ಬೆಂಗಳೂರು, ಮಾ.5- ಬಂಧನದ ಭೀತಿಯಿಂದ ತಲೆಮರೆಸಿಕೊಂಡಿರುವ ದಾವಣಗೆರೆ ಜಿಲ್ಲೆ, ಚನ್ನಗಿರಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರಿಗೆ ಲೋಕಾಯುಕ್ತ ಪೊಲೀಸರು ಲುಕ್‍ಔಟ್
ನೋಟಿಸ್ ಜಾರಿಗೊಳಿಸಲು ಸಜ್ಜಾಗಿದ್ದಾರೆ.
ಪ್ರಕರಣದ ಯಾವೊಬ್ಬ ಆರೋಪಿಗೆ ಲುಕ್‍ಔಟ್ ನೋಟಿಸ್ ಜಾರಿಮಾಡಿದರೆ ಆತ ವಿದೇಶಕ್ಕೆ ತೆರಳುವಂತಿಲ್ಲ. ಕಡ್ಡಾಯವಾಗಿ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಿ ಹೋಗಬೇಕಾಗುತ್ತದೆ. ವಿಮಾನ ನಿಲ್ದಾಣ, ಬಂದರು ಸೇರಿದಂತೆ ದೇಶದೆಲ್ಲೆಡೆ ಈ ಲುಕ್‍ಔಟ್ ನೋಟಿಸ್ ಜಾರಿಗೊಳಿ ಸಲಾಗುತ್ತದೆ.
ಒಂದು ವೇಳೆ ಮಾಹಿತಿ ನೀಡದೆ ಸಂಬಂಧಿತ ಆರೋಪಿ ವಿದೇಶಕ್ಕೆ ಇಲ್ಲವೆ ಹೊರರಾಜ್ಯಗಳಿಗೆ ತೆರಳಲು ಮುಂದಾದರೆ ಸಂಬಂಧಪಟ್ಟ ತನಿಖಾ ಸಂಸ್ಥೆಗಳು ವಶಕ್ಕೆ ಇಲ್ಲವೆ ಬಂಧಿಸುವ ಅವಕಾಶವಿರುತ್ತದೆ.
ಪ್ರಕರಣದಲ್ಲಿ ಮಾಡಾಳ್ ವಿರೂಪಾಕ್ಷಪ್ಪ ಎ1 ಆರೋಪಿಯಾಗಿದ್ದಾರೆ. ಕಳೆದ ಮೂರು ದಿನಗಳಿಂದ ಅವರು ಎಲ್ಲಿದ್ದಾರೆ ಎಂಬುದರ ಬಗ್ಗೆ ಲೋಕಾಯುಕ್ತ ಪೊಲೀಸರಿಗೆ ಮಾಹಿತಿ ಇಲ್ಲ. ಹೀಗಾಗಿ ಲುಕ್‍ಔಟ್ ನೋಟಿಸ್ ನೀಡಲು ತೀರ್ಮಾನಿಸಲಾಗಿದೆ ಎಂದು ತಿಳಿದುಬಂದಿದೆ.
ವಿದೇಶದಲ್ಲಿ ಭಾರತದ ಘನತೆಗೆ ಧಕ್ಕೆ ತಂದಿದ್ದು ಪ್ರಧಾನಿ ಮೋದಿ : ರಾಹುಲ್
ಬೆಂಗಳೂರಿನ ಡಾಲರ್ಸ್ ಕಾಲೋನಿಯಲ್ಲಿರುವ ನಿವಾಸ, ದಾವಣಗೆರೆ, ಚನ್ನಗಿರಿ ನಿವಾಸಗಳು, ಕೆಎಸ್‍ಡಿಎಲ್ ಕಚೇರಿ, ಸಂಬಂಧಿಕರ ಮನೆ ಸೇರಿದಂತೆ ಮತ್ತಿತರ ಕಡೆ ಲುಕ್‍ಔಟ್ ನೋಟಿಸ್ ಜಾರಿಯಾಗಲಿದೆ. ಅಧಿಕೃತವಾಗಿ ಇದು ಜಾರಿಯಾದರೆ ಸಂಬಂಧಿತ ಆರೋಪಿ ತಲೆಮರೆಸಿಕೊಳ್ಲು ಅವಕಾಶವೇ ಇರುವುದಿಲ್ಲ.
ಲಂಚ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರನ್ನು ಬಂಧಿಸಲು ಕರ್ನಾಟಕ ಲೋಕಾಯುಕ್ತ ಉಪ ವರಿಷ್ಠಾಧಿಕಾರಿಗಳ ನೇತೃತ್ವದಲ್ಲಿ ಏಳು ತಂಡಗಳನ್ನು ರಚಿಸಿದೆ.
ಪ್ರಕರಣದಲ್ಲಿ ಮಾಡಾಳ್ ವಿರೂಪಾಕ್ಷಪ್ಪ ಮೊದಲ ಆರೋಪಿಯಾಗಿರುವ ಹಿನ್ನೆಲೆಯಲ್ಲಿ ಕಾರ್ಯಾಚರಣೆ ತೀವ್ರಗೊಂಡಿದೆ.
ಶಾಸಕರ ಪತ್ತೆಗಾಗಿ ಲೋಕಾಯುಕ್ತ ಪೊಲೀಸರ ತಂಡ ರಾಜ್ಯದ ವಿವಿಧೆಡೆ ಶೋಧ ಕಾರ್ಯ ನಡೆಸಿದೆ. ಬೆಂಗಳೂರು, ದಾವಣಗೆರೆ ಸೇರಿದಂತೆ ಇತರೆಡೆ ಹುಡುಕಾಟ ನಡೆದಿದೆ. ಜತೆಗೆ ವಿಚಾರಣೆಗೆ ಹಾಜರಾಗುವಂತೆ ವಿರೂಪಾಕ್ಷಪ್ಪಗೆ ನೋಟಿಸ್ ನೀಡಲು ಸಿದ್ಧತೆ ನಡೆದಿದೆ ಎಂದು ಗೊತ್ತಾಗಿದೆ.
ಇದರ ಜತೆಗೆ ಬೆಂಗಳೂರು ಮತ್ತು ದಾವಣಗೆರೆ ನಿವಾಸ, ಶಾಸಕರ ಭವನ, ಕರ್ನಾಟಕ ಸಾಬೂನು ಮತ್ತು ಮಾರ್ಜಕ ಲಿ. ಕಚೇರಿಗೆ ನೋಟಿಸ್ ನೀಡಲು ಪೆÇಲೀಸರು ಸಜ್ಜಾಗಿದ್ದಾರೆ. ಬೆಂಗಳೂರು ಮತ್ತು ದಾವಣಗೆರೆ ನಗರಗಳ ವಿವಿಧೆಡೆ ತಂಡಗಳು ಬೇಟೆ ಆರಂಭಿಸಿವೆ ಎಂದು ಮೂಲಗಳು ತಿಳಿಸಿವೆ. ಕೆಎಸ್‍ಡಿಎಲ್ ಅಧ್ಯಕ್ಷರಾಗಿದ್ದ ಶಾಸಕ ವಿರೂಪಾಕ್ಷಪ್ಪ ಅವರು ಘಟನೆಯ ನಂತರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಐಫೋನ್ ಘಟಕ ಸ್ಥಾಪನೆ ಕುರಿತು ಬೊಮ್ಮಾಯಿ ಸುಳ್ಳು ಹೇಳಿದ್ದಾರೆ : ಕಾಂಗ್ರೆಸ್
ಲೋಕಾಯುಕ್ತ ಅಕಾರಿಗಳು ವಿರೂಪಾಕ್ಷಪ್ಪ ಮಾಡಾಳ್ ಅವರ ಪುತ್ರ ಪ್ರಶಾಂತ್ ಮಾಡಾಳ್ ಅವರ ನಿವಾಸದಲ್ಲಿ ಪತ್ತೆಯಾದ 6 ಕೋಟಿ ರೂ.ಗೂ ಹೆಚ್ಚು ನಗದು ಮತ್ತು ಖಾಸಗಿ ಕಚೇರಿಯಲ್ಲಿ 2 ಕೋಟಿ ರೂ.ಗೂ ಹೆಚ್ಚು ನಗದು ಮೂಲದ ಬಗ್ಗೆಯೂ ತನಿಖೆ ನಡೆಸುತ್ತಿದ್ದಾರೆ.
ಪ್ರಶಾಂತ್ ಮಾಡಾಳ್ ತನ್ನ ತಂದೆಯ ಪರವಾಗಿ ಕೆಎಸ್‍ಡಿಎಲ್‍ಗೆ ಕಚ್ಚಾ ಸಾಮಗ್ರಿಗಳನ್ನು ಖರೀದಿಸಲು ಟೆಂಡರ್ ಮಂಜೂರು ಮಾಡಲು 40 ಲಕ್ಷ ರೂಪಾಯಿ ನಗದು ಸ್ವೀಕರಿಸುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದರು. ಪ್ರಶಾಂತ್ ಮಾಡಾಳ್ ಅವರನ್ನು ಬಂಸಲಾಗಿದ್ದು, ಸದ್ಯ ನ್ಯಾಯಾಂಗ ಬಂಧನದಲ್ಲಿದ್ದಾರೆ. ಬಳಿಕ ಅಕಾರಿಗಳು ನಿವಾಸ ಮತ್ತು ಕಚೇರಿಗಳಿಂದ 8 ಕೋಟಿ ರೂ.ಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಬೆಳವಣಿಗೆಯು ಆಡಳಿತಾರೂಢ ಬಿಜೆಪಿ ಸರ್ಕಾರಕ್ಕೆ ತೀವ್ರ ಹಿನ್ನಡೆಯಾಗಿ ಪರಿಣಮಿಸಿದೆ.
ಈ ಮೊದಲು ಅಸ್ತಿತ್ವದಲ್ಲಿದ್ದ ಭ್ರಷ್ಟಚಾರ ನಿಗ್ರಹ ದಳದಲ್ಲಿ (ಎಸಿಬಿ) ಹಣಕಾಸು ಸಲಹೆಗಾರರಾಗಿ ಕೆಲಸ ಮಾಡಿದ್ದ ಪ್ರಶಾಂತ್ ಮಾಡಾಳ್, ಮರುಸ್ಥಾಪನೆಯಾದ ಲೋಕಾಯುಕ್ತ ಸಂಸ್ಥೆಯಲ್ಲಿ ಅದೇ ಹುದ್ದೆ ಪಡೆಯಲು ಯತ್ನಿಸಿದ್ದರು ಎಂದು ತಿಳಿದು ಬಂದಿದೆ.
ರಾಜ್ಯ ಲೆಕ್ಕ ಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆ ಎಸಿಬಿಯಲ್ಲಿದ್ದ ಹಿರಿಯ ಅಕಾರಿಗಳ ಜತೆ ನಿಕಟ ಸಂಕರ್ಪದಲ್ಲಿದ್ದ ಪ್ರಶಾಂತ್, ಬೆಂಗಳೂರು ಜಲಮಂಡಳಿಯಲ್ಲಿದ್ದುಕೊಂಡು ಲೋಕಾಯುಕ್ತದಲ್ಲಿ ಹುದ್ದೆ ಪಡೆಯಲು ಪ್ರಯತ್ನಿಸುತ್ತಿದ್ದರು ಎಂದು ಗೊತ್ತಾಗಿದೆ.
ಕೆಎಎಸ್ ಅಕಾರಿಯಲ್ಲ: ಬಂತ ಪ್ರಶಾಂತ್ ಕೆಎಎಸ್ ಅಕಾರಿಯಲ್ಲ. ಕೆಪಿಎಸ್‍ಸಿ ನಡೆಸುವ ಕರ್ನಾಟಕ ರಾಜ್ಯ ಲೆಕ್ಕಪತ್ರ ಸೇವೆಯ ಪರೀಕ್ಷೆ ಬರೆದು ಉತ್ತೀರ್ಣರಾಗಿ ಕರ್ನಾಟಕ ರಾಜ್ಯ ಲೆಕ್ಕಪತ್ರ ಇಲಾಖೆಯ ಜಂಟಿ ನಿಯಂತ್ರಕರಾಗಿದ್ದರು. ಬೆಂಗಳೂರು ಜಲಮಂಡಳಿಗೆ ನಿಯೋಜನೆ ಮೇರೆಗೆ ಆಗಮಿಸಿದ್ದರು. ಇದೇ ವೇಳೆ ಕೆಎಎಸ್ ಅಕಾರಿಗಳ ಸಂಘವು ಸಹ ಪ್ರಶಾಂತ್ ಕೆಎಎಸ್ ಅಧಿಕಾರಿ ಅಲ್ಲ ಎಂದು ಸ್ಪಷ್ಟನೆ ನೀಡಿದೆ.
ಈ ನಡುವೆ, ಪ್ರಶಾಂತ್ ಲಂಚ ಸ್ವೀಕಾರ ಆರೋಪದ ಮೇಲೆ ಬಂತವಾಗಿರುವ ಹಿನ್ನೆಲೆಯಲ್ಲಿ ಮತ್ತು ನಿವಾಸದಲ್ಲಿ ಕೋಟ್ಯಂತರ ರೂ. ಪತ್ತೆಯಾದ ಕಾರಣ ಭ್ರಷ್ಟಾಚಾರದಲ್ಲಿ ತೊಡಗಿರುವುದು ಕಂಡುಬಂದಿದೆ. ಹೀಗಾಗಿ ಆತನನ್ನು ಸೇವೆಯಿಂದ ಅಮಾನತುಗೊಳಿಸಲು ಕ್ರಮ ಕೈಗೊಂಡಿದೆ ಎಂದು ತಿಳಿದುಬಂದಿದೆ.
ದಾವಣಗೆರೆಯಲ್ಲಿ ವಾಸ್ತವ್ಯ? ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಎಲ್ಲಿ ಅಡಗಿದ್ದಾರೆ ಎನ್ನುವ ಬಗ್ಗೆ ಅಕಾರಿಗಳು ಭಾರಿ ಶೋಧ ನಡೆಸುತ್ತಿದ್ದಾರೆ. ಇವರು ದಾವಣಗೆರೆಯಲ್ಲೇ ಸ್ನೇಹಿತರೊಬ್ಬರ ಮನೆಯಲ್ಲಿ ಊಟ ತಿಂಡಿ ಮಾಡಿಕೊಂಡು ವಾಸವಿದ್ದಾರೆ ಎನ್ನಲಾಗುತ್ತಿದೆ.
ಮಗ ಪ್ರಶಾಂತ್ ಮಾಡಾಳ್ ಸಿಕ್ಕಿಬಿದ್ದ ಬಳಿಕ ಮೊಬೈಲ್ ಸ್ವಿಚ್ ಆಫ್ ಮಾಡಿ ಮಾಡಾಳ್ ಕೂತಿದ್ದರು. ವಿರೂಪಾಕ್ಷಪ್ಪ ಕಳೆದೆರಡು ದಿನದ ಹಿಂದೆ ಚಿತ್ರದುರ್ಗ ಬಾರ್ಡರ್‍ನಲ್ಲೇ ಲಾ¸್ಟï ಕಾಲ್ ಮಾಡಿದ್ದರು. ಆಗ ಅದು ಕರೆ ಮಾಡಿದ್ದು ತನ್ನ ಪಕ್ಷದ ಮುಖಂಡರೊಬ್ಬರಿಗೆ. ನಂತರ ಫೋನ್ ಸ್ವಿಚ್ ಆಫ್ ಮಾಡಿ ತಣ್ಣಗೆ ದಾವಣಗೆರೆ ಹಾದಿ ಹಿಡಿದ್ದರು ಎನ್ನಲಾಗುತ್ತಿದೆ.
ಯಾರೋ ತಮ್ಮವರೇ ಷಡ್ಯಂತ್ರ ಮಾಡಿದ್ದಾರೆ ಎನ್ನುವ ಅನುಮಾನದಲ್ಲೇ ಮಾಡಾಳ್ ವಿರೂಪಾಕ್ಷಪ್ಪ ಕೂತಿದ್ದಾರೆ ಎಂದು ಹೇಳಲಾಗುತ್ತಿದೆ. ಲೋಕಾಯುಕ್ತ ಎದುರು ಶರಣಾದರೆ, ಮುಜುಗರ ಕಟ್ಟಿಟ್ಟಬುತ್ತಿ ಎಂದು ತಿಳಿದಿರುವ ಮಾಡಾಳ್, ಅದಕ್ಕಾಗಿ ಸೋಮವಾರ ಲೋಕಾಯುಕ್ತ ವಿಶೇಷಕೋರ್ಟ್ ಮುಂದೆ ಹಾಜರಾಗುವ ಸಾಧ್ಯತೆ ಇದೆ.
ನ್ಯಾಯಾಲಯದಲ್ಲಿ ತಮಗಿರುವ ಆರೋಗ್ಯದ ಸಮಸ್ಯೆಯನ್ನು ಮುಂದಿಟ್ಟುಕೊಂಡು ಜೈಲಿನಿಂದ ದೂರ ಉಳಿಯಲು ಪ್ರಯತ್ನ ಮಾಡುವ ಸಾಧ್ಯತೆ ಹೆಚ್ಚಾಗಿದೆ.
ಇ-ಪ್ರಾಸಿಕ್ಯೂಷನ್ ಪೋರ್ಟಲ್ ಬಳಕೆಯಲ್ಲಿ ಉತ್ತರ ಪ್ರದೇಶ ಮುಂಚೂಣಿ
ಮೂಲಗಳ ಪ್ರಕಾರ, ಮಾಡಾಳ್ ವಿರೂಪಾಕ್ಷಪ್ಪ ಸೋಮವಾರ ಲೋಕಾಯುಕ್ತ ತನಿಖಾ ತಂಡದ ಮುಂದೆ ವಿಚಾರಣೆಗೆ ಹಾಜರಾಗುವ ಸಾಧ್ಯತೆಗಳಿವೆ. ಒಂದು ವೇಳೆ ಬಂಸಿದರೆ ಕಾನೂನು ಹೋರಾಟದಲ್ಲಿ ಭಾರೀ ಹಿನ್ನಡೆಯಾಗಲಿದೆ ಎಂಬ ಕಾರಣಕ್ಕಾಗಿ ಸ್ವಯಂಪ್ರೇರಿತವಾಗಿ ವಿಚಾರಣೆಗೆ ಬರಲಿದ್ದಾರೆಂದು ತಿಳಿದುಬಂದಿದೆ.
ಈಗಾಗಲೇ ಲೋಕಾಯುಕ್ತ ತನಿಖಾ ತಂಡ ಅವರಿಗೆ ಕೇಳಬೇಕಾದ 50 ಪ್ರಶ್ನೆಗಳನ್ನು ಸಿದ್ಧಪಡಿಸಿಕೊಂಡಿದೆ. ಯಾವ ಯಾವ ಕಾಲದಲ್ಲಿ ಯಾರ್ಯಾರಿಗೆ ಎಷ್ಟು ಮೊತ್ತದ ಟೆಂಡರ್ ನೀಡಲಾಗಿತ್ತು, ಗುತ್ತಿಗೆದಾರರಿಗೆ ಪೂರೈಕೆ ಮಾಡಲು ಲಂಚ ಕೇಳಿದ್ದು ನಿಜವೆ? ದೂರವಾಣಿ ಕರೆ ವಿವರಗಳು, ಗುತ್ತಿಗೆದಾರರು ನೀಡಿರುವ ದೂರು ಎಲ್ಲವನ್ನೂ ಸಿದ್ಧಪಡಿಸಲಾಗಿದೆ.
Karnataka, Lokayukta, notice, BJP, MLA, Madalu Virupakshappa,