ವಿವಿಧ ಗ್ರಾಮ ಪಂಚಾಯ್ತಿಗಳ 262 ಸದಸ್ಯ ಸ್ಥಾನಗಳಿಗೆ ಚುನಾವಣೆ ಘೋಷಣೆ

Social Share

ಬೆಂಗಳೂರು,ಫೆ.2- ರಾಜ್ಯದ ವಿವಿಧ ಗ್ರಾಮ ಪಂಚಾಯ್ತಿಗಳ 262 ಸದಸ್ಯ ಸ್ಥಾನಗಳಿಗೆ ರಾಜ್ಯ ಚುನಾವಣಾ ಆಯೋಗ ವೇಳಾ ಪಟ್ಟಿ ಪ್ರಕಟಿಸಿದೆ. ಏಪ್ರಿಲ್ ತಿಂಗಳವರೆಗೆ ಅವ ಮುಕ್ತಾಯವಾಗುವ ಎಂಟು ಗ್ರಾಮ ಪಂಚಾಯ್ತಿಗಳ 127 ಸದಸ್ಯ ಸ್ಥಾನಗಳಿಗೆ ಸಾರ್ವತ್ರಿಕ ಚುನಾವಣೆ ಹಾಗೂ ವಿವಿಧ ಕಾರಣಗಳಿಂದ ತೆರವಾಗಿರುವ 30 ಜಿಲ್ಲೆಗಳ 103 ಗ್ರಾಪಂಗಳ 135 ಸದಸ್ಯ ಸ್ಥಾನಗಳಿಗೆ ಉಪ ಚುನಾವಣೆ ನಡೆಸಲು ಆಯೋಗ ವೇಳಾಪಟ್ಟಿ ಘೋಷಣೆ ಮಾಡಿದೆ.

ಒಟ್ಟು 262 ಸದಸ್ಯ ಸ್ಥಾನಗಳಿಗೆ ಚುನಾವಣೆ ನಡೆಸಲು ಆಯಾ ಜಿಲ್ಲಾಧಿಕಾರಿಗಳು ಫೆ.8ರಂದು ಚುನಾವಣಾ ಅಧಿಸೂಚನೆ ಹೊರಡಿಸಲಿದ್ದಾರೆ. ಅಂದಿನಿಂದ ಫೆ. 14ರವರೆಗೂ ನಾಮಪತ್ರ ಸಲ್ಲಿಸಲು ಅವಕಾಶ ನೀಡಲಾಗಿದೆ.

ಫೆ.15ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ಉಮೇದುವಾರಿಕೆಯನ್ನು ವಾಪಸ್ ಪಡೆಯಲು ಫೆ.17 ಕಡೆಯ ದಿನವಾಗಿದೆ. ಅಗತ್ಯವಿದ್ದರೆ ಫೆ.25ರಂದು ಬೆಳಗ್ಗೆ 7ಗಂಟೆಯಿಂದ ಸಂಜೆ 5 ಗಂಟೆ ವರೆಗೆ ಮತದಾನ ನಡೆಸಲಾಗುತ್ತದೆ. ಒಂದು ವೇಳೆ ಮರು ಮತದಾನದ ಅವಶ್ಯಕತೆ ಇದ್ದರೆ ಫೆ.27ರಂದು ನಡೆಸಲಾಗುವುದು.

ಉಕ್ರೇನ್ ಜನವಸತಿ ಕಟ್ಟಡದ ಮೇಲೆ ರಷ್ಯಾ ರಾಕೆಟ್ ದಾಳಿ, ಮೂವರ ಸಾವು

ಫೆ.28ರಂದು ಆಯಾ ತಾಲ್ಲೂಕು ಕೇಂದ್ರಗಳಲ್ಲಿ ಬೆಳಗ್ಗೆ 8ಗಂಟೆಯಿಂದ ಮತ ಎಣಿಕೆ ಆರಂಭವಾಗಲಿದ್ದು, ಅಂದೇ ಫಲಿತಾಂಶ ಹೊರ ಬೀಳಲಿದೆ. ಚುನಾವಣಾ ಅಧಿಸೂಚನೆ ಹೊರಡಿಸುವ ಫೆ.8ರಿಂದಲೇ ಚುನಾವಣೆ ನಡೆಯುವ ಗ್ರಾಪಂ ವ್ಯಾಪ್ತಿಯಲ್ಲಿ ನೀತಿ ಸಂಹಿತೆ ಜಾರಿಗೆ ಬರಲಿದ್ದು, ಚುನಾವಣಾ ಪ್ರಕ್ರಿಯೆ ಮುಕ್ತಾಯವಾಗುವ ಫೆ.28ರವರೆಗೂ ಜಾರಿಯಲ್ಲಿರುತ್ತದೆ ಎಂದು ಆಯೋಗದ ಅಕೃತ ಪ್ರಕಟಣೆ ತಿಳಿಸಿದೆ.

ಸದನವನ್ನು ನಗೆಗಡಲಲ್ಲಿ ತೇಲಿಸಿದ ನಿರ್ಮಲಾ ಮಾತು

ದೇವನಹಳ್ಳಿ ತಾಲ್ಲುಕಿನ ಕೋರಮಂಗಲ, ಹಾರೋಹಳ್ಳಿ. ಬಂಟ್ವಾಳ ತಾಲ್ಲೂಕಿನ ಪುದು, ಸಕಲೇಶಪುರ ತಾಲ್ಲೂಕಿನ ಉಚ್ಚಂಗಿ, ವಣಗೂರು, ಮುದ್ದೆಬಿಹಾಳ ತಾಲ್ಲೂಕಿನ ಇಂಗಳಗೇರಿ, ಹರಪ್ಪನಹಳ್ಳಿ ತಾಲ್ಲೂಕಿನ ಹಾರಕನಾಳು ಹಾಗೂ ಗುರುಮಿಟಕಲ್ ತಾಲ್ಲೂಕಿನ ಅನಪೂರ ಗ್ರಾಮ ಪಂಚಾಯ್ತಿಗಳ 127 ಸದಸ್ಯ ಸ್ಥಾನಗಳಿಗೆ ಸಾರ್ವತ್ರಿಕ ಚುನಾವಣೆ ಘೋಷಣೆಯಾಗಿದೆ.

Karnataka, gram panchayat, election,

Articles You Might Like

Share This Article