ಬೆಂಗಳೂರು,ಫೆ.2- ಗೋವಾ ವಿಧಾನಸಭೆ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿರುವ ಕಾಂಗ್ರೆಸ್ ಪ್ರತಿಯೊಂದು ವಿಧಾನಸಭಾ ಕ್ಷೇತ್ರಕ್ಕೂ ಕರ್ನಾಟಕದ ಮುಖಂಡರನ್ನು, ಶಾಸಕರನ್ನು ವೀಕ್ಷಕರನ್ನಾಗಿ ನಿಯೋಜಿಸಿದೆ.
ಎಐಸಿಸಿಯಿಂದ ಗೋವಾ ಉಸ್ತುವಾರಿ ನೋಡಿಕೊಳ್ಳುತ್ತಿರುವ ಮಾಜಿ ಸಚಿವ ದಿನೇಶ್ ಗುಂಡೂರಾವ್ ಅವರು ಕ್ಷೇತ್ರವಾರು ಉಸ್ತುವಾರಿ ನಾಯಕರ ಪಟ್ಟಿ ಬಿಡುಗಡೆ ಮಾಡಿದ್ದಾರೆ.
ಶಾಸಕರಾದ ಶ್ರೀನಿವಾಸ್ ಮಾನೆ, ರಿಜ್ವಾನ್ ಅರ್ಷದ್, ಸುನೀಲ್ ಗೌಡ ಪಾಟೀಲ್, ಅಂಜಲಿ ನಿಂಬಾಳ್ಕರ್, ಪ್ರಿಯಾಂಕ್ ಖರ್ಗೆ, ಕೃಷ್ಣಭೈರೇಗೌಡ, ಲಕ್ಷ್ಮಿ ಹೆಬಾಳ್ಕರ್, ಯು.ಟಿ.ಖಾದರ್, ಡಾ.ಅಜಯ್ ಸಿಂಗ್, ಮಾಜಿ ಶಾಸಕರಾದ ಐವಾನ್ ಡಿಸೋಜ, ವಿಜಯ್ ಸಿಂಗ್, ಸಂತೋಷ್ ಲಾಡ್, ವಿಜಯಾನಂದ ಕಾಶಂಪನವರ್,
ಕಾಂಗ್ರೆಸ್ ಮುಖಂಡರಾದ ರವಿ ಭೋಸ್ ರಾಜ್, ಚಂದ್ರಶೇಖರ್ ರಾಥೋಡ್, ಲೋಕೇಶ್ ವಿ. ನಾಯಕ್, ವಿಶ್ವಾಸ್ ವೈದ್ಯ, ಸದಾನಂದ ಡೆಂಗಣ್ಣನವರ್, ಸತೀಶ್ ಶೈಲ್, ದಯಾನಂದ ಪಾಟೀಲ್, ಪಿ.ವಿ.ಮೋಹನ್, ಎ.ಎನ್.ನಟರಾಜ್ ಗೌಡ ಅವರುಗಳನ್ನು ಗೋವಾ ಚುನಾವಣೆ ಉಸ್ತುವಾರಿಗೆ ನಿಯೋಜಿಸಲಾಗಿದೆ.
