ಬೆಂಗಳೂರು,ಡಿ.2- ಭಾರತ್ ಜೋಡೊ ಯಾತ್ರೆಗೆ ಕೆಜಿಎಫ್ ಚಿತ್ರದ ಹಾಡುಗಳನ್ನು ಜೋಡಿಸಿ ಸಂಕಷ್ಟಕ್ಕೆ ಸಿಲುಕಿದ ಕಾಂಗ್ರೆಸ್ಗೆ ಹೈಕೋರ್ಟ್ ಮತ್ತೊಮ್ಮೆ ನೋಟಿಸ್ ನೀಡಿದೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಜೈರಾಮ್ ರಮೇಶ್, ಸಾಮಾಜಿಕ ಜಾಲತಾಣದ ಸುಪ್ರಿಯ ಅವರಿಗೆ ಹೈಕೋರ್ಟ್ನ ವಿಭಾಗೀಯ ಪೀಠ ನೋಟಿಸ್ ನೀಡಿದೆ.
ಕೆಜಿಎಫ್ ಹಾಡುಗಳ ಅನಧಿಕೃತ ಬಳಕೆಯನ್ನು ಪ್ರಶ್ನಿಸಿ ಎಂಆರ್ಟಿ ಮ್ಯೂಸಿಕ್ ಕಾನೂನು ಹೋರಾಟ ನಡೆಸುತ್ತಿದೆ. ಕೆಳಹಂತದ ನ್ಯಾಯಾಲಯ ಕಾಂಗ್ರೆಸ್ನ ಟ್ವಿಟರ್ಗೆ ನಿರ್ಬಂಧ ವಿಧಿಸಲು ಆದೇಶಿಸಿತ್ತು.
ಕಾಂಗ್ರೆಸ್ ಸಲ್ಲಿಸಿದ ಮೇಲ್ಮನವಿಯನ್ನು ಪರಿಗಣಿಸಿದ ಹೈಕೋರ್ಟ್ ನಿರ್ಬಂಧವನ್ನು ತೆರವುಗೊಳಿಸಿದೆ. ಅದಕ್ಕೆ ಪ್ರತಿಯಾಗಿ ಸಾಮಾಜಿಕ ಜಾಲತಾಣದಲ್ಲಿ ಕೆಜಿಎಫ್ ಹಾಡಿನ ಮಿಶ್ರಣವಾಗಿರುವ ಎಲ್ಲ ವಿಡಿಯೋಗಳನ್ನು ತೆಗೆದು ಹಾಕಬೇಕು ಎಂದು ಸೂಚಿಸಿತ್ತು.
ಕನ್ನಡ ಬಾವುಟ ಹಾರಿಸಿದ ಯುವಕನಿಗೆ ಪೊಲೀಸ್ ಥಳಿತ : ತನಿಖೆಗೆ ಸಿಎಂ ಸೂಚನೆ
ನ್ಯಾಯಾಲಯದ ಆದೇಶ ಪಾಲಿಸುವುದಾಗಿ ಕಾಂಗ್ರೆಸ್ ಪ್ರಮಾಣಪತ್ರ ಸಲ್ಲಿಸಿತ್ತು. ಆದರೆ ನ್ಯಾಯಾಲಯ ಆದೇಶವನ್ನು ಕಾಂಗ್ರೆಸ್ ಪಾಲಿಸಿಲ್ಲ ಎಂದು ಎಂಆರ್ಪಿ ಮ್ಯೂಸಿಕ್ ಹೈಕೋರ್ಟ್ನಲ್ಲಿ ನ್ಯಾಯಾಂಗ ನಿಂದನೆ ಅರ್ಜಿ ದಾಖಲಿಸಿದೆ. ಅದರ ವಿಚಾರಣೆ ಭಾಗವಾಗಿ ನೋಟಿಸ್ ಜಾರಿ ಮಾಡಲಾಗಿದೆ. ಕಾಂಗ್ರೆಸ್ ಪರವಾಗಿ ಹಿರಿಯ ವಕೀಲ ಅಭಿಷೇಕ್ ಮನುಸಿಂಗ್ವಿ ವಾದಿಸುತ್ತಿದ್ದಾರೆ.
ಜಗತ್ತಿನ ಸೂಪರ್ ಪವರ್ ಪರಮಾಣು ರಾಷ್ಟ್ರವಾಗುತ್ತಾ ಉತ್ತರ ಕೊರಿಯಾ..?
Karnataka, High Court, issues, notice, Rahul Gandhi,