ಅರಮನೆ ಮೈದಾನದಲ್ಲಿ ವಿಜೃಂಬಿಸಿದ ನಾರಿ ಶಕ್ತಿ

Social Share

ಬೆಂಗಳೂರು,ಜ.16- ಮಹಿಳೆಯರಿಂದ ಮಹಿಳೆಯರಿಗಾಗಿಯೇ ನಡೆದ ನಾ ನಾಯಕಿ ಸಮಾವೇಶದಲ್ಲಿ ನಾರಿಯರ ದರ್ಬಾರ್ ವಿಜೃಂಭಿಸಿತ್ತು. ಪ್ರತಿ ಸಮಾವೇಶದಲ್ಲೂ ಕಾಂಗ್ರೆಸ್ ನಾಯಕರೇ ತುಂಬಿ ಹೋಗಿರುತ್ತಾರೆ. ಅಲ್ಲಿ ಮಹಿಳಾ ನಾಯಕಿಯರ ಉಪಸ್ಥಿತಿ ನಗಣ್ಯವಾಗಿರುತ್ತಿತ್ತು. ಇಂದಿನ ನಾ ನಾಯಕಿ ಸಮಾವೇಶದ ವೇದಿಕೆಯಲ್ಲಿ 42 ಮಂದಿಗೆ ಆಸನ ವ್ಯವಸ್ಥೆ ಮಾಡಲಾಗಿತ್ತು.

ಅದರಲ್ಲಿ ಬಹುತೇಕ ಮಹಿಳಾ ನಾಯಕಿಯರೇ ತುಂಬಿ ಹೋಗಿದ್ದರು. ಶಾಸಕರು, ಸಂಸದರಿಗೆ ವೇದಿಕೆ ಮುಂಭಾಗದಲ್ಲಿ ಕುರ್ಚಿಗಳನ್ನು ಹಾಕಲಾಗಿತ್ತು. ವೇದಿಕೆಯ ಮೇಲೆ ಪ್ರಿಯಾಂಕ ಗಾಂಧಿಯವರ ಜೊತೆ ಮಹಿಳಾ ಕಾಂಗ್ರೆಸ್‍ನ ರಾಜ್ಯ ಮತ್ತು ರಾಷ್ಟ್ರೀಯ ಅಧ್ಯಕ್ಷರು, ಮಹಿಳಾ ಶಾಸಕಿಯರು, ಮಾಜಿ ಸಚಿವರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿತ್ತು.

ಪ್ರೀಯಾಂಕ ಗಾಂಧಿಯನ್ನು ಅದ್ದೂರಿಯಾಗಿ ಸ್ವಾಗತಿಸಿದ ‘ಕೈ’ನಾಯಕರು

ಸಭಾಂಗಣದಲ್ಲೂ ಹೆಚ್ಚು ಮಹಿಳೆಯರೇ ಕಿಕ್ಕಿರಿದು ತುಂಬಿದ್ದರು. ಕಾರ್ಯಕ್ರಮಕ್ಕೆ ಆಗಮಿಸಿದ ಎರಡನೇ ಹಂತದ ಪುರುಷ ನಾಯಕರಿಗೆ ಎಡಭಾಗದಲ್ಲಿ ಕೆಲವೇ ಕೆಲವು ಸ್ಥಾನಗಳನ್ನು ಮೀಸಲಿರಿಸಲಾಗಿತ್ತು. ಸಭಾಂಗಣ ಕಿಕ್ಕಿರಿದು ತುಂಬಿದ್ದರಿಂದ, ಜಾಗದ ಕೊರತೆ ಕಾಡಿತ್ತು. ಸಾವಿರಾರು ಮಂದಿ ಸಭಾಂಗಣದ ಹೊರಗೆ ಬಯಲಿನಲ್ಲಿ ನಿಂತಿದ್ದರು.

ಕಾರ್ಯಕ್ರಮದಲ್ಲಿ ಮಾಜಿ ಸಚಿವರಾದ ಉಮಾಶ್ರೀ, ರಾಣಿ ಸತೀಶ್, ಮೊಟಮ್ಮ, ಜಲಜಾನಾಯಕ್, ಪದ್ಮಾವತಿ, ಲಕ್ಷ್ಮೀ ಹೆಬ್ಬಾಳ್ಕರ್, ಸೌಮ್ಯರೆಡ್ಡಿ, ಪುಷ್ಪಾ ಅಮರ್ ನಾಥ್ ಸೇರಿದಂತೆ ಅನೇಕ ನಾಯಕಿಯರು ಮಾತನಾಡಿದರು.
ಅಡುಗೆ ಮನೆವರೆಗೂ ಹೋಗಿ ಕಾಂಗ್ರೆಸ್ ಗೆ ಮತ ಹಾಕುವಂತೆ ಮನವೋಲಿಸಲು ಮಹಿಳೆಯರಿಗೆ ಮಾತ್ರ ಸಾಧ್ಯ. ಪುರಷರಿಗೆ ಮನೆಯಲ್ಲಿ ಹಾಲ್ ವರೆಗೂ ಮಾತ್ರ ಪ್ರವೇಶ ಇರುತ್ತದೆ. ಅಡುಗೆ ಮನೆಯವರೆಗೂ ತಲುಪಲು ಮಹಿಳಾ ನಾಯಕಿಯರಿಗೆ ಮಾತ್ರ ಸಾಧ್ಯ.

ಭದ್ರತೆ ಲೆಕ್ಕಿಸದೆ ಮಹಿಳಾ ಕಾರ್ಯಕರ್ತರ ಕೈ ಕುಲುಕಿದ ಪ್ರಿಯಾಂಕಾ

ಈ ಹಿನ್ನೆಲೆಯಲ್ಲಿ ಮಹಿಳಾ ನಾಯಕಿಯರ ಪಾತ್ರ ಬಹಳ ಮುಖ್ಯವಾಗಿದೆ ಎಂದು ವೇದಿಕೆಯಲ್ಲಿ ಮಾತನಾಡಿದ ನಾಯಕಿಯರು ಹೇಳಿದರು.

ಸ್ಥಳೀಯ ಸಂಸ್ಥೆಗಳಲ್ಲಿ ಶೇ.50ರಷ್ಟು ಮಹಿಳಾ ಮೀಸಲಾತಿ ಜಾರಿಗೆ ತಂದಿದ್ದು, ಸ್ವಸಹಾಯ, ಸ್ತ್ರೀ ಸಂಘಗಳ ಮೂಲಕ ಮಹಿಳಾ ಸಬಲೀಕರಣಕ್ಕೆ ನಾಂದಿಯಾಡಿದ್ದು ಕಾಂಗ್ರೆಸ್ ಪಕ್ಷ ಎಂದು ವಿವರಿಸಿದರು.

Karnataka Election, Priyanka Gandhi, Address, ‘Na Nayaki’, Rally, Bengaluru,

Articles You Might Like

Share This Article