ಮತ್ತೆ ಮುನ್ನಲೆಗೆ ಬಂದ ಸಂಪುಟ ವಿಸ್ತರಣೆ ಚರ್ಚೆ : 6 ಮಂದಿಗೆ ಕೋಕ್ ?

Social Share

ಬೆಂಗಳೂರು,ಡಿ.12- ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಪಕ್ಷವನ್ನು ಬಲಪಡಿಸುವ ನಿಟ್ಟಿನಲ್ಲಿ ನೆನೆಗುದಿಗೆ ಬಿದ್ದಿದ್ದ ಬಹುನಿರೀಕ್ಷಿತ ಸಚಿವ ಸಂಪುಟ ಪುನಾರಚನೆ/ವಿಸ್ತರಣೆ ಮತ್ತೆ ಮುನ್ನಲೆಗೆ ಬಂದಿದೆ.

ಕರ್ನಾಟಕ ಮತ್ತು ಮಹಾರಾಷ್ಟ್ರ ಗಡಿ ವಿವಾದ ಕುರಿತಂತೆ ಡಿ.14ರಂದು ನವದೆಹಲಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರನ್ನು ಭೇಟಿಯಾದ ವೇಳೆ ಪ್ರಸಕ್ತ ರಾಜಕೀಯ ವಿದ್ಯಮಾನಗಳ ಕುರಿತು ಚರ್ಚೆ ನಡೆಸಲಿದ್ದಾರೆ.

ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಾಟೀಲ್ ಅವರ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ತೆರಳಿರುವ ಬೊಮ್ಮಾಯಿ ಅವರು ಅಮಿತ್ ಷಾ ಅವರ ಜೊತೆ ಮಾತುಕತೆ ನಡೆಸಲು ಸಮಯವನ್ನು ಕೋರಿದ್ದಾರೆ.

ಒಂದು ವೇಳೆ ಅಮಿತ್ ಷಾ ಬೊಮ್ಮಾಯಿ ಮತ್ತು ಯಡಿಯೂರಪ್ಪ ಅವರು ಪ್ರತ್ಯೇಕವಾಗಿ ಮಾತುಕತೆ ನಡೆಸಿದರೆ ಬಹುತೇಕವಾಗಿ ಸಚಿವ ಸಂಪುಟ ವಿಸ್ತರಣೆ ಇಲ್ಲವೇ ಪುನಾಚರಣೆ ಮುಹೂರ್ತ ನಿಗದಿಯಾಗಲಿದೆ ಎಂದು ಹೇಳಲಾಗಿದೆ.

ಸಿದ್ದು ದಲಿತ ಪ್ರೀತಿ ನಾಟಕ: ಬಿಜೆಪಿ ಕಿಡಿ

ಮೂಲಗಳ ಪ್ರಕಾರ ಕಳೆದ ಶುಕ್ರವಾರ ಆರ್‍ಎಸ್‍ಎಸ್ ಮುಖ್ಯಸ್ಥರಾದ ದತ್ತಾತ್ರೇಯ ಹೊಸಬಾಳೆ ಮತ್ತು ಮುಕುಂದ್ ಅವರನ್ನು ಬೊಮ್ಮಾಯಿ ಅವರು ಭೇಟಿಯಾದ ವೇಳೆ ಸಂಪುಟ ವಿಸ್ತರಣೆ ಅಥವಾ ಪುನಾರಚನೆ ಕುರಿತಾಗಿ ಮಾತುಕತೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡ ಹಾಗೂ ಅಮಿತ್ ಷಾ ಅವರ ಜೊತೆ ಮಾತುಕತೆ ನಡೆಸಿದ ಬಳಿಕ ಸೂಕ್ತ ನಿರ್ಧಾರ ತೆಗೆದುಕೊಳ್ಳುವಂತೆ ಸಲಹೆ ನೀಡಿದ್ದಾರೆ. ಎಲ್ಲವೂ ನಿರೀಕ್ಷೆಯಂತೆ ನಡೆದರೆ 14ರ ನಂತರ ಪುನಾರಚನೆ ಇಲ್ಲವೇ ವಿಸ್ತರಣೆ ಆಗುವ ಸಾಧ್ಯತೆಯಿದ್ದು, ಹಾಲಿ ಕೆಲವು ಸಚಿವರಿಗೆ ಕೋಕ್ ನೀಡುವ ಸಂಭವವಿದೆ.

ಚುನಾವಣೆಗೆ ತಕ್ಕಂತೆ ಸರ್ಕಾರ ಮತ್ತು ಪಕ್ಷವನ್ನು ಸದೃಢಗೊಳಿಸಲು ಪ್ರದೇಶವಾರು, ಜಾತಿ, ಸಂಘದ ಪರಿವಾರದ ಹಿನ್ನಲೆ ಇದನ್ನು ಮಾನದಂಡವಾಗಿಟ್ಟುಕೊಂಡು ಪುನಾರಚನೆ ಮಾಡುವ ಸಂಭವವಿದೆ ಎಂದು ಹೇಳಲಾಗುತ್ತಿದೆ.

ಸದ್ಯಕ್ಕೆ ಸಂಪುಟದಲ್ಲಿ ಆರು ಸ್ಥಾನಗಳು ಖಾಲಿ ಇದ್ದು ಜೊತೆಗೆ ಹಾಲಿ ಸಂಪುಟದಲ್ಲಿರುವ ನಾಲ್ವರಿಂದ 6 ಮಂದಿಗೆ ಕೋಕ್ ನೀಡಿ ಹೊಸ ತಂಡ ಕಟ್ಟಲು ಬೊಮ್ಮಾಯಿ ಒಲವು ತೋರಿದ್ದಾರೆ. ಗುಜರಾತ್‍ನಲ್ಲಿ ಚುನಾವಣೆಗೆ ಒಂದು ವರ್ಷ ಇರುವಾಗ ಮುಖ್ಯಮಂತ್ರಿಯಾಗಿದ್ದ ವಿಜಯ್ ರೂಪಾನಿ ಸೇರಿದಂತೆ ಇಡೀ ಸಂಪುಟವನ್ನೇ ಬದಲಾಯಿಸಲಾಗಿತ್ತು.

ಸದ್ಯಕ್ಕೆ ಬೊಮ್ಮಾಯಿ ಅವರು ಬೀಸುವ ದೊಣ್ಣೆಯಿಂದ ತಪ್ಪಿಸಿಕೊಂಡಿದ್ದು, ಚುನಾವಣೆವರೆಗೂ ನಾಯಕತ್ವ ಆಬಾತವಾಗಲಿದೆ. 2006, 2008 ಹಾಗೂ ಪ್ರಸ್ತುತ ಸಂಪುಟಕ್ಕೆ ಸೇರ್ಪಡೆಯಾಗಿರುವ ಹಿರಿಯರಿಗೆ ಕೋಕ್ ನೀಡಿ ಸಂಘಟನೆಯಲ್ಲಿ ತೊಡಗಿಸಿಕೊಳ್ಳಲು ವರಿಷ್ಠರು ಸೂಚನೆ ನೀಡುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳಿವೆ.

ಹಾಲಿ ಸಂಪುಟದಲ್ಲಿ ಅನೇಕ ಜಿಲ್ಲೆಗಳಿಗೆ ಸೂಕ್ತವಾದ ಪ್ರಾಶಸ್ತ್ಯ ಸಿಕ್ಕಿಲ್ಲ. ಅಲ್ಲದೆ ಬಿಜೆಪಿಗೆ ಬೆನ್ನಲುಬಾಗಿ ನಿಂತಿರುವ ವೀರಶೈವ ಲಿಂಗಾಯಿತ, ಪರಿಶಿಷ್ಟ ವರ್ಗ ಸೇರಿದಂತೆ ಮತ್ತಿತರ ಸಣ್ಣ ಸಮುದಾಯಗಳಿಗೆ ಸಾಮಾಜಿಕ ನ್ಯಾಯಕೊಟ್ಟಿಲ್ಲ ಎಂಬ ಆರೋಪಗಳು ಕೇಳಿಬಂದಿವೆ.

ಗಡಿ ವಿವಾದ: ಏಕಪಕ್ಷೀಯ ನಿರ್ಧಾರ ಬೇಡ ಕೇಂದ್ರಕ್ಕೆ ಸಂಸದರ ನಿಯೋಗ ಆಗ್ರಹ

ಇವೆಲ್ಲವನ್ನೂ ಗಮನದಲ್ಲಿಟ್ಟುಕೊಂಡಿರುವ ವರಿಷ್ಠರು ಇಲಾಖೆಯಲ್ಲಿ ಅಷ್ಟೊಂದು ಹೇಳಿಕೊಳ್ಳುವಂತಹ ಸುಧಾರಣೆ ಮಾಡದ ಸರ್ಕಾರ ಹಾಗೂ ಪಕ್ಷಕ್ಕೆ ವರ್ಚಸ್ಸು ತರದಿರುವ ಸಚಿವರನ್ನು ಕೈಬಿಡುವ ಸುಳಿವು ನೀಡಿದ್ದಾರೆ.
ಈ ಬಾರಿ ಸಂಪುಟಕ್ಕೆ ಆರ್‍ಎಸ್‍ಎಸ್ ಮತ್ತು ಸಂಘದ ಪರಿವಾರದ ಹಿನ್ನಲೆ ಇರುವವರಿಗೆ ಮಣೆ ಹಾಕಬೇಕೆಂಬ ಸಲಹೆಗಳು ಕೇಳಿಬಂದಿವೆ. ಸಂಪುಟದಲ್ಲಿ ಖಾಲಿ ಇರುವ ಸ್ಥಾನಗಳನ್ನು ಭರ್ತಿ ಮಾಡಬೇಕೆಂದು ಆಕಾಂಕ್ಷಿಗಳು ಪದೇ ಪದೇ ಒತ್ತಡ ಹಾಕುತ್ತಲೇ ಇದ್ದಾರೆ.

ಕೆಲ ದಿನಗಳ ಹಿಂದೆ ಮಾಜಿ ಸಚಿವರಾದ ಕೆ.ಎಸ್.ಈಶ್ವರಪ್ಪ, ರಮೇಶ್ ಜಾರಕಿಹೊಳಿ ಸೇರಿದಂತೆ ಅನೇಕರು ಸಿಎಂ ಬೊಮ್ಮಾಯಿ ಅವರನ್ನು ಭೇಟಿಯಾಗಿ ಸಂಪುಟಕ್ಕೆ ತೆಗೆದುಕೊಳ್ಳಬೇಕೆಂಬ ಬೇಡಿಕೆ ಇಟ್ಟಿದ್ದರು.

ವಿಧಾನಸಭೆ ಚುನಾವಣೆಗೆ ಇನ್ನೇನು ಕೆಲವೇ ತಿಂಗಳು ಇರುವಾಗ ಸಂಪುಟದಲ್ಲಿ ಖಾಲಿ ಇರುವ ಸ್ಥಾನಗಳನ್ನು ಭರ್ತಿ ಮಾಡಿದರೆ ಸರ್ಕಾರ ಮತ್ತು ಪಕ್ಷಕ್ಕೆ ವರ್ಚಸ್ಸು ಹೆಚ್ಚುತ್ತದೆ ಎಂಬ ಅಭಿಪ್ರಾಯವು ಕೇಳಿಬರುತ್ತಿದೆ.

ಮಾಜಿ ಸಚಿವರಾದ ಕೆ.ಎಸ್.ಈಶ್ವರಪ್ಪ, ರಮೇಶ ಜಾರಕಿಹೊಳಿ ಸೇರಿದಂತೆ ಐವರನ್ನು ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳುವುದಕ್ಕೆ ಈಗ ಸದ್ದಿಲ್ಲದೇ ವೇದಿಕೆ ನಿರ್ಮಾಣವಾಗಿದೆ.

ಇದರ ಪೂರ್ವಭಾವಿಯಾಗಿಯೇ ಸಿಎಂ ಬೊಮ್ಮಾಯಿ ಎರಡು ದಿನಗಳ ಹಿಂದೆ ಸಂಘ-ಪರಿವಾರದ ಹಿರಿಯರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ರಾಜಕೀಯ ಅನಿವಾರ್ಯತೆಗಾಗಿ ಸಂಪುಟ ವಿಸ್ತರಣೆ ಮಾಡಲೇಬೇಕಿರುವ ಸನ್ನಿವೇಶದ ಬಗ್ಗೆ ಮಾಹಿತಿ ನೀಡಿದ್ದಾರೆ.

ಬಿಜೆಪಿ ಚುನಾವಣ ರಣತಂತ್ರ: ಮೋದಿ ರ‍್ಯಾಲಿಗಳಿಗೆ ಸಿದ್ಧತೆ

ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದಲ್ಲಿ ಕ್ಲೀನ್ ಚಿಟ್ ಸಿಕ್ಕಿರುವುದರಿಂದ ಈಶ್ವರಪ್ಪ ಅವರನ್ನು ಮತ್ತೆ ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳಬೇಕಿದೆ. ಕೊಟ್ಟ ಮಾತಿನಂತೆ ನಡೆದುಕೊಳ್ಳದೆ ಇದ್ದರೆ ಪಕ್ಷ ತೊರೆಯುವುದಾಗಿ ರಮೇಶ್ ಜಾರಕಿಹೊಳಿ ಎಚ್ಚರಿಕೆ ನೀಡಿದ್ದಾರೆ ಎನ್ನಲಾಗಿದೆ. ಹೀಗಾಗಿ ಪರಿಸ್ಥಿತಿ ಹತೋಟಿಗೆ ತರಲು ಬೊಮ್ಮಾಯಿ ಅವರಿಗೆ ಸಂಪುಟ ವಿಸ್ತರಣೆ ಅನಿವಾರ್ಯ ಅಸ್ತ್ರವಾಗಿದೆ.

ಪಂಚಮಸಾಲಿ ಹೋರಾಟವನ್ನು ತಾತ್ಕಾಲಿಕವಾಗಿ ಶಮನ ಮಾಡುವುದಕ್ಕಾಗಿ ಆ ಸಮುದಾಯಕ್ಕೆ ಪ್ರಬಲ ಮುಖಂಡನನ್ನು ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳುತ್ತಾರೆ ಎಂದು ಹೇಳಲಾಗುತ್ತಿದೆ. ಬಸನಗೌಡ ಪಾಟೀಲ್ ಯತ್ನಾಳ್ ಅಥವಾ ಅರವಿಂದ ಬೆಲ್ಲದ ಪೈಕಿ ಒಬ್ಬರಿಗೆ ಅದೃಷ್ಟ ಒಲಿಯಬಹುದು ಎಂದು ಹೇಳಲಾಗುತ್ತಿದೆ.

ಇಬ್ಬರು ಮಾಜಿ ಸಚಿವರ ಜತೆಗೆ ಜಾತಿ ಹಾಗೂ ಪ್ರಾದೇಶಿಕತೆ ಆಧರಿಸಿ ಮತ್ತೆ ನಾಲ್ವರಿಗೆ ಅವಕಾಶ ಸಿಗುತ್ತದೆ. ಅಧಿವೇಶನಕ್ಕೆ ಮುಂಚಿತವಾಗಿಯೇ ಈ ಸರ್ಕಸ್ ಮುಕ್ತಾಯಗೊಳ್ಳಲಿದೆ ಎಂದು ತಿಳಿದು ಬಂದಿದೆ.

Karnataka, Cabinet Expansion, CM Bommai, Amit shah, meeting,

Articles You Might Like

Share This Article