ಆದಾಯ ಕ್ರೋಢೀಕರಣಕ್ಕೆ ಸಿಎಂ ಬೊಮ್ಮಾಯಿ ಆದ್ಯತೆ

Social Share

ಬೆಂಗಳೂರು,ಫೆ.7- ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಈ ಬಾರಿ ಜನಪ್ರಿಯ ಬಜೆಟ್ ಮಂಡನೆಗೆ ತಯಾರಿ ನಡೆಸಿರುವುದರ ಜೊತೆಗೆ ಹೆಚ್ಚಿನ ಆದಾಯ ಕ್ರೋಢೀಕರಣಕ್ಕಾಗಿ ವಿವಿಧ ರಾಜಸ್ವ ಜಮೆಗಳ ಮೇಲೆ ಕಣ್ಣಿಟ್ಟಿದ್ದಾರೆ.

ಈಗಾಗಲೇ ಸ್ವತಃ ಅವರೇ ಹೇಳಿರು ವಂತೆ ಮುಂದಿನ ಚುನಾವಣೆಯಲ್ಲಿ ಅನುಕೂಲವಾಗುವಂತೆ ಜನಪ್ರಿಯ ಘೋಷಣೆ ಗಳೊಂದಿಗೆ ಬಜೆಟ್ ಮಂಡಿಸುವುದು ಬಹುತೇಕ ಖಚಿತ. ಹೀಗಾಗಿ ಈ ಬಾರಿಯ ಅಯವ್ಯಯದಲ್ಲಿ ದೊಡ್ಡ ಪ್ರಮಾಣದ ರಾಜಸ್ವ ವೆಚ್ಚ ಇರುವ ಕಾರಣ ಹೆಚ್ಚಿನ ರಾಜಸ್ವ ಜಮೆಗಳತ್ತ ಸಿಎಂ ಬೊಮ್ಮಾಯಿ ಗಮನ ಹರಿಸಿದ್ದಾರೆ.

ಈ ಬಾರಿ ಹೆಚ್ಚಿನ ಪ್ರಮಾಣದಲ್ಲಿ ರಾಜ್ಯ ಸ್ವಂತ ತೆರಿಗೆಗಳನ್ನು ಸಂಗ್ರಹಿಸುವ ಬಗ್ಗೆ ಬಜೆಟ್ ಪೂರ್ವ ಸಿದ್ದತಾ ಸಭೆಯಲ್ಲಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಕೋವಿಡ್ ಪರಿಣಾಮ ರಾಜಸ್ವ ಸಂಗ್ರಹದಲ್ಲಿ ತಕ್ಷಣ ಚೇತರಿಕೆ ಕಷ್ಟ ಎಂಬುದು ಸಿಎಂ ಬೊಮ್ಮಾಯಿಗೆ ಅರಿವಾಗಿದೆ.

ಮದ್ರಾಸ್ ಹೈಕೋರ್ಟ್ ಹೆಚ್ಚುವರಿ ನ್ಯಾಯಮೂರ್ತಿಯಾಗಿ ಗೌರಿ ಪ್ರಮಾಣ ವಚನ

ಆದರೂ ಗರಿಷ್ಠ ಪ್ರಮಾಣದಲ್ಲಿ ತೆರಿಗೆ ಸಂಗ್ರಹಿಸುವ ಗುರಿ ಹೊಂದಿದ್ದಾರೆ. 2023-24ರಲ್ಲಿ ಸುಮಾರು 1,99,019 ಕೋಟಿ ರಾಜಸ್ವ ಜಮೆಯ ಅಂದಾಜು ಮಾಡಲಾಗಿದೆ ಎಂದು ಆರ್ಥಿಕ ಇಲಾಖೆ ಅಕಾರಿಯೊಬ್ಬರು ತಿಳಿಸಿದ್ದಾರೆ.

ಇದರಲ್ಲಿ ರಾಜಸ್ವ ಸ್ವಂತ ತೆರಿಗೆ ರೂಪದಲ್ಲಿ 1,40,067 ಕೋಟಿ ಸಂಗ್ರಹಿಸುವ ಅಂದಾಜು ಮಾಡಲಾಗಿದ್ದು, ಇನ್ನೂ ಹೆಚ್ಚಿನ ಸಂಗ್ರಹದ ಗುರಿ ಇಡಲಾಗಿದೆ. 2023-24ರಲ್ಲಿ ಜಿಎಸ್ಟಿ ಸಂಗ್ರಹದಲ್ಲಿ ಶೇ 8 ರಿಂದ 10 ರಷ್ಟು ವೃದ್ಧಿ ಕಾಣುವ ನಿರೀಕ್ಷೆ ಇದೆ. ಇನ್ನು ಮಾರಾಟ ತೆರಿಗೆಯಲ್ಲಿ ಸುಮಾರು ಶೇ 8 ರಷ್ಟು ಬೆಳವಣಿಗೆಯಾಗುವ ಅಂದಾಜು ಇರಿಸಲಾಗಿದೆ.

ಈಗಾಗಾಲೇ ಅಬಕಾರಿಯ ಪರಿಷ್ಕರಣಾ ದರ ಗರಿಷ್ಠ ಮಟ್ಟ ತಲುಪಿರುವುದರಿಂದ ಮುಂದಿನ ವರ್ಷ ಕನಿಷ್ಠ ಶೇ 1 ಅಬಕಾರಿ ಸುಂಕದ ಸಂಗ್ರಹದ ಬೆಳವಣಿಗೆಯ ಅಂದಾಜು ಮಾಡಲಾಗುತ್ತಿದೆ ಎಂದು ಆರ್ಥಿಕ ಇಲಾಖೆ ಮಾಹಿತಿ ನೀಡಿದೆ.

ಇತ್ತ ನೋಂದಣಿ ತೆರಿಗೆ ಸಂಗ್ರಹದಲ್ಲಿ ಶೇ.10 ವೃದ್ಧಿ ಕಾಣುವ ಗುರಿ ಹೊಂದಲಾಗಿದ್ದರೆ, ಮೋಟಾರು ವಾಹನ ತೆರಿಗೆಯಲ್ಲಿ ಮುಂದಿನ ವರ್ಷ ಶೇ.5 ಬೆಳವಣಿಗೆಯಾಗುವ ನಿರೀಕ್ಷೆ ಇರಿಸಲಾಗಿದೆ. ಇನ್ನು ತೆರಿಗೆಯೇತರ ರಾಜಸ್ವ ಪೈಕಿ ಗಣಿಗಾರಿಕೆಯ ಸಂಗ್ರಹ ಶೇ.12ರಷ್ಟು ವೃದ್ಧಿಯಾಗುವ ನಿರೀಕ್ಷೆ ಇಡಲಾಗಿದೆ ಎಂದು ಹೇಳಲಾಗಿದೆ.

ಬಜೆಟ್ಗಾಗಿ ಕೇಂದ್ರ ಸರ್ಕಾರ ಕೊಡಮಾಡುವ ಅನುದಾನ, ಹಣಕಾಸು ನೆರವಿನತ್ತ ಹೆಚ್ಚಿನ ಗಮನಹರಿಸಿದೆ. ಆ ಮೂಲಕ ಬಜೆಟ್ ಹೊರೆ ಕಡಿಮೆ ಮಾಡುವ ನಿರೀಕ್ಷೆ ಇಟ್ಟಿದೆ. ಚುನಾವಣೆ ವರ್ಷವಾಗಿರುವುದರಿಂದ ಜನರ ಮೇಲೆ ಹೊರೆ ಹಾಕುವಂತಿಲ್ಲ. ಹೀಗಾಗಿ ರಾಜ್ಯ ಮಟ್ಟದಲ್ಲೇ ಅತಿ ಹೆಚ್ಚು ಆದಾಯ ಸಂಗ್ರಹಿಸುವುದು ಕಷ್ಟ ಸಾಧ್ಯವಾಗಲಿದೆ. ಈ ಬಾರಿ ಕೇಂದ್ರ ಬಜೆಟ್‍ನಲ್ಲಿ ರಾಜ್ಯ ನಿರೀಕ್ಷಿಸಿದಷ್ಟು ಕೊಟ್ಟಿಲ್ಲವಾದರೂ ತೀರಾ ನಿರಾಶೆಯಾಗುವಂಥ ಪರಿಸ್ಥಿತಿಯೂ ಇಲ್ಲ.

15ನೇ ಹಣಕಾಸು ಆಯೋಗದ ವರದಿಯಂತೆ ಕರ್ನಾಟಕಕ್ಕೆ ಅಂದಾಜು 37,252 ಕೋಟಿ ರೂ. ಕೇಂದ್ರದ ತೆರಿಗೆ ಪಾಲು ಬರಲಿದೆ. ಕಳೆದ ವರ್ಷ ರಾಜ್ಯಕ್ಕೆ 29,783 ಕೋಟಿ ರೂ. ಕೇಂದ್ರದ ತೆರಿಗೆ ಪಾಲು ನಿಗದಿ ಮಾಡಲಾಗಿತ್ತು.ಪರಿಷ್ಕರಣೆ ಬಳಿಕ ಅದು 34,596 ಕೋಟಿ ರೂ.ಗೆ ಏರಿಕೆಯಾಗಿದೆ.

ಇನ್ನು, 2023-24 ಸಾಲಿನಲ್ಲಿ ಅದು 37,252 ಕೋಟಿ ರೂ. ಬರುವ ಅಂದಾಜು ಮಾಡಲಾಗಿದೆ. ಇದು ಸಿಎಂ ಬೊಮ್ಮಾಯಿ ನಿಟ್ಟುಸಿರು ಬಿಡುವಂತಾಗಿದೆ.2021-22ರಲ್ಲಿ ಜಿಎಸ್ ಟಿ ಪರಿಹಾರ ನೀಡುವಿಕೆ ಕೊನೆಗೊಂಡಿದೆ. ಆದರೆ ಇನ್ನು ಕೇಂದ್ರದಿಂದ ರಾಜ್ಯಕ್ಕೆ 12,000 ಕೋಟಿ ರೂ. ಜಿಎಸ್ಟಿ ಪರಿಹಾರ ರೂಪದಲ್ಲಿ ಹಣ ಬಾಕಿ ಉಳಿದು ಕೊಂಡಿದೆ. ಈ ಹಣದ ಮೇಲೆ ಸಿಎಂ ಬೊಮ್ಮಾಯಿ ಹೆಚ್ಚಿನ ನಿರೀಕ್ಷೆ ಇಟ್ಟಿದ್ದಾರೆ.

ಭೂಕಂಪ ಪೀಡಿತ ಟರ್ಕಿಗೆ ಸಹಾಯಹಸ್ತ ಚಾಚಿದ ಭಾರತ

2023-24ರಲ್ಲಿ ಜಿಎಸ್‍ಟಿ ಪರಿಹಾರವಾಗಿ 4,000 ಕೋಟಿ ರೂ. ಮತ್ತು ಮುಂದಿನ ವರ್ಷಗಳಲ್ಲಿ ತಲಾ 2,000 ಕೋಟಿ ರೂ.ನಂತೆ ನಿರೀಕ್ಷೆ ಇರಿಸಲಾಗಿದೆ. ಈ ಪರಿಹಾರ ಮೊತ್ತವನ್ನು ಆದಷ್ಟು ಬೇಗ ಪಾವತಿಸುವಂತೆ ಕೇಂದ್ರದ ಮೇಲೆ ಒತ್ತಡ ಹೇರಲಿದ್ದಾರೆ ಎಂದು ಆರ್ಥಿಕ ಇಲಾಖೆ ತಿಳಿಸಿದೆ.

ಭೂಕಂಪಕ್ಕೆ 5,000 ಮಂದಿ ಬಲಿ, ಟರ್ಕಿ, ಸಿರಿಯಾಗೆ ಜಾಗತಿಕ ಸಹಾಯಹಸ್ತ

ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರ ಸರ್ಕಾರ ಸುಮಾರು 5,000 ಕೋಟಿ ರೂ. ಹಣ ನೀಡಿರುವುದು ಸಿಎಂ ಬೊಮ್ಮಾಯಿ ಭಾರವನ್ನು ಕಡಿಮೆ ಮಾಡಿದೆ. ಇನ್ನು ರೈಲ್ವೇ ಯೋಜನಗಳಿಗೆ ರಾಜ್ಯಕ್ಕೆ ಕೇಂದ್ರ ಸರ್ಕಾರ ಬಜೆಟ್ನಲ್ಲಿ ಹೆಚ್ಚಿನ ಅನುದಾನ ಕಲ್ಪಿಸಿರುವುದು ರಾಜ್ಯ ಬಿಜೆಪಿ ಸರ್ಕಾರಕ್ಕೆ ಖುಷಿ ತಂದಿದೆ. ಜೊತೆಗೆ ಕೇಂದ್ರ ಬಜೆಟ್‍ನಲ್ಲಿ 50 ವರ್ಷ ಅವಯ ಬಡ್ಡಿ ರಹಿತ ಸಾಲ ನೀಡುವುದನ್ನು ಒಂದು ವರ್ಷಕ್ಕೆ ವಿಸ್ತರಿಸಿದೆ. ಇದು ಬಿಜೆಪಿ ಸರ್ಕಾರಕ್ಕೆ ಹೆಚ್ಚಿನ ಹಣಕಾಸು ಹೊಂದಿಸಲು ಅನುಕೂಲ ಮಾಡಿಕೊಡಲಿದೆ.

Karnataka, budget, likely, presented, February 17, CM Bommai,

Articles You Might Like

Share This Article