ಫೆ.1ರಿಂದ 10 ದಿನ ಕರ್ನಾಟಕ ಕಂಪ್ಲೀಟ್ ಲಾಕ್‍ಡೌನ್..?

Social Share

ಬೆಂಗಳೂರು,ಜ.11- ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕಿನ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಆತಂಕಗೊಂಡಿರುವ ರಾಜ್ಯ ಫೆಬ್ರವರಿ 1ರಿಂದ 10 ದಿನಗಳ ಕಾಲ ಲಾಕ್‍ಡೌನ್ ಮಾಡುವ ಬಗ್ಗೆ ಗಂಭೀರ ಚಿಂತನೆ ನಡೆಸಿದೆ. ಸಂಜೆ 3 ಗಂಟೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಮ್ಮ ಸಂಪುಟ ಸಹೋದ್ಯೋಗಿಗಳ ಜೊತೆ ವಚ್ರ್ಯುವಲ್ ಸಭೆ ನಡೆಸಲಿದ್ದು, ಲಾಕ್‍ಡೌನ್ ಜಾರಿ ಮಾಡುವ ಕುರಿತಾಗಿ ತೀರ್ಮಾನ ತೆಗೆದುಕೊಳ್ಳಲಿದ್ದಾರೆ.
ನಾಳೆ ಪ್ರಧಾನಿ ನರೇಂದ್ರ ಮೋದಿ ಅವರು ಎಲ್ಲ ರಾಜ್ಯಗಳ ಸಿಎಂಗಳ ಜೊತೆ ವಿಡಿಯೋ ಕಾನರೆನ್ಸ್ ನಡೆಸಲಿದ್ದು, ಆಯಾ ರಾಜ್ಯಗಳ ಸ್ಥಿತಿಗತಿಗಳ ಬಗ್ಗೆ ಮಾಹಿತಿ ಪಡೆಯುವರು. ಕರ್ನಾಟಕದಲ್ಲಿ ಕಳೆದ 10 ದಿನಗಳಿಂದ ಕೋವಿಡ್ ಪ್ರಕರಣಗಳ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿರುವುದರಿಂದ ಇದನ್ನು ನಿಯಂತ್ರಿಸಲು ಲಾಕ್‍ಡೌನ್‍ನಿಂದ ಮಾತ್ರ ಸಾಧ್ಯ ಎಂದು ತಾಂತ್ರಿಕ ಸಲಹಾ ಸಮಿತಿ ಸರ್ಕಾರಕ್ಕೆ ಸಲಹೆ ನೀಡಿದೆ.
ರಾಜಧಾನಿ ಬೆಂಗಳೂರಿನಲ್ಲೇ ಪ್ರತಿದಿನ ಒಟ್ಟು ಸೋಂಕಿತರಲ್ಲಿ ಶೇ.75ರಷ್ಟು ಪ್ರಕರಣಗಳು ದಾಖಲಾಗುತ್ತಿದ್ದು, ಫೆಬ್ರವರಿಯಲ್ಲಿ ಕನಿಷ್ಟ 75 ಸಾವಿರದಿಂದ ಒಂದು ಲಕ್ಷದವರೆಗೂ ಇದು ದಾಟಬಹುದು. ಹೀಗಾಗಿ ತಕ್ಷಣವೇ ಸರ್ಕಾರ ಲಾಕ್‍ಡೌನ್ ಸೇರಿದಂತೆ ಕೆಲವು ಬಿಗಿಯಾದ ಕ್ರಮಗಳನು ತೆಗೆದುಕೊಳ್ಳಬೇಕೆಂದು ಸೂಚಿಸಿದೆ.
ಪ್ರಸ್ತುತ ರಾಜ್ಯದಲ್ಲಿ ಜಾರಿ ಮಾಡಿರುವ ವೀಕೆಂಡ್ ಕಫ್ರ್ಯೂವನ್ನು ಮುಂದುವರೆಸುವುದು, ಕಫ್ರ್ಯೂ ಸಮಯವನ್ನು ಸಾಧ್ಯವಾದರೆ ರಾತ್ರಿ 8ರಿಂದಲೇ ಜಾರಿ ಮಾಡುವುದು, ಬೆಂಗಳೂರಿನ ಜೊತೆಗೆ ಕೋವಿಡ್ ಹೆಚ್ಚುತ್ತಿರುವ ಇತರ ಜಿಲ್ಲೆಗಳಲ್ಲೂ ಕೆಲವು ಚಟುವಟಿಕೆಗಳಿಗೆ ನಿರ್ಬಂಧ ಹಾಕುವ ನಿರ್ಧಾರ ಕೈಗೊಳ್ಳುವ ಸಾಧ್ಯತೆಯಿದೆ.
ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ಪ್ರಕರಣಗಳಿಂದ ಜನರು ಬೇರೆ ಬೇರೆ ನಗರಗಳಿಗೆ ಗುಳೇ ಹೋಗುತ್ತಿರುವುದರಿಂದ ಗ್ರಾಮೀಣ ಭಾಗಗಳಿಗೂ ಸೋಂಕು ಹರಡಬಹುದೆಂಬ ಆತಂಕ ಎದುರಾಗಿದೆ. ಈ ಹಿಂದೆ ಭಾರೀ ಪ್ರಮಾಣದಲ್ಲಿ ಸೋಂಕಿತರು 2 ಮತ್ತು 3ನೇ ಹಂತದ ನಗರಗಳು ಹಾಗೂ ಗ್ರಾಮೀಣ ಪ್ರದೇಶಗಳಿಗೆ ಏಕಾಏಕಿ ದಾಂಗುಡಿ ಇಟ್ಟ ಪರಿಣಾಮ ಭಾರೀ ಪ್ರಮಾಣದಲ್ಲಿ ಸೋಂಕು ಹೆಚ್ಚಾಗಿತ್ತು.
ಈಗ ಆತಂಕಗೊಂಡಿರುವ ರಾಜ್ಯ ಸರ್ಕಾರ ಇದನ್ನು ನಿಯಂತ್ರಿಸಲು ಲಾಕ್‍ಡೌನ್ ಮೊರೆಹೋಗುವ ಸಾದ್ಯತೆಯಿದೆ ಎಂದು ತಿಳಿದುಬಂದಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಗೃಹ ಸಚಿವ ಅರಗ ಜ್ಞಾನೇಂದ್ರ ಅವರು, ಕೋವಿಡ್ ಪ್ರಕರಣಗಳು ಹೀಗೆ ಹೆಚ್ಚಾಗುತ್ತಿದ್ದರೆ ಲಾಕ್‍ಡೌನ್ ಅನಿವಾರ್ಯ ಎಂದು ಹೇಳಿದ್ದರು. ಇದರ ನಡುವೆ ಇಂದು ಸಿಎಂ ಸಚಿವರ ಜೊತೆ ಸಭೆ ನಡೆಸುತ್ತಿರುವುದು ಮಹತ್ವ ಪಡೆದುಕೊಂಡಿದೆ.
ಕೊರೋನಾ ಪ್ರಕರಣಗಳ ಸಂಖ್ಯೆಯನ್ನು ಆಧರಿಸಿ ನಿರ್ಬಂಧವನ್ನು ಸಡಿಲ ಮಾಡುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದು ಹೇಳಿದ್ದೆನಾದರೂ, ಈಗ ಪರಿಸ್ಥಿತಿ ಮೊದಲಿನಂತಿಲ್ಲ. ದಿನದಿಂದ ದಿನಕ್ಕೆ ಕೋವಿಡ್ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿದ್ದು. ಹೆಚ್ಚಿನ ನಿರ್ಬಂಧಗಳನ್ನು ವಿಸಬೇಕಾದಂತಹ ಪರಿಸ್ಥಿತಿ ಇದೆ ಎಂದು ಬೊಮ್ಮಾಯಿ ಹೇಳಿದ್ದರು.
ರಾಜ್ಯದಲ್ಲಿ ಕೋವಿಡ್ ಸೋಂಕು ಭಾರೀ ಏರಿಕೆಯಾಗುತ್ತಿದ್ದು, ಪಾಸಿಟಿವಿಟಿ ದರ, ಸಕ್ರಿಯ ಪ್ರಕರಣಗಳ ಸಂಖ್ಯೆ ಕೂಡ ತೀವ್ರ ಏರಿಕೆ ಕಾಣ್ತಿದೆ. ಇನ್ನು ಕಳೆದ 10 ದಿನಗಳಲ್ಲಿ ಸುಮಾರು 8 ಸಾವಿರ ಮಕ್ಕಳಿಗೆ ಸೋಂಕು ತಗುಲಿದ್ದು, ಇವೇ ಮೊದಲಾದ ಕಾರಣದಿಂದ ಮತ್ತಷ್ಟು ಕಠಿಣ ನಿರ್ಬಂಧ ಜÁರಿ ಮಾಡುವ ಅನಿವಾರ್ಯತೆ ಇದೆ ಎಂದಿದ್ದರು.

Articles You Might Like

Share This Article