Tuesday, May 30, 2023
Homeಇದೀಗ ಬಂದ ಸುದ್ದಿಸಂಪುಟ ವಿಸ್ತರಣೆ, ಸಿದ್ದು-ಡಿಕೆಶಿ ಜಿದ್ದಾಜಿದ್ದಿ

ಸಂಪುಟ ವಿಸ್ತರಣೆ, ಸಿದ್ದು-ಡಿಕೆಶಿ ಜಿದ್ದಾಜಿದ್ದಿ

- Advertisement -

ನವದೆಹಲಿ,ಮೇ 26- ಸಚಿವ ಸಂಪುಟ ವಿಸ್ತರಣೆ ಹಾಗೂ ಖಾತೆ ಹಂಚಿಕೆ ವಿಷಯದಲ್ಲಿ ಪರಸ್ಪರ ಬಣ ರಾಜಕೀಯ ತೀವ್ರಗೊಂಡಿದ್ದು, ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಪರಸ್ಪರ ಜಿದ್ದಿಗೆ ಬಿದ್ದಿದ್ದಾರೆ. ಮಧ್ಯಾಹ್ನದ ವೇಳೆಗೆ ಲಭ್ಯವಾದ ಸಂಭವನೀಯ ಸಚಿವರ ಪಟ್ಟಿಯ ಪ್ರಕಾರ ಸಿದ್ದರಾಮಯ್ಯ ಬಣದ 13 ಮಂದಿ, ಡಿಕೆ.ಶಿವಕುಮಾರ್ ಬಣದ ಐದು, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಬಣದ ಮೂವರು, ಇನ್ನೂ ಸ್ವಂತ ವರ್ಚಿಸ್ಸಿನಿಂದ ಇಬ್ಬರು ಸ್ಥಾನ ಪಡೆದಿದ್ದರು.

ಅದರಲ್ಲಿ ಕೆಲವು ತಾಂತ್ರಿಕ ಅಂಶಗಳು ಗೊಂದಲ ಮೂಡಿಸಿದ್ದವು. ವಿಧಾನ ಪರಿಷತ್‍ನಲ್ಲಿ ಕನಿಷ್ಟ ಒಬ್ಬರಿಗೆ ಸಚಿವ ಸ್ಥಾನ ನೀಡಬೇಕು, ಇಲ್ಲವಾದರೆ ಸಭಾನಾಯಕರಾದವರು ಸಂಪುಟದಿಂದ ಹೊರಗುಳಿದು ವಿರೋಧ ಪಕ್ಷಗಳ ಟೀಕೆಗೆ ನಿರುತ್ತರಾಗಬೇಕಾಗುತ್ತದೆ. ಹಿರಿತನತದ ಆಧಾರದಲ್ಲಿ ಬಿ.ಕೆ.ಹರಿಪ್ರಸಾದ್ ಈಗಾಗಲೇ ವಿರೋಧ ಪಕ್ಷದ ನಾಯಕರಾಗಿ ಕೆಲಸ ಮಾಡುತ್ತಿದ್ದಾರೆ. ಸಚಿವ ಸಂಪುಟದ ಆರಂಭದ ಪಟ್ಟಿಯಲ್ಲಿ ಬಿ.ಕೆ.ಹರಿಪ್ರಸಾದ್ ಹೆಸರಿತ್ತು. ಕೊನೆಗೆ ವಿಧಾನ ಪರಿಷತ್‍ನ ಮಾಜಿ ಸದಸ್ಯ ಎನ್.ಎಸ್.ಬೋಸರಾಜ್ ಹೆಸರು ತೇಲಿ ಬಂದಿದೆ.

ಸಂಪುಟ ವಿಸ್ತರಣೆ ಮುಂದುವರೆದ ಕಸರತ್ತು, ಹಿರಿಯರಿಗೆ ಕೊಕ್..!

ಬೋಸ್‍ರಾಜ್ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಬಣದ ಆಪ್ತರಾಗಿದ್ದಾರೆ. ಸದ್ಯಕ್ಕೆ ಅವರು ವಿಧಾನ ಪರಿಷತ್ ಸದಸ್ಯರಾಗಿಲ್ಲ. ಆದರೂ ಅವರು ಸಂಪುಟದ ಸಂಭವನೀಯರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದು ಹೇಗೆ ಎಂಬ ಅಚ್ಚರಿಗಳು ಪಕ್ಷದ ನಾಯಕರನ್ನು ಕಾಡುತ್ತಿದೆ. ಬಿ.ಕೆ.ಹರಿಪ್ರಸಾದ್ ಕರಾವಳಿ ಭಾಗದ ಮೂಲದವರಾಗಿದ್ದು, ತುಳು, ಕೊಂಕಣಿ ಭಾಷೆ ಮೇಲೆ ಹಿಡಿತ ಹೊಂದಿದ್ದಾರೆ. ಸಂಘ ಪರಿವಾರದ ವಿರುದ್ಧ ಪ್ರಬಲ ಹೋರಾಟ ಮಾಡುತ್ತಲೇ ಬಂದಿದ್ದಾರೆ.

ಸೋನಿಯಾ ಗಾಂಧಿ ಭೇಟಿಯಾದ ಸಿದ್ದರಾಮಯ್ಯ

ರಾಷ್ಟ್ರ ಮತ್ತು ರಾಜ್ಯರಾಜಕಾರಣದಲ್ಲಿ ಸಾಕಷ್ಟು ಅನುಭವ ಹೊಂದಿದ್ದಾರೆ. ಅವರನ್ನು ಸಂಪುಟಕ್ಕೆ ತೆಗೆದುಕೊಳ್ಳಲು ವಿರೋಧಿಸಲಾಗುತ್ತದೆ ಎಂಬ ವದ್ಧಂತಿಗಳಿವೆ. ಈಡಿಗ ಸಮುದಾಯದವರಾದ ಬಿ.ಕೆ.ಹರಿಪ್ರಸಾದ್ ಬದಲಿಗೆ ಸೊರಬ ಕ್ಷೇತ್ರದ ಮಧು ಬಂಗಾರಪ್ಪ ಹೆಸರನ್ನು ಸೇರ್ಪಡೆ ಮಾಡಲಾಗಿತ್ತು. ಜೊತೆಗೆ ಎನ್.ಎಸ್.ಬೋಸ್‍ರಾಜ್ ಮಧ್ಯಪ್ರವೇಶ ಹಲವು ಚರ್ಚೆಗಳಿಗೆ ಕಾರಣವಾಗಿವೆ. ಸಿದ್ದರಾಮಯ್ಯ ಬಣದ ಹಿರಿಯ ನಾಯಕರಾದ ಆರ್.ವಿ.ದೇಶಪಾಂಡೆ, ಹೆಚ್.ಸಿ.ಮಹದೇವಪ್ಪ, ಟಿ.ಬಿ.ಜಯಚಂದ್ರ ಹೆಸರುಗಳು ಭಾರೀ ಚರ್ಚೆಗೆ ಗ್ರಾಸವಾಗಿವೆ.

karnataka, #cabinetexpansion, #cmsiddaramaiah, #dkshivakumar,

- Advertisement -
RELATED ARTICLES
- Advertisment -

Most Popular