ಬೆಂಗಳೂರು, ಫೆ.8- ತೀವ್ರ ವಿವಾದಕ್ಕೆ ಕಾರಣವಾಗಿ ನ್ಯಾಯಾಲಯದ ಮೆಟ್ಟಿಲೇರಿರುವ ಹಿಜಾಬ್ ಪ್ರಕರಣದ ವಿಚಾರಣೆ ಹೈಕೋರ್ಟ್‍ನಲ್ಲಿ ಇಂದು ತೀವ್ರ ಕುತೂಹಲ ಕೆರಳಿಸಿತ್ತು. ಹಿಜಾಬ್ ಧರಿಸುವುದಕ್ಕೆ ನಿರ್ಬಂಸಿರುವುದನ್ನು ವಿರೋಸಿ ಸಲ್ಲಿಕೆಯಾಗಿದ್ದ ಮೂರು ಅರ್ಜಿಗಳ ವಿಚಾರಣೆ ನ್ಯಾಯಮೂರ್ತಿ ಕೃಷ್ಣ ಎನ್.ದೀಕ್ಷಿತ್ ಅವರ ಏಕಸದಸ್ಯ ಪೀಠದಲ್ಲಿ ನಡೆದಿದ್ದು, ವಾದ ಮತ್ತು ಪ್ರತಿವಾದಿ ನ್ಯಾಯಾೀಶರು ಪ್ರಬಲ ಮತ್ತು ಸುದೀರ್ಘ ವಾದ ಮಂಡಿಸಿದರು.
ವಿಚಾರಣೆ ಆರಂಭದಲ್ಲಿ ನ್ಯಾಯಾೀಶರು ಕಾನೂನು ಪ್ರಕಾರ ವಿಚಾರಣೆ ನಡೆಸೋಣ. ಎಲ್ಲ ಭಾವನೆಗಳನ್ನೂ ಬದಿಗಿಡಿ. ಸಂವಿಧಾನ ಭಗವದ್ಗೀತೆ ಇದ್ದಂತೆ. ಹೀಗಾಗಿ ಸಂವಿಧಾನದ ಪ್ರಕಾರವೇ ವಿಚಾರಣೆ ನಡೆಸೋಣ ಎಂದು ಹೇಳಿದರು. ಅರ್ಜಿದಾರರ ಪರವಾಗಿ ಮೊದಲು ವಾದ ಮಂಡಿಸಿದ ಹಿರಿಯ ವಕೀಲ ಮಹಮ್ಮದ್ ತಾಹೀರ್, ಹಿಜಾಬ್ ಪರ-ವಿರೋಧವಾಗಿ ಹಲವು ಕಾಲೇಜುಗಳಲ್ಲಿ ಪ್ರತಿಭಟನೆ ಆರಂಭವಾಗಿದೆ.
ಹಿಜಾಬ್ ಧರಿಸಲು ಅವಕಾಶ ನೀಡಬೇಕೆಂದು ಮನವಿ ಸಲ್ಲಿಸಿದ್ದಾರೆ. ಶೈಕ್ಷಣಿಕ ವರ್ಷ ಮುಗಿಯುತ್ತ ಬಂದಿದೆ. ಕನಿಷ್ಟ ಎರಡು ತಿಂಗಳು ಹಿಜಾಬ್ ಧರಿಸಲು ಅವಕಾಶ ನೀಡಬೇಕು. ಆನಂತರ ಸಂಬಂಧಪಟ್ಟವರೊಂದಿಗೆ ಚರ್ಚಿಸಿ ಸರ್ಕಾರ ಹೊಸ ನೀತಿ ರೂಪಿಸಲಿ. ಅಲ್ಲಿಯವರೆಗೆ ಅವಕಾಶ ನೀಡಿ ಎಂದು ಮನವಿ ಮಾಡಿದರು.
ಪ್ರಪಂಚ ನಮ್ಮ ಕಡೆ ನೋಡುತ್ತಿದೆ. ವಿದ್ಯಾರ್ಥಿಗಳು ರಸ್ತೆಗಿಳಿಯುವ ಪರಿಸ್ಥಿತಿ ಎದುರಾಗಿದೆ. ಈ ಸಂದರ್ಭದಲ್ಲಿ ಸರ್ಕಾರದ ಪ್ರತಿಕ್ರಿಯೆ ಏನು ಎಂದು ನ್ಯಾಯಾಲಯ ಪ್ರಶ್ನೆ ಮಾಡಿತು. ಅಡ್ವೊಕೇಟ್ ಜನರಲ್ ಪ್ರಭುಲಿಂಗ ನಾವಡಗಿ ಪ್ರತಿಕ್ರಿಯಿಸಿ, ವಿದ್ಯಾರ್ಥಿಗಳು ಎರಡೆರಡು ಮನಸ್ಥಿತಿಯಲ್ಲಿ ಎಲ್ಲ ಅಂಶಗಳನ್ನೂ ಪರಿಶೀಲಿಸಿ ನೀತಿಯನ್ನು ರೂಪಿಸಲಾಗಿದೆ ಎಂದು ಹೇಳಿದರು.
ಅರ್ಜಿದಾರರ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲರಾದ ದೇವದಾಸ್ ಕಾಮತ್ ಅವರು, ಸಂವಿಧಾನ 19(1) ಎ ಅಡಿಯಲ್ಲಿ ಇಚ್ಛೆಯನುಸಾರ ಬಟ್ಟೆ ಧರಿಸುವುದು ಮುಸ್ಲಿಂ ಮಹಿಳೆಯರ ಹಕ್ಕಾಗಿದೆ. ಹಿಜಾಬ್ ಇಸ್ಲಾಂನ ಅತ್ಯಗತ್ಯ ಆಚರಣೆಯಾಗಿದೆ. ಹಿಜಾಬ್ ನಿರ್ಬಂಸುವ ಮೂಲಕ ಸರ್ಕಾರ ವಿದ್ಯಾರ್ಥಿನಿಯರ ಹಕ್ಕನ್ನು ಉಲ್ಲಂಘಿಸಿದೆ.
ಸಂವಿಧಾನ (21) ವಿ ಅನ್ವಯ ಇಚ್ಛಿಸುವ ಬಟ್ಟೆ ಧರಿಸುವ ಹಕ್ಕು ಮಹಿಳೆಯರಿಗಿದೆ. ಹಿಜಾಬ್ ಒಂದು ರೀತಿಯಲ್ಲಿ ಖಾಸಗಿತನದ ಹಕ್ಕಾಗಿದೆ ಎಂದು ಹೇಳಿದ ಅವರು, ಮದ್ರಾಸ್, ಬಾಂಬೆ, ಕೇರಳ ಹೈಕೋರ್ಟ್‍ನಲ್ಲಿ ಬಂದಿರುವ ತೀರ್ಪುಗಳು ಈ ವಿಚಾರಕ್ಕೆ ಸಂಬಂಸಿದ್ದಲ್ಲ ಎಂದು ಪ್ರತಿಪಾದಿಸಿದರು.
ಪವಿತ್ರ ಖುರಾನ್‍ನಲ್ಲಿ ಆಚರಣೆ ಬಗ್ಗೆ ಉಲ್ಲೇಖವಿರುವುದನ್ನು ಪ್ರತಿಪಾದಿಸಿದರು.
ಮಹಿಳೆಯರು ಧರಿಸಬೇಕಾದ ಬಟ್ಟೆ ಬಗ್ಗೆಯೂ ಖುರಾನ್‍ನಲ್ಲಿ ತಿಳಿಸಿದೆ. ತಲೆಯನ್ನು ಬಟ್ಟೆಯಿಂದ ಮರೆಮಾಚಬೇಕೆಂದು ಹೇಳಿದೆ. ಎದೆಯ ಮೇಲೆ, ಶಿರದ ಮೇಲೆ ಖಾಸಗಿ ಅಂಗಗಳ ಮೇಲೆ ವಸ್ತ್ರ ಧರಿಸಬೇಕೆಂದು ಉಲ್ಲೇಖಿಸಿದೆ. ಆಪ್ತ ವರ್ಗದ ಮುಂದೆ ಹಿಜಾಬ್‍ಗೆ ವಿನಾಯಿತಿ ಇದೆ. ಧಾರ್ಮಿಕ ಆಚರಣೆ ಅಡಚಣೆ ಗೊಂದಲವಿದ್ದಾಗ ನ್ಯಾಯಾಲಯ ತೀರ್ಮಾನ ಮಾಡಬೇಕು ಎಂದು ಮನವಿ ಮಾಡಿದರು.
ಇಸ್ಲಾಂನ ಎಲ್ಲ ಸೂಚನೆಗಳನ್ನೂ ಕಡ್ಡಾಯವಾಗಿ ಪಾಲಿಸಬೇಕೇ ಎಂದು ನ್ಯಾಯಾಲಯ ಪ್ರಶ್ನಿಸಿತು. ಧರ್ಮಪಾಲನೆ, ಮೂಲಭೂತ ಅಂಶಗಳಿಗೆ, ಆಚರಣೆಗಳಿಗೆ ಪೂರಕವಾಗಿರುತ್ತವೆ ಎಂದು ಹಲವು ತೀರ್ಪುಗಳನ್ನು ಉಲ್ಲೇಖಿಸಿದರು. ನ್ಯಾಯಾಲಯದಲ್ಲಿ ವಿಚಾರಣೆ ಮುಂದುವರೆದಿದೆ.
