ರಾಜ್ಯದಲ್ಲಿ ಕೋವಿಡ್ ನಿರ್ಬಂಧ ಸಂಪೂರ್ಣ ತೆರವು

Social Share

ಬೆಂಗಳೂರು :  ಕೊರೊನಾ ಸೋಂಕು ಭಾರೀ ಪ್ರಮಾಣದಲ್ಲಿ ಇಳಿಮುಖವಾದ ಬೆನ್ನಲ್ಲೇ ರಾಜ್ಯದಲ್ಲಿ ಕೋವಿಡ್ ನಿರ್ಬಂಧಗಳನ್ನು ಸಂಪೂರ್ಣವಾಗಿ ತೆರವುಗೊಳಿಸಲಾಗಿದೆ. ರಾಜ್ಯದಲ್ಲಿ ಕೋವಿಡ್ ಸೋಂಕಿನ ಪ್ರಮಾಣ ಗಣನೀಯವಾಗಿ ಇಳಿಕೆಯಾಗಿದ್ದು, ಜನಜೀವನ ಹಾಗೂ ಆರ್ಥಿಕತೆಗೆ ಮತ್ತೆ ಚೇತರಿಕೆ ಒದಗಿಸಲು ಶಿಕ್ಷಣ, ಸಾಂಸ್ಕøತಿಕ, ಸಭೆ- ಸಮಾರಂಭಗಳು, ಕ್ರೀಡೆ, ಮನರಂಜನಾ ಚಟುವಟಿಕೆಗಳು, ಜಾತ್ರೆ, ಉತ್ಸವಗಳು ಸೇರಿದಂತೆ ವಿವಿಧ ರಂಗಗಳ ಮೇಲೆ ವಿಸಿದ್ದ ನಿರ್ಬಂಧಗಳನ್ನು ತೆರವುಗೊಳಿಸಲಾಗಿದೆ.
ಮದುವೆ, ಶವ ಸಂಸ್ಕಾರಗಳಲ್ಲಿ ಭಾಗವಹಿಸುವವರ ಸಂಖ್ಯೆಗೆ ಮಿತಿಗೊಳಿಸಲಾಗಿದ್ದ ನಿರ್ಬಂಧಗಳನ್ನು ಕೂಡ ಮುಕ್ತಗೊಳಿಸಲಾಗಿದೆ. ಸಿನಿಮಾ, ನಾಟಕ, ಥಿಯೇಟರ್‍ಗಳು, ಶಾಲೆ, ಕಾಲೇಜು, ಗ್ರಂಥಾಲಯ, ತರಬೇತಿ ಕೇಂದ್ರಗಳು, ಕ್ರೀಡಾ ಚಟುವಟಿಕೆಗಳು, ಎಲ್ಲಾ ವಾಣಿಜ್ಯ ವಹಿವಾಟುಗಳಿಗೂ ಕೂಡ ಯಾವುದೇ ನಿರ್ಬಂಧಗಳು ಇರುವುದಿಲ್ಲ. ಸಭೆ, ಸಮಾರಂಭ, ವಹಿವಾಟುಗಳಿಗೆ ಪೂರ್ವಾನುಮತಿಯ ಅಗತ್ಯ ಇಲ್ಲ.
ಕೋವಿಡ್ ನಿಯಂತ್ರಣಕ್ಕೆ ಮಾ¸್ಕï ಧರಿಸುವುದು, ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಮತ್ತಿತರ ಸುರಕ್ಷತಾ ಕ್ರಮಗಳನ್ನು ಪ್ರತಿಯೊಬ್ಬರೂ ಪಾಲಿಸಬೇಕು. 15 ರಿಂದ 18 ವರ್ಷದವರೂ ಸೇರಿ ಅರ್ಹ ವಯೋಮಾನದವರೆಲ್ಲರೂ ಮೊದಲ ಮತ್ತು ಎರಡನೆ ಡೋಸ್ ಲಸಿಕೆ ಪಡೆಯಬೇಕು. ಆರೋಗ್ಯ, ಮುಂಚೂಣಿ ಕಾರ್ಯಕರ್ತರು, ಸಹ ಅಸ್ವಸ್ಥತೆ (ಕೊ-ಮಾರ್ಬಿಡಿಟಿ) ಹೊಂದಿದ 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ಬೂಸ್ಟರ್ ಡೋಸ್ ಲಸಿಕೆ ಪಡೆಯಬೇಕು ಎಂದು ಅಕಾರಿಗಳು ತಿಳಿಸಿದ್ದಾರೆ.
ನಿರ್ಬಂಧಗಳನ್ನು ತೆಗೆದುಹಾಕಲು ತಾಂತ್ರಿಕ ಸಲಹಾ ಸಮಿತಿ ಹಸಿರು ನಿಶಾನೆ ತೋರಿದೆ. ಆದರೆ, ಕಟ್ಟುನಿಟ್ಟಾದ ಕೋವಿಡ್-ಸೂಕ್ತ ನಡವಳಿಕೆಗಳಾದ ಮಾಸ್ಕ ಧಾರಣೆ, ರೋಗಲಕ್ಷಣ ಇರುವ ವ್ಯಕ್ತಿಗಳ ಪರೀಕ್ಷೆ, ಜನನಿಬಿಡ ಪ್ರದೇಶಗಳಲ್ಲಿ ದೈಹಿಕ ಅಂತರ, ಹ್ಯಾಂಡ್ ಸ್ಯಾನಿಟೈಸರ್ ಬಳಕೆ ಮುಂದುವರಿಸಬೇಕೆಂದು ತಿಳಿಸಿದೆ.
ಫೆ.28ರಂದು ಸರ್ಕಾರದ ಆದೇಶವು ಅಂತ್ಯಗೊಂಡಿದ್ದು, ಹೀಗಾಗಿ ಎಲ್ಲಾ ನಿರ್ಬಂಧಗಳನ್ನು ತೆರವುಗೊಳಿಸಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಯುಕ್ತ ದೀಪ್ ರಂದೀಪ್ ಅವರು ತಿಳಿಸಿದ್ದಾರೆ.

Articles You Might Like

Share This Article