ಬೆಂಗಳೂರು,ಫೆ.3- ಅಪ್ಪಿತಪ್ಪಿಯೂ ನಿಮ್ಮ ಖಾತೆಗಳಲ್ಲಿ ಹೆಚ್ಚಿನ ವಹಿವಾಟು ನಡೆಸೀರಿ ಜೋಕೆ! ಒಂದು ವೇಳೆ ಆಸೆ ಇಲ್ಲವೇ ಆಮಿಷಕ್ಕಾಗಿ ಏಕಾಏಕಿ ಖಾತೆಗಳಿಗೆ ಹೆಚ್ಚಿನ ಹಣ ಜಮೆಯಾದರೆ ನಿಮ್ಮ ಖಾತೆಯನ್ನೇ ಜಪ್ತಿಯಾಗುತ್ತದೆ. ಅದರಲ್ಲೂ ಚುನಾವಣೆ ನಡೆಯುತ್ತಿರುವ ಕರ್ನಾಟಕದಲ್ಲಿ ಪ್ರತಿಯೊಂದು ಖಾತೆದಾರರ ಮೇಲೂ ಆಯೋಗ ಹದ್ದಿನ ಕಣ್ಣಿಟ್ಟಿದೆ.
ರಾಜ್ಯ ಮುಖ್ಯ ಚುನಾವಣಾಧಿಕಾರಿ ಮನೋಜ್‍ಕುಮಾರ್ ಮೀನಾ ಅವರು ಕರ್ನಾಟಕದ ಆರ್‍ಬಿಐ ಮುಖ್ಯವ್ಯವಸ್ಥಾಪಕರು ಹಾಗೂ ರಾಜ್ಯದಲ್ಲಿ ಪ್ರಮುಖ ಬ್ಯಾಂಕ್‍ಗಳ ಪ್ರಧಾನ ವ್ಯವಸ್ಥಾಪಕರ ಜೊತೆ ಸಭೆ ನಡೆಸಿದ್ದಾರೆ.
ಚುನಾವಣೆಯಲ್ಲಿ ನಡೆಯಬಹುದಾದ ಅಕ್ರಮವನ್ನು ತಡೆಗಟ್ಟಲು ಆಯೋಗ ಪ್ರತಿ ಬಾರಿಯು ಮುಂದಾಗುತ್ತದೆ. ಆಯೋಗ ಚಾಪೆ ಕೆಳಗೆ ನುಸುಳಿದರೆ ರಾಜಕಾರಣಿಗಳು ರಂಗೋಲಿ ಕೆಳಗೆ ನುಸುಳುವ ಪ್ರವೀಣರು.
ನೇರವಾಗಿ ಹಣ, ಒಡವೆ ಇಲ್ಲವೇ ಬೇರೊಂದು ರೀತಿಯಲ್ಲಿ ಹಂಚಿಕೆ ಮಾಡಿದರೆ ಕಾನೂನು ಸಂಕಷ್ಟಕ್ಕೆ ಸಿಲುಕಿಕೊಳ್ಳಬೇಕಾಗುತ್ತದೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ. ಅದರಲ್ಲೂ ಈಗ ಸಾಮಾಜಿಕ ಜಾಲತಾಣಗಳ ಯುಗ.
ಖ್ಯಾತ ಹಿರಿಯ ನಟ ಕಾಸಿನಾಧುನಿ ವಿಶ್ವನಾಥ್ ಇನ್ನಿಲ್ಲ
ಪ್ರತಿಯೊಂದನ್ನು ಕೂಡ ಮೊಬೈಲ್‍ನಲ್ಲೇ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡುತ್ತಾರೆ. ಇದನ್ನು ಮನಗಂಡಿರುವ ರಾಜಕಾರಣಿಗಳು ವಾಮಮಾರ್ಗದ ಮೂಲಕ ಮತದಾರರಿಗೆ ಆಮಿಷವೊಡ್ಡುತ್ತಾರೆ.
ಗ್ರಾಮೀಣ ಭಾಗಗಳಲ್ಲಿ ಹೆಚ್ಚಾಗಿ ಸ್ತ್ರೀ ಸಂಘಟನೆಗಳು, ಅಭ್ಯರ್ಥಿಗಳ ಸೋಲುಗೆಲುವಿಗೆ ಪ್ರಮುಖ ಪಾತ್ರ ವಹಿಸುತ್ತವೆ.
ಒಂದೊಂದು ಸಂಘಟನೆಯಲ್ಲಿ 200ರಿಂದ 300 ಮತದಾರರು ಇರುತ್ತಾರೆ. ಮತಕ್ಕೆ ಇಂತಿಷ್ಟು ಎಂದು ಹಣನಿಗದಪಡಿಸಿ ಸ್ತ್ರೀ ಶಕ್ತಿ ಸಂಘಟನೆಗಳ ಮುಖ್ಯಸ್ಥರ ಖಾತೆಗಳಿಗೆ ಹಣ ಹಾಕುವುದು ಇತ್ತೀಚೆಗೆ ಸರ್ವೇ ಸಾಮಾನ್ಯವಾಗಿದೆ.
ಹಾಲು ಉತ್ಪಾದಕರ ಸಂಘ, ಮಹಿಳಾ ಸಂಘಗಳು, ಯುವಕರ ಸಂಘ ಹೀಗೆ ನಾನಾ ರೀತಿಯಲ್ಲಿ ಮತದಾರರ ಖಾತೆಗಳಿಗೆ 500ರಿಂ 1000 ಹಣವನ್ನು ಹಾಕಲಾಗುತ್ತದೆ. ಇದೀಗ ಬ್ಯಾಂಕ್ ಖಾತೆಗಳ ಮೇಲೆಯೂ ಕಣ್ಣಿಟ್ಟಿರುವ ಚುನಾವಣಾ ಆಯೋಗ ಯಾರ್ಯಾರ ಖಾತೆಗೆ ಹೆಚ್ಚು ಹಣ ಸಂದಾಯವಾಗುತ್ತದೆ ಎಂಬುದನ್ನು ಕುರಿತು ತಕ್ಷಣವೇ ಮಾಹಿತಿ ನೀಡಬೇಕೆಂದು ಬ್ಯಾಂಕ್ ಅಧಿಕಾರಿಗಳಿಗೆ ಮನವಿ ಮಾಡಿದೆ.
ಈಗಾಗಲೇ ಒಂದು ಸುತ್ತಿನ ಮಾತುಕತೆ ನಡೆಸಿರುವ ಚುನಾವಣಾಧಿಕಾರಿಗಳು ಯಾವುದೇ ವ್ಯಕ್ತಿಯ ಖಾತೆಗೆ ಏಕಾಏಕಿ ಲಕ್ಷಗಟ್ಟಲೇ ಹಣ ಸಂದಾಯವಾದರೆ ಕೂಡಲೇ ಆಯೋಗದ ಗಮನಕ್ಕೆ ತರಬೇಕು. ಚುನಾವಣೆ ವೇಳೆ ನಡೆಯುವ ಅಕ್ರಮ ಮತ್ತು ಭ್ರಷ್ಟಾಚಾರವನ್ನು ತಡೆಗಟ್ಟುವುದು ಪ್ರತಿಯೊಬ್ಬರ ಕರ್ತವ್ಯ ಎಂದು ಮನವಿ ಮಾಡಿದೆ.
ಶೀಘ್ರದಲ್ಲೇ ಮತ್ತೊಂದು ಸುತ್ತು ಅಧಿಕಾರಿಗಳ ಜೊತೆ ಸಭೆ ನಡೆಸಿ ಕೆಲವು ಬಿಗಿಯಾದ ಕ್ರಮಗಳನ್ನು ತೆಗೆದುಕೊಳ್ಳಲು ಸಹಾಕಾರ ನೀಡಬೇಕೆಂದು ಮನವಿ ಮಾಡಲಿದೆ.
Karnataka, CEO, Manoj Kumar Meena, pre-Election, meeting, RBI Officer,