KSRTC ಸೇವೆ ಎಸ್ಮಾ ಕಾಯ್ದೆಯಡಿ ತರಲು ಸರ್ಕಾರ ಸೂಚನೆ

Social Share

ಬೆಂಗಳೂರು,ಡಿ.30- ಕೆಎಸ್‍ಆರ್‍ಟಿಸಿ ಸೇವೆಯನ್ನು ಅಗತ್ಯ ಸೇವೆ ನಿರ್ವಹಣಾ ಕಾಯ್ದೆ (ಎಸ್ಮಾ) ಅಡಿ ತರಲು ರಾಜ್ಯ ಸರ್ಕಾರ ಅಧಿಕೃತ ಸೂಚನೆ ನೀಡಿದ್ದು, ಈ ಹಿನ್ನೆಲೆಯಲ್ಲಿ ಮುಷ್ಕರಕ್ಕೆ ನಡೆಸಲು ಮುಂದಾಗಿದ್ದ ಸಿಬ್ಬಂದಿಗಳಿಗೆ ಭಾರೀ ಹಿನ್ನಡೆ ಉಂಟಾದಂತಾಗಿದೆ.

ಅಸೂಚನೆಯ ಪ್ರಕಾರ ಜನವರಿ 1, 2023ರಿಂದ ಜುಲೈ 31, 2023ರವರೆಗೆ ಕೆಎಸ್‍ಆರ್‍ಟಿಸಿ ಎಸ್ಮಾ ಅಡಿಯಲ್ಲಿರಲಿದೆ.ಖಾಯಂ ಆಧಾರದ ಮೇಲೆ ಅಥವಾ ಗುತ್ತಿಗೆ, ತಾತ್ಕಾಲಿಕ, ಹೊರಗುತ್ತಿಗೆ ಆಧಾರದ ಮೇಲೆ ಬಂದಿರುವ ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸಲು ನಿರಾಕರಿಸಿದರೆ ಅದು ಸಾರ್ವಜನಿಕ ಉಪಯುಕ್ತ ಸೇವೆಗಳ ನಿರ್ವಹಣೆಯ ಮೇಲೆ ಪರಿಣಾಮ ಬೀರುತ್ತದೆ. ಸಿಬ್ಬಂದಿಗಳ ಮುಷ್ಕರ ಸಾರ್ವಜನಿಕರು ಸಂಕಷ್ಟಕ್ಕೆ ಸಿಲುವಂತಾಗುತ್ತದೆ ಎಂದು ಸೂಚನೆಯಲ್ಲಿ ಸರ್ಕಾರ ತಿಳಿಸಿದೆ.

ಮುಷ್ಕರಗಳಿಂದ ಸಾರ್ವಜನಿಕ ಜೀವನದ ಮೇಲೆ ಗಂಭೀರ ಪರಿಣಾಮ ಬೀರುವ ಹಿನ್ನೆಲೆಯಲ್ಲಿ ಸಿಬ್ಬಂದಿಗಳ ಮೇಲೆ ಎಸ್ಮಾ ಜಾರಿ ಮಾಡುವಂತೆ ಕೆಎಸ್‍ಆರ್‍ಟಿಸಿಗೆ ಸರ್ಕಾರ ಸೂಚನೆ ನೀಡಿದ್ದು, ನಿಯಮ ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸೂಚಿಸಿದೆ ಎಂದು ಮೂಲಗಳು ತಿಳಿಸಿವೆ.

ಕಾರು ಅಪಘಾತದಲ್ಲಿ ಗಂಭೀರ ಗಾಯ, ರಿಷಭ್ ಪಂತ್ ಜೀವನ್ಮರಣ ಹೋರಾಟ

ಕೆಎಸ್‍ಆರ್‍ಟಿಸಿ ತನ್ನ ಎಲ್ಲಾ ವಿಭಾಗಗಳು, ಕಾರ್ಯಾಗಾರಗಳು, ಕಚೇರಿಗಳು ಮತ್ತು ಬಸ್ ನಿಲ್ದಾಣಗಳಲ್ಲಿ ಸರ್ಕಾರದ ಅಸೂಚನೆಯ ಪ್ರತಿಯನ್ನು ಹಾಕಬೇಕು ಮತ್ತು ಅಸೂಚನೆ ಬಗ್ಗೆ ನೌಕರರು ಮತ್ತು ಸಾರಿಗೆ ಸಂಘಟನೆಗಳ ಗಮನಕ್ಕೆ ತರಬೇಕು ಎಂದು ಸೂಚಿಸಿದೆ ಎಂದು ತಿಳಿದುಬಂದಿದೆ.

ಸರ್ಕಾರದ ಅಸೂಚನೆ ಕುರಿತು ಪ್ರತಿಕ್ರಿಯೆ ನೀಡಿರುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಸಂಘದ ರಾಜ್ಯಾಧ್ಯಕ್ಷ ಚಂದ್ರಶೇಖರ ಆರ್ ಅವರು, ಈ ಆದೇಶವು ಸಾರಿಗೆ ನಿಗಮಕ್ಕೆ ಯಾವುದೇ ಸೂಚನೆ ನೀಡದೆ ನೌಕರರು ಯಾವುದೇ ದಿಢೀರ್ ಮುಷ್ಕರದಲ್ಲಿ ತೊಡಗುವುದನ್ನು ನಿಷೇಸುತ್ತದೆ. ಆದರೆ ನಿಯಮಾನುಸಾರ ಕಾರ್ಮಿಕ ಸಂಘಟನೆಗಳು ನಡೆಸುವ ಮುಷ್ಕರಗಳನ್ನು ನಿಷೇಸುವುದಿಲ್ಲ ಎಂದಿದ್ದಾರೆ.

6ನೇ ವೇತನ ಆಯೋಗದ ಅನ್ವಯ ಸಾರಿಗೆ ನಿಗಮಕ್ಕೆ ವೇತನ ಹೆಚ್ಚಳ, ವಜಾಗೊಂಡಿರುವ ನೌಕರರ ಮರುಸೇರ್ಪಡೆ, ನೌಕರರ ವಿರುದ್ಧದ ಪೊಲೀಸ್ ದೂರು ಹಿಂಪಡೆಯುವುದು ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕೆಎಸ್‍ಆರ್‍ಟಿಸಿ ನೌಕರರ ಸಂಘವು ಪ್ರತಿಭಟನೆ ನಡೆಸುತ್ತಿದೆ.

#KarnatakaGovt, #KSRTC, #ESMA,

Articles You Might Like

Share This Article