ಬೆಂಗಳೂರು, ಜ.18- ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಮಂಜೂರಾದ ಹುದ್ದೆಗಳಲ್ಲಿ ಎರಡೂವರೆ ಲಕ್ಷಕ್ಕೂ ಹೆಚ್ಚು ಹುದ್ದೆಗಳು ಖಾಲಿ ಇವೆ. ಇದುವರೆಗೆ ಸರ್ಕಾರ ಮಂಜೂರು ಮಾಡಿದ್ದ 7,69,981 ಹುದ್ದೆಗಳಲ್ಲಿ 5,11,272 ಹುದ್ದೆಗಳು ಮಾತ್ರ ಭರ್ತಿಯಾಗಿವೆ. ಉಳಿದ 2,58,709 ಹುದ್ದೆಗಳ ನೇಮಕವಾಗದೇ ಉಳಿದಿವೆ.
ರಾಜ್ಯ ಸರ್ಕಾರದ ಒಟ್ಟು 43 ಇಲಾಖೆಗಳಲ್ಲೂ ಒಂದಲ್ಲ ಒಂದು ಹುದ್ದೆ ಖಾಲಿ ಇದೆ. ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯಲ್ಲಿ ಅತಿ ಹೆಚ್ಚು ಹುದ್ದೆಗಳು ಮಂಜೂರಾಗಿದ್ದು, 66,059 ಹುದ್ದೆಗಳು ಖಾಲಿ ಇವೆ. ಅತಿ ಹೆಚ್ಚು ಹುದ್ದೆಗಳು ಖಾಲಿ ಇರುವ ಇಲಾಖೆಯು ಇದೇ ಆಗಿದೆ. ಮಂಜೂರಾದ 2,81,862 ಹುದ್ದೆಗಳ ಪೈಕಿ 2,15, 803 ಹುದ್ದೆಗಳು ಮಾತ್ರ ಭರ್ತಿಯಾಗಿವೆ.
ಈ ಇಲಾಖೆಯಲ್ಲಿ ಶಿಕ್ಷಕರ ಹುದ್ದಗಳೇ ಹೆಚ್ಚಾಗಿವೆ. ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆಯಲ್ಲಿ 34, 644 ಹುದ್ದೆಗಳು ಭರ್ತಿಯಾಗಬೇಕಿದ್ದು, ಎರಡನೇ ಅತಿ ಹೆಚ್ಚು ಹುದ್ದೆಗಳು ಖಾಲಿ ಇರುವ ಇಲಾಖೆಯಲಾಗಿದೆ. ಈ ಇಲಾಖೆಗೆ 74, 857 ವಿವಿಧ ಹುದ್ದೆಗಳು ಮಂಜೂರಾಗಿದ್ದು, 40, 213 ಹುದ್ದೆಗಳು ಭರ್ತಿಯಾಗಿವೆ.
ಪರಿಸರ ಮತ್ತು ಜೀವಿ ಶಾಸ್ತ್ರ ಇಲಾಖೆಯಲ್ಲಿ ಮಂಜುರಾದ 12 ಹುದ್ದೆಗಳಲ್ಲಿ ಕೇವಲ 4 ಹುದ್ದೆಗಳು ಮಾತ್ರ ಖಾಲಿ ಇವೆ. ಇದು ಅತಿ ಕಡಿಮೆ ಹುದ್ದೆ ಖಾಲಿ ಇರುವ ಇಲಾಖೆಯಾಗಿದೆ. ಒಳಾಡಳಿತ ಇಲಾಖೆಯಲ್ಲಿ ಮಂಜೂರಾಗಿದ್ದ 1,26,913 ಹುದ್ದೆಗಳ ಪೈಕಿ ಭರ್ತಿಯಾಗಿರುವುದು 1,03,356 ಹುದ್ದೆಗಳು ಭರ್ತಿಯಾಗಿದ್ದು, ಇನ್ನೂ 23,557 ಹುದ್ದೆಗಳು ಖಾಲಿ ಇವೆ. ಎರಡನೇ ಅತಿ ಹೆಚ್ಚು ಹುದ್ದೆಗಳು ಮಂಜೂರಾಗಿರುವ ಇಲಾಖೆ ಇದಾಗಿದೆ.
RSS-BJPಯಿಂದ ಭಯದ ದೇಶದಲ್ಲಿ ವಾತಾವರಣ ಸೃಷ್ಟಿ : ರಾಹುಲ್
ಹಾಗೆಯೇ ಉನ್ನತ ಶಿಕ್ಷಣ ಇಲಾಖೆಯಲ್ಲಿ ಮಂಜುರಾದ 24,785 ಹುದ್ದೆಗಳಲ್ಲಿ 12,111 ಹುದ್ದೆಗಳು ಮಾತ್ರ ಭರ್ತಿಯಾಗಿದ್ದು, ಶೇ 50ರಷ್ಟು ಹುದ್ದೆಗಳು ಖಾಲಿ ಇವೆ. ಅಂದರೆ, 12,674 ಹುದ್ದೆಗಳು ಭರ್ತಿಯಾಗಿಲ್ಲ.
ಇನ್ನೂ ಕಂದಾಯ ಇಲಾಖೆಯಲ್ಲಿ 10,621, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ ಇಲಾಖೆಯಲ್ಲಿ 10,409 ವಿವಿಧ ಹುದ್ದೆಗಳು ಖಾಲಿ ಉಳಿದಿವೆ. ಕೃಷಿ ಇಲಾಖೆಯಲ್ಲಿ 6,316, ಪಶುಸಂಗೋಪನಾ ಇಲಾಖೆಯಲ್ಲಿ 9, 972, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲಿ 8,063, ಆರ್ಥಿಕ ಇಲಾಖೆಯಲ್ಲಿ 8,779, ಕಾನೂನು ಇಲಾಖೆಯಲ್ಲಿ 8,370 ಹುದ್ದೆಗಳು ಖಾಲಿ ಉಳಿದಿವೆ.
ಶಾರುಖ್ ಖಾನ್ಗೆ ವಿಶ್ವದ 4ನೇ ಶ್ರೀಮಂತ ನಟನ ಪಟ್ಟ
ಇದೇ ರೀತಿ ವಿವಿಧ ಇಲಾಖೆಗಳಲ್ಲೂ ವಿವಿಧ ಹುದ್ದೆಗಳು ಭರ್ತಿಯಾಗದೇ ಉಳಿದಿವೆ. ಮಂಜೂರಾಗಿರುವ ಹುದ್ದೆಗಳು ಪೂರ್ಣ ಪ್ರಮಾಣದಲ್ಲಿ ಭರ್ತಿಯಾಗಿರುವ ಇಲಾಖೆ ಯಾವುದೂ ಇಲ್ಲ. ರಾಜ್ಯ ಏಳನೇ ವೇತನ ಆಯೋಗಕ್ಕೆ ಸಂಬಂಸಿದಂತೆ ಸರ್ಕಾರ ಹೊರಡಿಸಿರುವ ವಿಶೇಷ ರಾಜ್ಯಪತ್ರದಲ್ಲಿ ಈ ಮಾಹಿತಿ ಒದಗಿಸಲಾಗಿದೆ.
Karnataka, government, two lakh, vacancies,