್ಮಾಯಿ ಶ್ರೀಕಂಠೇಶ್ವರ ದೇವಸ್ಥಾನದಲ್ಲಿ ಇಂದು ವಿಶೇಷ ಪೂಜೆ ಸಲ್ಲಿಸಿದರು. ಸಮಸ್ತ ಕರ್ನಾಟಕದ ಜನತೆ ಹೆಸರಿನಲ್ಲಿ ಅರ್ಚನೆ ಮಾಡಿಸಿದ ಸಿಎಂ ಬೊಮ್ಮಾಯಿ, ರಾಜ್ಯದ ಜನತೆಗೆ ಸುಖ ಶಾಂತಿ ನೆಮ್ಮದಿಯನ್ನು ಕರುಣಿಸಲೆಂದು ದೇವರಲ್ಲಿ ಪ್ರಾರ್ಥನೆ ಮಾಡಿದರು .
