ಬೆಂಗಳೂರು, ಜ.1- ಹಿರಿಯ ಐಪಿಎಸ್ ಅಧಿಕಾರಿಗಳಾದ ಕೆ.ವಿ.ಶರತ್ಚಂದ್ರ, ಡಾ.ಪಿ.ಎಸ್. ಹರ್ಷ, ಸಂದೀಪ್ ಪಾಟೀಲ್ ಸೇರಿದಂತೆ ಹಲವು ಅಧಿಕಾರಿಗಳಿಗೆ ಬಡ್ತಿ ನೀಡಲಾಗಿದೆ. ಐಜಿಪಿ ದರ್ಜೆಯ ಅಧಿಕಾರಿಗಳಾದ ಎಸ್.ಮುರುಗನ್, ಕೆ.ವಿ.ಶರತ್ಚಂದ್ರ, ಎಂ.ನಂಜುಂಡಸ್ವಾಮಿ ಅವರನ್ನು ಎಡಿಜಿಪಿ ಹುದ್ದೆಗೆ ಮುಂಬಡ್ತಿ ನೀಡಿ ವರ್ಗಾಯಿಸಲಾಗಿದೆ.
ಡಿಐಜಿ ದರ್ಜೆಯ ಅಧಿಕಾರಿಗಳಾದ ಡಾ.ಪಿ.ಎಸ್.ಹರ್ಷ, ವಿಕಾಸ್ಕುಮಾರ್ ವಿಕಾಸ್, ಸಂದೀಪ್ ಪಾಟೀಲ್, ಲಾಬುರಾಮ್ ಅವರಿಗೆ ಐಜಿಪಿ ಹುದ್ದೆಗೆ ಬಡ್ತಿ ನೀಡಲಾಗಿದೆ. ಎಸ್.ಮುರುಗನ್ ಅವರನ್ನು ಬೆಂಗಳೂರಿನ ಮಾಡ್ರನೈಸೇಷನ್ ಅಂಡ್ ಲಾಜಿಸ್ಟಿಕ್ಸ್ ಕಮ್ಯುನಿಕೇಷನ್ನ ಎಡಿಜಿಪಿ ಹುದ್ದೆಗೆ ವರ್ಗಾಯಿಸಲಾಗಿದೆ.
ಕೆ.ವಿ.ಶರತ್ಚಂದ್ರ ಅವರನ್ನು ಸಿಐಡಿ ಘಟಕಕ್ಕೆ ವರ್ಗಾಯಿಸಲಾಗಿದ್ದು, ಎಂ.ನಂಜುಂಡಸ್ವಾಮಿ ಅವರಿಗೆ ಎಡಿಜಿಪಿ ಹುದ್ದೆಗೆ ಬಡ್ತಿ ನೀಡಿದ್ದು, ಹೋಂಗಾಡ್ರ್ಸ್ ವಿಭಾಗಕ್ಕೆ ವರ್ಗಾಯಿಸಲಾಗಿದೆ. ಡಾ.ಪಿ.ಎಸ್.ಹರ್ಷ ಅವರಿಗೆ ಬಡ್ತಿ ನೀಡಿ ವಾರ್ತಾ ಹಾಗೂ ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತರ ಹುದ್ದೆಯಲ್ಲೇ ಮುಂದುವರಿಸಲಾಗಿದೆ. ಲಾಬುರಾಮ್ ಅವರಿಗೆ ಬಡ್ತಿ ನೀಡಿ ಹುಬ್ಬಳ್ಳಿ-ಧಾರವಾಡ ನಗರದ ಕಮಿಷನರ್ ಹುದ್ದೆಯಲ್ಲಿ ಮುಂದುವರಿಸಲಾಗಿದೆ.
ಸಂದೀಪ್ ಪಾಟೀಲ್ ಅವರನ್ನು ಬೆಂಗಳೂರು ನಗರ ಪೂರ್ವ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತರ ಹುದ್ದೆಗೆ ವರ್ಗಾಯಿಸಲಾಗಿದೆ.
ವಿಕಾಸ್ಕುಮಾರ್ ವಿಕಾಸ್ ಅವರನ್ನು ಎಂಎಸ್ಐಎಲ್ನ ವ್ಯವಸ್ಥಾಪಕ ನಿರ್ದೇಶಕ ಹುದ್ದೆಗೆ ವರ್ಗಾಯಿಸಲಾಗಿದೆ. ವಿಪುಲ್ಕುಮಾರ್ ಅವರನ್ನು ಬೆಂಗಳೂರಿನ ಆಂತರಿಕ ಭದ್ರತಾ ವಿಭಾಗದ ಐಜಿಪಿ ಹುದ್ದೆಗೆ, ಡಾ.ಎ.ಸುಬ್ರಹ್ಮಣ್ಯೇಶ್ವರ ರಾವ್ ಅವರಿಗೆ ಬೆಂಗಳೂರು ಪೂರ್ವ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತರ ಹುದ್ದೆಗೆ ವರ್ಗಾವಣೆ ಮಾಡಲಾಗಿದೆ.
ಸೌಮೇಂದು ಮುಖರ್ಜಿ ಅವರನ್ನು ಗುಪ್ತದಳಕ್ಕೆ, ಎಸ್.ರವಿ ಅವರನ್ನು ಕೆಎಸ್ಆರ್ಪಿಗೆ ವರ್ಗಾಯಿಸಲಾಗಿದೆ. ಡಾ.ರೋಹಿಣಿ ಕಟೋಚ್ ಸೆಪಟ್, ಡಾ.ರಾಮ್ನಿವಾಸ್ ಸೆಪಟ್ ಅವರಿಗೆ ಡಿಐಜಿ ಹುದ್ದೆಗೆ ಬಡ್ತಿ ನೀಡಲಾಗಿದೆ.
ಡಾ.ಎಂ.ಬಿ.ಬೋರಲಿಂಗಯ್ಯ ಅವರಿಗೆ ಎಸ್ಪಿ ಹುದ್ದೆಯಿಂದ ಡಿಐಜಿ ಹುದ್ದೆಗೆ ಬಡ್ತಿ ನೀಡಿದ್ದು, ಬೆಳಗಾವಿ ನಗರ ಪೊಲೀಸ್ ಆಯುಕ್ತ ಹುದ್ದೆಗೆ ವರ್ಗಾಯಿಸಲಾಗಿದೆ.
ರಮಣ್ಗುಪ್ತ ಅವರನ್ನು ಬೆಂಗಳೂರು ನಗರದ ಜಂಟಿ ಪೊಲೀಸ್ ಆಯುಕ್ತ (ಅಪರಾಧ) ಹುದ್ದೆಗೆ ವರ್ಗಾಯಿಸಲಾಗಿದೆ. ಡಾ.ಕೆ.ತ್ಯಾಗರಾಜನ್ ಅವರನ್ನು ಬೆಂಗಳೂರಿನ ನೇಮಕಾತಿ ವಿಭಾಗದ ಡಿಐಜಿ ಹುದ್ದೆಗೆ ವರ್ಗಾಯಿಸಲಾಗಿದೆ.
