ಬೆಂಗಳೂರು,ಮಾ.4- ಸುದೀರ್ಘ ವಿಶ್ರಾಂತಿಯ ಬಳಿಕ ಬರ್ಜರಿ ಒಪನಿಂಗ್‍ನೊಂದಿಗೆ ಲೋಕಾಯುಕ್ತ ಮತ್ತೆ ಭ್ರಷ್ಟಚಾರದ ಸಮರ ಅಕಾಡಕ್ಕೆ ಧುಮುಕಿದೆ. ಲೋಕಾಯುಕ್ತ ಸಂಸ್ಥೆಗೆ ನಿವೃತ್ತ ನ್ಯಾಯಮೂರ್ತಿ ವೆಂಕಟಾಚಲಯ್ಯ ಜನಪ್ರಿಯತೆ ತಂದುಕೊಟ್ಟರು. ನಂತರ ಸಂತೋಷ್ ಹೆಗ್ಡೆ ಲೋಕಾಯುಕ್ತವನ್ನು ಉಚ್ಛ್ರಾಯ ಸ್ಥಿತಿಗೆ ತೆಗೆದುಕೊಂಡು ಹೋದರು.
ಆ ವೇಳೆಯಲ್ಲಿ ಆಡಳಿತಾರೂಢ ಬಿಜೆಪಿಯ ಶಾಸಕರಾಗಿದ್ದ ಕೆಜಿಎಫ್‍ನ ಸಂಪಗಿ ಅವರನ್ನು ಐದು ಲಕ್ಷ ಲಂಚ ಪಡೆಯುವಾಗ ಖುದ್ಧಾಗಿ ಬಂಧಿಸಲಾಗಿತ್ತು. ನಂತರ ಲೋಕಾಯುಕ್ತ ನ್ಯಾಯಾಲಯದ ಆದೇಶದ ಮೇರೆಗೆ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ, ಸಚಿವರಾಗಿದ್ದ ಕಟ್ಟಾಸುಬ್ರಹ್ಮಣ್ಯನಾಯ್ಡು, ಕೃಷ್ಣಯ್ಯ ಶೆಟ್ಟಿ ಸೇರಿದಂತೆ ಅನೇಕರನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದರು.
ಆ ಕಾಲದಲ್ಲಿ ಗಣಿ ಅಕ್ರಮಗಳ ಕುರಿತು ಲೋಕಾಯುಕ್ತರು ನೀಡಿದ್ದ ವರದಿ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಮಾಡಿತ್ತು. ನಂತರ ಭಾಷ್ಕರ್ ರಾವ್ ಕಾಲದಲ್ಲಿ ಲೋಕಾಯುಕ್ತದಲ್ಲೇ ಭ್ರಷ್ಟಾಚಾರ ನಡೆದ ಆರೋಪ ಕೇಳಿ ಬಂದಿತ್ತು. ಇದು ವ್ಯಾಪಕ ಚರ್ಚೆಯಾಗುವ ಹಂತದಲ್ಲಿ ಸಿದ್ದರಾಮಯ್ಯ ಅವರ ಸರ್ಕಾರ ಕೇಂದ್ರದ ಭ್ರಷ್ಟಚಾರ ನಿಗ್ರಹ ಕಾಯ್ದೆ ಜಾರಿಗೆ ಭ್ರಷ್ಟಚಾರ ನಿಗ್ರಹ ದಳ ರಚನೆ ಮಾಡಲಾಗಿತ್ತು. ಅನಂತರ ಲೋಕಾಯುಕ್ತ ದುರ್ಬಲವಾಗುತ್ತಾ ಬಂದಿತ್ತು. ಲೋಕಾಯುಕ್ತರು, ಉಪಲೋಕಾಯುಕ್ತರು ಇದ್ದರು. ಪೊಲೀಸ್ ಘಟಕದಲ್ಲಿ ಅಧಿಕಾರಿಗಳ ಸಂಖ್ಯೆ ಕಡಿಮೆ ಇತ್ತು.
ಸಂತೋಷ್ ಹೆಗಡೆ ಕಾಲದಲ್ಲಿದ್ದ ಲೋಕಾಯುಕ್ತದ ವೈಭವ ಕ್ರಮೇಣ ಕ್ಷೀಣವಾಗಿತ್ತು. ಇಂತದೊಂದು ಸಂಸ್ಥೆ ಇದೆ ಎಂಬುದನ್ನೇ ಮರೆತು ಹೋಗುವಂತಹ ಕಾಲ ಬಂದಿತ್ತು. ಎಸಿಬಿ ರಚನೆಯನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ಲೋಕಾಯುಕ್ತ ಮರುಸ್ಥಾಪನೆಗೆ ಆದೇಶಿಸಿತ್ತು.
ಮಾಡಾಳ್ ವಿರೂಪಾಕ್ಷಪ್ಪ ಬಂಧನಕ್ಕೆ ಆಗ್ರಹಿಸಿ ಕಾಂಗ್ರೆಸ್ ಪ್ರತಿಭಟನೆ
ಅದರ ನಂತರ ಅಸ್ತಿತ್ವಕ್ಕೆ ಬಂದ ಲೋಕಾಯುಕ್ತ ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸುವ ಪ್ರಯತ್ನವನ್ನು ಮುಂದುವರೆಸಿತ್ತು. ಸಾರ್ವಜನಿಕರಿಂದ ದೂರು ಕೇಳಿ ಬಂದಾಗ ಪ್ರಕರಣ ದಾಖಲಿಸುವುದು, ದಾಳಿ ನಡೆಸುವುದನ್ನು ಮಾಡುತ್ತಲೇ ಇದೆ. ಆದರೆ ನಿನ್ನೆ ನಡೆಸಿದ ಭರ್ಜರಿ ಕಾರ್ಯಾಚರಣೆ ಭ್ರಷ್ಟರ ಮೈ ನಡುಗಿಸುವಂತೆ ಮಾಡಿದೆ.
ಶಾಸಕರ ಪುತ್ರನನ್ನೇ ಬಂಧಿಸಿ, ತಡ ರಾತ್ರಿಯವರೆಗೂ ಶೋಧ ಕಾರ್ಯಾಚರಣೆ ನಡೆಸಲಾಗಿದೆ. ಈ ಮೂಲಕ ಮತ್ತೆ ಲೋಕಾಯುಕ್ತ ತನ್ನ ಹಳೆಯ ಫಾರ್ಮಗೆ ಮರಳಿದಂತಿದೆ.
ಸಿಸಿಬಿ ದಾಳಿ : ಲಕ್ಷಾಂತರ ಮೌಲ್ಯದ ನಕಲಿ ಸಿಗರೇಟ್ ಜಪ್ತಿ
ಹಿಂದೆ ಬಿಜೆಪಿ ಶಾಸಕರನ್ನು ಬಂಧಿಸಿದಾಗ ಜನ ಮೂಗಿನ ಮೇಲೆ ಬೆರಳು ಇಟ್ಟುಒಕೊಂಡಿದ್ದರು. ಈಗ ಮತ್ತೆ ಆಡಳಿತಾರೂಢ ಬಿಜೆಪಿ ಶಾಸಕನ ಮಗನನ್ನು ಬಂಧಿಸಿ ಮತ್ತೆ ಹುಬ್ಬೆರಿಸುವಂತೆ ಮಾಡಿದೆ. ಭ್ರಷ್ಟಚಾರದಿಂದ ಬೇಸತ್ತಿದ್ದ ಜನರಿಗೆ ಲೋಕಾಯುಕ್ತ ಕಾರ್ಯಾಚರಣೆಗಳು ಕೊಂಚ ನೆಮ್ಮದಿ ಮೂಡಿಸಲಾರಂಭಿಸಿದೆ.
Karnataka, Lokayukta, raid, BJP, MLA, house,