Thursday, June 1, 2023
Homeಇದೀಗ ಬಂದ ಸುದ್ದಿಸಚಿವರಿಗೂ ಅಧಿಕಾರ ಹಂಚಿಕೆ ವದಂತಿ

ಸಚಿವರಿಗೂ ಅಧಿಕಾರ ಹಂಚಿಕೆ ವದಂತಿ

- Advertisement -

ನವದೆಹಲಿ,ಮೇ 26- ಮೊದಲ ಅವಧಿಯಲ್ಲಿ ಸಚಿವ ಸಂಪುಟ ಸೇರ್ಪಡೆಯಾಗುವವರ ಅಧಿಕಾರಾವಧಿ ಎರಡುವರೆ ವರ್ಷ ಮಾತ್ರ ಎಂಬ ವದಂತಿಗಳು ವ್ಯಾಪಕವಾಗಿ ಹರಿದಾಡುತ್ತಿವೆ. ಸಂಪುಟ ವಿಸ್ತರಣೆಗಾಗಿ ದೆಹಲಿಯಲ್ಲಿ ಬೀಡು ಬಿಟ್ಟಿರುವ 70ಕ್ಕೂ ಹೆಚ್ಚು ಮಂದಿ ಆಕಾಂಕ್ಷಿಗಳು ದೆಹಲಿಯಲ್ಲಿ ಬೀಡು ಬಿಟ್ಟಿದ್ದಾರೆ. ತಮ್ಮನ್ನು ಭೇಟಿ ಮಾಡುತ್ತಿರುವ ಶಾಸಕರ ಬಳಿ ಹಿರಿಯ ನಾಯಕರು ಸಮಾಧಾನ ಪಡಿಸುವ ವೇಳೆ ಅಧಿಕಾರವಧಿಯ ಗುಟ್ಟು ಬಿಟ್ಟುಕೊಡುತ್ತಿದ್ದಾರೆ ಎಂದು ಹೇಳಲಾಗಿದೆ.

ಲೋಕಸಭೆ ಚುನಾವಣೆಯವರೆಗೂ ಅನುಭವಿ ಹಾಗೂ ಕ್ರಿಯಾಶೀಲರ ಸಂಪುಟ ತಂಡ ಕಟ್ಟಲು ಹೈಕಮಾಂಡ್ ಸೂಚನೆ ನೀಡಿದೆ. ಚುನಾವಣೆವರೆಗೂ ತಾಳ್ಮೆಯಿಂದ ಇರಿ, ಮುಂದಿನ ದಿನಗಳಲ್ಲಿ ಒಳ್ಳೆಯ ಅವಕಾಶಗಳಿವೆ ಎಂದು ಸಮಾಧಾನ ಪಡಿಸುತ್ತಿದ್ದಾರೆ ಎಂದು ಹೇಳುತ್ತಿರುವುದಾಗಿ ತಿಳಿದು ಬಂದಿದೆ. ಈ ಬಾರಿ ಪ್ರಬಲ ಲಾಬಿ ನಡೆಸಿದವರನ್ನು ಪರಿಗಣಿಸಿ ಎರಡನೇ ಅವಧಿಯಲ್ಲಿ ಸಚಿವನ್ನಾಗಿ ಮಾಡುವ ನಿರೀಕ್ಷೆಗಳಿವೆ.

ಮೇ.29 ರಂದು NVS-01 ಉಪಗ್ರಹ ಉಡಾವಣೆಗೆ ಇಸ್ರೋ ಸಿದ್ಧತೆ

ಮೊದಲ ಹಂತದಲ್ಲಿ ಸಂಪುಟದ 34 ಸ್ಥಾನಗಳ ಪೈಕಿ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಸೇರಿ 10 ಮಂದಿ ಸೇರ್ಪಡೆಯಾಗಿದ್ದಾರೆ. ಎರಡನೇ ಹಂತದ ವಿಸ್ತರಣೆಯಲ್ಲಿ 22 ಮಂದಿಗೆ ಅವಕಾಶ ನೀಡಲಾಗುವುದು. ಎರಡು ಸ್ಥಾನಗಳನ್ನು ಬಾಕಿ ಉಳಿಸಿಕೊಳ್ಳಲು ಹೈಕಮಾಂಡ್ ಸೂಚನೆ ನೀಡಿದೆ ಎಂದು ಹೇಳಲಾಗಿದೆ.

ಈ ಹಿನ್ನೆಲೆಯಲ್ಲಿ ಪೂರ್ಣ ಪ್ರಮಾಣದ ಸಚಿವ ಸಂಪುಟ ವಿಸ್ತರಣೆಯೋ ಅಥವಾ ಭಾಗಶಃ ಖಾಲಿ ಉಳಿಯಲಿದೆಯೋ ಎಂಬ ಚರ್ಚೆಗಳು ನಡೆದಿವೆ.ಮಧ್ಯಾಹ್ನದ ಬಳಿಕ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ನಡೆಯುವ ಸಭೆಯಲ್ಲಿ ಈ ಕುರಿತು ಅಂತಿಮ ತೀರ್ಮಾನ ತೆಗೆದುಕೊಳ್ಳುವುದಾಗಿ ಹೇಳಲಾಗುತ್ತಿದೆ.

karnataka, #cabinet ministers, #power, #sharing, #formula,

- Advertisement -
RELATED ARTICLES
- Advertisment -

Most Popular