ಪ್ರವಾಸಿ ತಾಣಗಳಾಗಲಿವೆ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ ರಾಜ್ಯದ ಸ್ಥಳಗಳ

Social Share

ಬೆಂಗಳೂರು, ಜ.27- ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಭಾರತ ಸ್ವಾತಂತ್ರ್ಯ ಹೋರಾಟದಲ್ಲಿ ಕರ್ನಾಟಕದ ಮಹತ್ವ ಸಾರಲು ಹಾಗೂ ರಾಜ್ಯ ಪ್ರವಾಸೋದ್ಯಮ ಇಲಾಖೆಯು ಹೋರಾಟದಲ್ಲಿ ಕೊಡುಗೆ ನೀಡಿದ ರಾಜ್ಯದ ಸ್ಥಳಗಳನ್ನು ಪ್ರವಾಸಿ ತಾಣವಾಗಿ ಮಾಡಲು ಸರ್ಕಾರ ಮುಂದಾಗಿದೆ.
ಸ್ವಾತಂತ್ರ್ಯ ಹೋರಾಟದ ಸಂದರ್ಭ ದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದ ಸ್ಥಳಗಳ ಕುರಿತು ಮಾಹಿತಿ ಕಲೆ ಹಾಕುವ ಕೆಲಸ ಮಾಡಲಾಗುತ್ತಿದೆ. ಈ ಕಾರ್ಯದಲ್ಲಿ ಸಾರ್ವಜನಿಕ ಸಹಭಾಗಿತ್ವ ಕೋರಲಾಗುತ್ತಿದ್ದು, ಜನರು ತಮಗೆ ತಿಳಿದ ಸ್ಥಳಗಳ ಕುರಿತ ಮಾಹಿತಿಗಳನ್ನು ಇಲಾಖೆಯೊಂದಿಗೆ ಹಂಚಿಕೊಳ್ಳಬಹುದಾಗಿದೆ ಎಂದು ಪ್ರವಾ ಸೋದ್ಯಮ ಇಲಾಖೆ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಜನರು ತಮಗೆ ತಿಳಿದ ವ್ಯಕ್ತಿಗಳ ಬಗ್ಗೆ ಕಥೆಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಬಹುದು. ಹಾಗೆಯೇ ತಮಗೆ ತಿಳಿದ ಸ್ಥಳಗಳ ಕುರಿತ ಮಾಹಿತಿ ನೀಡಿದರೆ, ಆ ಸ್ಥಳಗಳನ್ನು ಪ್ರವಾಸೋದ್ಯಮದ ಪಟ್ಟಿಯಲ್ಲಿ ಸೇರ್ಪಡೆಗೊಳಿಸಲಾಗುತ್ತದೆ. ಸ್ವಾತಂತ್ರ್ಯ ಹೋರಾಟದ ಬಗ್ಗೆ ಸಾಕಷ್ಟು ಸ್ಥಳೀಯ ಮಾಹಿತಿಗಳಿದ್ದು, ಕಲ್ಯಾಣ ಕರ್ನಾಟಕ ಪ್ರದೇಶವು ಅಂತಹ ಅನೇಕ ಸ್ಥಳಗಳನ್ನು ಹೊಂದಿದೆ.
ಇಲಾಖೆಯು ರಾಜ್ಯದಲ್ಲಿ 770 ಪ್ರವಾಸೋದ್ಯಮ ತಾಣಗಳನ್ನು ಪಟ್ಟಿ ಮಾಡಿದೆ. ಅದರಲ್ಲಿ 25 ಕಡಿಮೆ ಪ್ರಸಿದ್ಧ ಸ್ಥಳಗಳನ್ನು ಅಂತಿಮಗೊಳಿಸಿದೆ. ಸಿದ್ಧಪಡಿಸಲಾಗುತ್ತಿರುವ ಪಟ್ಟಿಯಲ್ಲಿ ಸ್ವಾತಂತ್ರ್ಯ ಹೋರಾಟದ ಭಾಗವಾಗಿರುವವರನ್ನೂ ಸೇರಿಸಲಾಗುವುದು. ಈ 25 ತಾಣಗಳನ್ನು ಪ್ರವಾಸಿಗರು ಆಗಾಗ್ಗೆ ಭೇಟಿ ನೀಡುವ ಜನಪ್ರಿಯ ತಾಣಗಳಿಗೆ ಲಿಂಕ್ ಮಾಡಲಾಗುತ್ತಿದೆ. ಇದರಿಂದ ಈ ಸ್ಥಳಗಳ ಕುರಿತಂತೆಯೂ ಹೆಚ್ಚು ಹೆಚ್ಚು ಜನರು ತಿಳಿದುಕೊಳ್ಳುವಂತೆ ಮಾಡಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.

Articles You Might Like

Share This Article