ಲಾಬಿಗಿಲ್ಲ ಮನ್ನಣೆ : ಕಾಂಗ್ರೆಸ್ ಆಕಾಂಕ್ಷಿಗಳಲ್ಲಿ ಹೆಚ್ಚಿದ ತಳಮಳ

Social Share

ಬೆಂಗಳೂರು,ಫೆ.12- ಎಐಸಿಸಿಯ ಪರಿಶೀಲನಾ ಸಮಿತಿ ರಾಜ್ಯಕ್ಕೆ ಭೇಟಿ ನೀಡಿದ್ದು, ಕಾಂಗ್ರೆಸ್ ಟಿಕೆಟ್ ಹಂಚಿಕೆಗೆ ಅಂತಿಮ ಹಂತದ ಪ್ರಕ್ರಿಯೆಗಳು ಶುರುವಾಗಿವೆ. ಈ ನಡುವೆ ಬಣ ರಾಜಕೀಯ ಹೊರತು ಪಡಿಸಿ ಗೆಲ್ಲುವ ಅಭ್ಯರ್ಥಿಗಳಿಗೆ ಮಾತ್ರ ಮಣೆ ಹಾಕಲು ನಿರ್ಧರಿಸಿರುವುದರಿಂದ ಆಕಾಂಕ್ಷಿಗಳಲ್ಲಿ ತಳಮಳ ಹೆಚ್ಚಾಗಿದೆ.

ಮೋಹನ್ ಪ್ರಕಾಶ್ ನೇತೃತ್ವದ ಎಐಸಿಸಿ ಸ್ಕ್ರೀನಿಂಗ್ ಸಮಿತಿ ನಿನ್ನೆ ಬೆಂಗಳೂರಿಗೆ ಭೇಟಿ ನೀಡಿದ್ದರು. ಸಮಿತಿಯು ಕಚೇರಿಯೇತರ ಸದಸ್ಯರಾದ ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ, ರಣದೀಪ್‍ಸಿಂಗ್ ಸುಜೇವಾಲ, ಬಿ.ಕೆ.ಹರಿಪ್ರಸಾದ್, ಎಂ.ಬಿ.ಪಾಟೀಲ್, ಡಾ.ಜಿ.ಪರಮೇಶ್ವರ್ ಅವರ ಜೊತೆ ಚರ್ಚೆ ನಡೆಸಲಿದೆ.

ಹೈಕಮಾಂಡ್‍ಗೆ ರವಾನೆಯಾಗಲಿದೆ. ಅಲ್ಲಿ ಕೇಂದ್ರ ಚುನಾವಣಾ ಸಮಿತಿ ಸಭೆ ನಡೆಸಿ ಅಂತಿಮಗೊಳಿಸಲಿದ್ದು, ಬಹುತೇಕ ಈ ತಿಂಗಳಾಂತ್ಯಕ್ಕೆ ಕಾಂಗ್ರೆಸ್ ಅಭ್ಯರ್ಥಿಗಳ 130ಕ್ಕೂ ಹೆಚ್ಚು ಕ್ಷೇತ್ರಗಳ ಪಟ್ಟಿ ಸಿದ್ದಗೊಳ್ಳಲಿದೆ.
ಆದರೆ ಈ ಬಾರಿ ಅವಕಾಶ ಗಿಟ್ಟಿಸಿಕೊಳ್ಳಲು ಆಕಾಂಕ್ಷಿಗಳು ಹರ ಸಾಹಸ ಪಡಬೇಕಿದೆ.

ನಾಲ್ಕು ಹೈಕೋರ್ಟ್‍ಗಳಿಗೆ ಮುಖ್ಯ ನ್ಯಾಯಮೂರ್ತಿಗಳ ನೇಮಕ

ಈ ಮೊದಲು ಪ್ರಭಾವಿ ನಾಯಕರ ಹಿಂದೆ ಮುಂದೆ ಸುತ್ತಿದವರಿಗೆಲ್ಲಾ ಅವಕಾಶ ದೊರೆಯುತ್ತಿದ್ದವು. ಪುರಾತನವಾದ ಪದ್ಧತಿಗೆ ಬದಲಾವಣೆ ತರಲು ಕಾಂಗ್ರೆಸ್ ಮುಂದಾಗಿದೆ. ಸದಸ್ಯತ್ವ ನೋಂದಣಿ, ಪಕ್ಷ ಸೂಚಿಸಿದ ಪ್ರತಿಭಟನೆಗಳಲ್ಲಿ ಸಕ್ರಿಯ ಭಾಗವಹಿಸುವಿಕೆ, ಸಂಘಟನೆ ಹಾಗೂ ಇತರ ಚಟುವಟಿಕೆಗಳಲ್ಲಿ ನಿರಂತರವಾಗಿ ತೊಡಗಿಸಿಕೊಂಡಿರುವವರಿಗೆ ಆದ್ಯತೆ ನೀಡಲಾಗುತ್ತಿದೆ.

ಕಾಂಗ್ರೆಸ್ ಕಚೇರಿಯಲ್ಲಿ ಕಿಟಕಿಗೊಂದು ಬಣಗಳಿರುವುದು ಎಲ್ಲರಿಗೂ ತಿಳಿದಿದೆ. ಒಂದು ವೇಳೆ ಪ್ರಭಾವಿ ಮುಖಂಡರ ಶಿಫಾರಸ್ಸು ಆಧರಿಸಿ ಟಿಕೆಟ್ ಹಂಚಿಕೆ ನಿರ್ಧಾರ ಕೈಗೊಂಡರೆ ಪಕ್ಷಕ್ಕೆ ಭಾರೀ ಹಿನ್ನೆಡೆಯಾಗಲಿದೆ. ಎಲ್ಲರೂ ತಮ್ಮ ತಮ್ಮ ಪ್ರಾಬಲ್ಯ ಹೆಚ್ಚಿಸಿಕೊಳ್ಳಲು ಬೆಂಬಲಿಗರಿಗೆ ಟಿಕೆಟ್ ಕೊಡಿಸಲು ಲಾಬಿ ನಡೆಸುತ್ತಾರೆ. ಇದರಿಂದ ಅಸಮಧಾನಗಳು ಹೆಚ್ಚಾಗಲಿದ್ದು, ಬಂಡಾಯದ ಬಿಸಿ ಕಾವೇರುವ ಸಾಧ್ಯತೆ ಇದೆ. ಅದಕ್ಕಾಗಿ ಮುಂದಿನ ಚುನಾವಣೆಗೆ ಅಭ್ಯರ್ಥಿಗಳನ್ನು ಸಮೀಕ್ಷೆ ಆಧರಿಸಿ ಆಯ್ಕೆ ಮಾಡುವ ಪದ್ಧತಿಗೆ ಕಾಂಗ್ರೆಸ್ ಮುಂದಾಗಿದೆ.

ಈ ಮೊದಲು ಹೈಕಮಾಂಡ್ ಮುಖ್ಯಸ್ಥರಾಗಿದ್ದ ಸೋನಿಯಾ ಗಾಂಧಿ ಮತ್ತು ರಾಹುಲ್‍ಗಾಂಧಿ ಅವರಿಗೆ ಸ್ಥಳೀಯ ರಾಜಕಾರಣದ ವಾಸ್ತವಗಳು ಅಷ್ಟಾಗಿ ಅರಿವಿರಲಿಲ್ಲ. ಇಲ್ಲಿನ ನಾಯಕರು ಮತ್ತು ಕೆಪಿಸಿಸಿ ಉಸ್ತುವಾರಿ ಕಾರ್ಯದರ್ಶಿಗಳು ನೀಡುವ ಮಾಹಿತಿ ಆಧರಿಸಿ ಟಿಕೆಟ್ ಹಂಚಿಕೆ ಸೇರಿದಂತೆ ಬಹುತೇಕ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದರು.

ಕ್ರಿಮಿಗಳನ್ನು ಬೆಳಸಿ ಬುಡಕ್ಕೆ ಬಾಂಬ್ ಇಟ್ಟುಕೊಂಡ ‘ಪಾಪಿ’ಸ್ತಾನ

ಆದರೆ, ಈ ಬಾರಿ ಎಐಸಿಸಿ ಅಧ್ಯಕ್ಷರಾಗಿರುವುದು ರಾಜ್ಯದವರೇ ಆದ ಮಲ್ಲಿಕಾರ್ಜುನ ಖರ್ಗೆ, ರಾಜ್ಯ ರಾಜಕಾರಣದಲ್ಲಿ ಸುದೀರ್ಘ ಅನುಭವ ಹೊಂದಿರುವ ಅವರು ಇಲ್ಲಿನ ಪ್ರತಿ ಬೆಳವಣಿಗೆಗಳ ಕುರಿತು ಸ್ಪಷ್ಟ ಮಾಹಿತಿ ಹೊಂದಿದ್ದಾರೆ. ಜೊತೆಗೆ ಅವರ ಪುತ್ರ ಪ್ರಿಯಾಂಕ್ ಖರ್ಗೆ ಕೆಪಿಸಿಸಿಯ ಮಾಧ್ಯಮ ಘಟಕದ ಅಧ್ಯಕ್ಷರಾಗಿದ್ದ ದಿನ ನಿತ್ಯದ ಬೆಳವಣಿಗೆಗಳನ್ನು ಆಧರಿಸಿ ಹೈಕಮಾಂಡ್‍ಗೆ ಮಾಹಿತಿ ನೀಡುತ್ತಲೇ ಇದ್ದಾರೆ.

ಈಗಾಗಲೇ ರಾಜ್ಯದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಹಲವು ಸುತ್ತಿನ ಪ್ರವಾಸ ಕೈಗೊಂಡಿದ್ದಾರೆ. ಹೋದ ಕಡೆಯಲ್ಲೆಲ್ಲಾ ಅಭ್ಯರ್ಥಿಗಳನ್ನು ಘೋಷಣೆ ಮಾಡಿದ್ದಾರೆ. ನಾಯಕರ ಮಾತು ನಂಬಿ ಘೋಷಿತರು ಈಗಾಗಲೇ ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡು ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ.

ಈಗ ಹೊಸದಾಗಿ ಸಮೀಕ್ಷೆ ಆಧರಿಸಿ ಟಿಕೆಟ್ ನೀಡುವುದಾಗಿ ಹೇಳುತ್ತಿರುವುದು ನಿರೀಕ್ಷೆಯಲ್ಲಿದ್ದವರ ತಳಮಳ ಹೆಚ್ಚಿಸಿದೆ.

ಜಮ್ಮು-ಕಾಶ್ಮೀರದಲ್ಲಿ ಉದ್ಯೋಗ ಬದಲಿಗೆ ಬುಲ್ಡೋಜರ್ ಬಳಕೆ : ರಾಹುಲ್ ಟೀಕೆ

ಚುನಾವಣೆ ಸಮಿತಿಯಲ್ಲಿ 120 ಕ್ಷೇತ್ರಗಳಿಗೆ ಏಕ ವ್ಯಕ್ತಿ ಹೆಸರನ್ನು ಶಿಫಾರಸ್ಸು ಮಾಡಲಾಗಿದೆ. ಉಳಿದ ಕ್ಷೇತ್ರಗಳಿಗೆ ಎರಡರಿಂದ ಮೂರು ಹೆಸರನ್ನು ಸಿದ್ಧಗೊಳಿಸಲಾಗಿದೆ. ಅದನ್ನು ಸ್ಕ್ರೀನಿಂಗ್ ಸಮಿತಿ ಪರಿಶೀಲನೆ ನಡೆಸಲಿದೆ. ಎಲ್ಲಾ ಪ್ರಕ್ರಿಯೆಗಳು ಶೀಘ್ರವಾಗಿ ಪೂರ್ಣಗೊಂಡು ಅಭ್ಯರ್ಥಿಗಳ ಆಯ್ಕೆ ಅಂತಿಮಗೊಳ್ಳುವ ಸಾಧ್ಯತೆ ಹೆಚ್ಚಿದೆ.

karnataka, congress, candidates, list,

Articles You Might Like

Share This Article