ಶಾಲಾ ಮಕ್ಕಳಿಗೆ ‘ಪ್ರವಾಸ ಭಾಗ್ಯ’ ಮತ್ತೆ ಪ್ರಾರಂಭ

Social Share

ಬೆಂಗಳೂರು,ನ.16- ರಾಜ್ಯದ ನೆಲಜಲ, ಇತಿಹಾಸವನ್ನು ತಿಳಿಯುವ ಸದುದ್ದೇಶದಿಂದ ಹಿಂದಿನ ಸರ್ಕಾರದಲ್ಲಿ ಜಾರಿಗೆ ತಂದಿದ್ದ ಶಾಲಾ ಮಕ್ಕಳ ಪ್ರವಾಸ ಭಾಗ್ಯ ಮತ್ತೆ ಪ್ರಾರಂಭವಾಗಲಿದೆ.

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ಈ ಕುರಿತು ಸುತ್ತೋಲೆ ಹೊರಡಿಸಿದ್ದು, ಕಳೆದ ಎರಡು ವರ್ಷಗಳಿಂದ
ತಾತ್ಕಾಲಿಕವಾಗಿ ರದ್ದುಗೊಂಡಿದ್ದ ಶಾಲಾ ಮಕ್ಕಳ ಪ್ರವಾಸ ಭಾಗ್ಯ ಪ್ರಾರಂಭವಾಗಲಿದ್ದು, ಕೋವಿಡ್ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕೆಂದು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.

ಮುಂದಿನ ತಿಂಗಳ ಅಂತ್ಯದೊಳಗೆ ಶಾಲಾ ಮಕ್ಕಳನ್ನು ಪ್ರೇಕ್ಷಣೀಯ ಸ್ಥಳಗಳಿಗೆ ಕರೆದೊಯ್ಯುವ ಶಾಲಾ ಪ್ರವಾಸ ಭಾಗ್ಯವನ್ನು ಪ್ರಾರಂಭಿಸಬೇಕು, ಜನವರಿ 1ರೊಳಗೆ ಈ ಪ್ರಕ್ರಿಯೆ ಪೂರ್ಣಗೊಳ್ಳಬೇಕೆಂದು ಸುತ್ತೋಲೆಯಲ್ಲಿ ಸ್ಪಷ್ಟಪಡಿಸಲಾಗಿದೆ.

2022ರ ಡಿಸೆಂಬರ್ ಅಂತ್ಯದೊಳಗೆ ಮಕ್ಕಳನ್ನು ವಾರ್ಷಿಕ ಪ್ರವಾಸಕ್ಕೆ ಕರೆದುಕೊಂಡು ಹೋಗಬೇಕು. ವಿದ್ಯಾರ್ಥಿಗಳನ್ನು ಪ್ರವಾಸಕ್ಕೆ ಕರೆದೊಯ್ಯುವ ಕುರಿತು ಅವರ ಪೋಷಕರಿಂದ ಕಡ್ಡಾಯವಾಗಿ ಒಪ್ಪಿಗೆ ಪತ್ರ ಪಡೆಯಬೇಕು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತ ಡಾ. ವಿಶಾಲ್.ಆರ್ ಸೂಚಿಸಿದ್ದಾರೆ.

ಮಕ್ಕಳನ್ನು ಕರೆದೊಯ್ಯಲು ಶಾಲೆಗಳು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್‍ಆರ್‍ಟಿಸಿ) ಅಥವಾ ಪ್ರವಾಸೋದ್ಯಮ ಇಲಾಖೆಯಿಂದ ವಾಹನಗಳನ್ನು ಬಾಡಿಗೆಗೆ ಪಡೆಯುವುದು ಕಡ್ಡಾಯವಾಗಿದೆ. ಶಾಲಾ ಪ್ರವಾಸಗಳಿಗೆ ಖಾಸಗಿ ವಾಹನಗಳನ್ನು ಬಾಡಿಗೆಗೆ ತೆಗೆದುಕೊಳ್ಳಲು ಶಾಲೆಗಳಿಗೆ ಅನುಮತಿ ಇರುವುದಿಲ್ಲ ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.

ಕ್ಯಾನ್ಸರ್‌ಗೆ ನಕಲಿ ಔಷಧಿ ತಯಾರಿಸುತ್ತಿದ್ದ ವೈದ್ಯರು ಸೇರಿ 7 ಮಂದಿ ಬಂಧನ

ವಿದ್ಯಾರ್ಥಿನಿಯರ ಸುರಕ್ಷತೆ ಬಗ್ಗೆ ಕಾಳಜಿ ವಹಿಸಿರುವ ಸಾರ್ವಜನಿಕ ಶಿಕ್ಷಣ ಇಲಾಖೆಯು ಪ್ರವಾಸದಲ್ಲಿ ಬಾಲಕಿಯರ ಮೇಲ್ವಿಚಾರಣೆಗೆ ಮಹಿಳಾ ಶಿಕ್ಷಕರನ್ನು ನಿಯೋಜಿಸಬೇಕೆಂದು ಶಾಲೆಗಳಿಗೆ ಸೂಚಿಸಿದೆ. ಜೊತೆಗೆ ಪ್ರವಾಸದ ಸಂದರ್ಭದಲ್ಲಿ ಅಪಘಾತಗಳು ಅಥವಾ ಅಹಿತಕರ ಏನಾದರೂ ನಡೆದಲ್ಲಿ ಇಲಾಖೆ ಇಲ್ಲವೇ ಶಾಲಾ ಆಡಳಿತ ಮಂಡಳಿ ಜವಾಬ್ದಾರಿ ಆಗಿರುವುದಿಲ್ಲ ಎಂದು ಹೇಳಲಾಗಿದೆ.

ಮಕ್ಕಳಲ್ಲಿ ಕನಸುಗಳನ್ನು ಬಿತ್ತುವ ಮೂಲಕ ವಿದ್ಯಾವಂತ ಸಮಾಜ ನಿರ್ಮಾಣ ಭರವಸೆಯೊಂದಿಗೆ ಈ ಯೋಜನೆಗೆ ಕೇಂದ್ರ ಸರಕಾರ ಅನುನೋದನೆ ನೀಡಿದೆ. ಅದರಂತೆ 2017-18ನೇ ಸಾಲಿನಲ್ಲಿ ಕೇಂದ್ರ ಸರಕಾರ, ಸರಕಾರಿ ಪ್ರೌಢಶಾಲೆಗಳ 9ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ರಾಜ್ಯದ ಎಲ್ಲಾ ಜಿಲ್ಲೆಗಳ ತಲಾ 100 ವಿದ್ಯಾರ್ಥಿಗಳಿಗೆ ಪ್ರವಾಸಕ್ಕೆ ಅವಕಾಶ ಮಾಡಿಕೊಟ್ಟಿದೆ.

ಶ್ರದ್ದಾ ಹತ್ಯೆ ಮಾಸುವ ಮುನ್ನವೇ ಮತ್ತೊಂದು ವಿಕೃತ ಘಟನೆ ಬೆಳಕಿಗೆ..!

ಎಲ್ಲೆಲ್ಲಿಗೆ ಪ್ರವಾಸ?
ಆಯಾ ಜಿಲ್ಲೆಗಳಲ್ಲಿನ ಪ್ರತಿಷ್ಠಿತ ವೈದ್ಯಕೀಯ, ಎಂಜಿನಿಯರಿಂಗ್ ಕಾಲೇಜುಗಳಿಗೆ ಅಥವಾ ಇತರೆ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ವಿದ್ಯಾರ್ಥಿಗಳನ್ನು ಪ್ರವಾಸ ಕರೆದೊಯ್ಯುವ ಕಾರ್ಯಕ್ರಮ ಇದಾಗಿದೆ.

ಜಿಲ್ಲೆಯಲ್ಲಿ ಉನ್ನತ ಶಿಕ್ಷಣ ಸಂಸ್ಥೆಗಳಿಲ್ಲದಿದ್ದಲ್ಲಿ ನೆರೆಹೊರೆ ಜಿಲ್ಲೆಯ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಪ್ರವಾಸ ಕರೆದೊಯ್ಯಬಹುದು. ಪ್ರವಾಸದ ಸಂದರ್ಭದಲ್ಲಿ ಅಲ್ಲಿನ ತಜ್ಞರೊಂದಿಗೆ ಸಂವಾದ, ಉಪನ್ಯಾಸ, ಪ್ರಾಯೋಗಿಕ ತರಬೇತಿ ನೀಡುವ ಪ್ರಯೋಗಾಲಯ, ಕಾರ್ಯಾಲಯಗಳನ್ನು ಭೇಟಿ ಮಾಡಿಸಬೇಕು. ಮಕ್ಕಳು ತಮ್ಮ ಶೈಕ್ಷಣಿಕ ಜೀವನವನ್ನು ರೂಪಿಸಿಕೊಳ್ಳಲು ಸಹಕಾರಿಯಾಗುವಂತೆ ಮಾಹಿತಿ ಒದಗಿಸಬೇಕು.

ಪ್ರವಾಸದ ಸಮಯ:
ಇದೇ ನವೆಂಬರ್ ಮತ್ತು ಡಿಸೆಂಬರ್‍ನಲ್ಲಿ ಮಕ್ಕಳನ್ನು ಪ್ರವಾಸಕ್ಕೆ ಕೊಂಡೊಯ್ಯಬೇಕಿದೆ. ಜತೆಗೆ ಪ್ರವಾಸದಿಂದ ಆದ ಲಾಭ ಮತ್ತು ಉತ್ತಮ ಅಂಶಗಳನ್ನು ವಿದ್ಯಾರ್ಥಿಗಳಿಂದ ಪಡೆದು ವರದಿ ಸಿದ್ಧಪಡಿಸಿ ಆರ್‍ಎಂಎಸ್‍ಎ ಕೇಂದ್ರ ಕಚೇರಿಗೆ ವರದಿ ಕಳುಹಿಸಬೇಕಿದೆ.

BIG NEWS: ನ್ಯಾಟೊ ಸದಸ್ಯ ಪೊಲೆಂಡ್ ಮೇಲೆ ರಷ್ಯಾ ಕ್ಷಿಪಣಿ ದಾಳಿ

ಮಕ್ಕಳಲ್ಲಿ ಸಹಕಾರ, ಹೊಂದಾಣಿಕೆ, ನಾಯಕತ್ವ ಮನೋಭಾವ, ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳಲು ಪ್ರೇರಕವಾಗುವಂತೆ ಪ್ರವಾಸ ಏರ್ಪಡಿಸಬೇಕು. ತರಗತಿ ಕಲಿಕೆಗೆ ಪೂರಕವಾಗುವಂತೆ ಹಾಗೂ ಉನ್ನತ ಶಿಕ್ಷಣಕ್ಕೆ ಅನುಕೂಲವಾಗುವಂತೆ ಮತ್ತು ನೈಜ ಜೀವನದಲ್ಲಿ ಸ್ವಾವಲಂಬಿಯಾಗಲು ಅನುಕೂಲವಾಗುವಂತೆ ವಾತಾವರಣ ರೂಪಿಸಿ ಅಂತಹ ಬೋಧನೆಯನ್ನು ಪ್ರವಾಸದಲ್ಲಿ ನೀಡಬೇಕು.

Articles You Might Like

Share This Article