ಬಾಗೇಪಲ್ಲಿ, ನ.26- ಬೆಳಗಾವಿ ಗಡಿ ಸಮಸ್ಯೆಗೆ ಡಬಲ್ ಇಂಜಿನ್ ಸರ್ಕಾರವೇ ಕಾರಣ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಆರೋಪಿಸಿದರು. ಬೀಚಗಾನಹಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗಲೇ ಗಡಿ ಸಮಸ್ಯೆ ಬರುತ್ತಿದೆ. ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೆಬ್ಬೆಟ್ಟಿನ ಮುಖ್ಯಮಂತ್ರಿ ಎಂದು ಟೀಕಿಸಿದರು.
ಶಿವಸೇನೆಯಿಂದ ಹೊಡೆದು ಬಂದ ಗುಂಪು ಬಿಜೆಪಿ ಜೊತೆ ಸೇರಿದ್ದಾರೆ. ಮಹಾರಾಷ್ಟ್ರಕ್ಕೆ ನಿಪ್ಪಾಣಿ ಸೇರಬೇಕು ಅಂತ ಒತ್ತಾಯ ಮಾಡಿದ್ದಾರೆ. ಮಹಾರಾಷ್ಟ್ರದವರಿಗೆ ಮುಂದಿನ ಲೋಕಸಭೆ ಚುನಾವಣೆಗೆ ಈ ವಿಚಾರ ಬೇಕು. ಕರ್ನಾಟಕದಲ್ಲಿ ಮೂರುವರೆ ವರ್ಷ ಅಧಿಕಾರ ನಡೆಸಿದ ಬಿಜೆಪಿಗೆ ಜನರ ಬಳಿ ಹೋಗಲು ವಿಷಯ ಸರಕು ಇಲ್ಲ. ಹೀಗಾಗಿ ಗಡಿ ತಗಾದೆ ತೆಗೆಯುತ್ತಿದ್ದಾರೆ ಎಂದು ಆರೋಪಿಸಿದರು.
ಜನರ ನೆಮ್ಮದಿ ಕೆಡಿಸಿ ಧರ್ಮದ ವಿಚಾರ ಇಟ್ಕೊಂಡು ಹೋಗುತೀರಾ. ಗೋಡಂಬಿ, ಬಾದಮಿ ಕೊಟ್ಟು ಕಳುಹಿಸೋಕೆ ಸರ್ವಪಕ್ಷ ಸಭೆಯನ್ನು ಯಾಕೆ ಕರೆಯುತ್ತೀರಿ. ಎರಡೂ ಕಡೆ ನಿಮ್ಮದೆ ಸರ್ಕಾರ, ಅಲ್ಲಿ ಮಾತನಾಡಿಕೊಳ್ಳಿ. ವಿರೋಧ ಪಕ್ಷಗಳನ್ನು ಕರೆದು ಏನು ಮಾಡುತ್ತೀರಿ. ಇದು ನಿಮ್ಮ ಜವಾಬ್ದಾರಿ, ಅಲ್ಲೂ ನಿಮ್ಮದೆ ಜವಾಬ್ದಾರಿ.
ಬಿಬಿಎಂಪಿ ಆಂತರಿಕ ತನಿಖೆಯಲ್ಲೂ ಬಯಲಾಯ್ತು ‘ಚಿಲುಮೆ’ ಅಕ್ರಮ
ಬೆಳಗಾವಿ ಮಹಾರಾಷ್ಟ್ರದಲ್ಲಿ ಇದ್ದರೇನು, ಇಲ್ಲಿದ್ದರೇನು? ನಾವೆಲ್ಲರೂ ಭಾರತೀಯರು ಅನ್ನುತ್ತೀರ ಅಲ್ವೆ. ಏಕರೂಪ ನಾಗರೀಕ ಸಂಹಿತೆ ಜಾರಿಗೆ ತರೋಕೆ ಹೊರಟಿದ್ದೀರಲ್ಲ. ಇದನ್ನೂ ಹೇಳಿ ಬೆಳಗಾವಿ ಅಲ್ಲಿದ್ದರೇನು, ಇಲ್ಲಿದ್ದರೇನು ಅಂತ ಎಂದು ತಿರುಗೇಟು ನೀಡಿದರು.
ಬಾಗೇಪಲ್ಲಿಯಲ್ಲಿ ತೆಲುಗು ಮಾತನಾಡುವ ಜನ ಇದ್ದಾರೆ. ತೆಲುಗಿನಲ್ಲಿ ಮಾತಾಡಿ ಅಂತ ಜನ ಕೇಳಿದ್ದು ಗಮನಿಸಿದೆ. ಆಂಧ್ರಪ್ರದೇಶದ ವಾಹನಗಳ ಸಂಚಾರವೂ ಗಮನಿಸಿದೆ. ಚಾಮರಾಜನಗರ, ಹೊಸೂರು ಕಡೆ ಹೋದರೆ ತಮಿಳುನಾಡು ಗ್ರಾಮಗಳಿವೆ. ಮಂಗಳೂರಿನ ಕಡೆ ಕೇರಳ ಗಡಿ ಇದೆ. ಗಡಿ ಸಮಸ್ಯೆ, ಅಶಾಂತಿ ಸೃಷ್ಟಿಸೋ ಚಿತ್ರಣ ಇಲ್ಲ.
ಆದರೆ ಮಹಾರಾಷ್ಟ್ರ ಕಡೆ ನೋಡಿದಾಗ ನಿಪ್ಪಾಣಿಯಲ್ಲಿ ಬೇರೆ ಬೇರೆ ಅಭಿವೃದ್ಧಿ ಆಗಿದೆ. ಮುಂದಿನ ದಿನಗಳಲ್ಲಿ ವಾಣಿಜ್ಯ ಕೆಂದ್ರ ಆಗಲಿದೆ. ಸಕ್ಕರೆ ಕಾರ್ಖಾನೆ, ಶಿಕ್ಷಣ ಸಂಸ್ಥೆಗಳಿವೆ. ಭಾಷಾ ಸಮಸ್ಯೆ ಇರೋ ಬಗ್ಗೆ ನಾನು ನೋಡಿದ್ದೇನೆ. ಆದರೆ, ಆ ಭಾಗದ ಅಭಿವೃದ್ಧಿ, ಆರ್ಥಿಕ ಚಟುವಟಿಕೆ ಗಮನಿಸಿ. ಎರಡೂ ಭಾಗವನ್ನು ಪಡೆಯಲು ಅವರ ಒತ್ತಡ ಇದೆ ಎಂದು ಹೇಳಿದರು.
ನಮ್ಮ ರಾಜ್ಯ ಸರ್ಕಾರ ತೆಗೆದುಕೊಂಡ ಕ್ರಮ ಏನಿದೆ ಎಂದು ಪ್ರಶ್ನಿಸಿದ ಅವರು, ಎಲ್ಲೇ ಅವರ ಕುಮ್ಮಕು ಇದೆ ಅಂತ ನಾನು ಬಾವಿಸುತ್ತೇನೆ. ನಿಪ್ಪಾಣಿ ಬಿಟ್ಟು ಬೇರೆ ಭಾಗ ತೆಗೆದುಕೊಳ್ಳಿ ಎಂದು ಶರತ್ ಪವಾರ್ ಹೇಳಿದ್ದಾರೆ. ದಕ್ಷಿಣ, ಉತ್ತರ ಪಿನಾಕಿನಿ ನಮ್ಮಲ್ಲಿ ಉಗಮ ಸ್ಥಾನ. ನಮಗೆ ನೀರು ಕೊಡದೆ, ನೆರೆಯ ರಾಜ್ಯಕ್ಕೆ ಕೊಟ್ಟಿದ್ದಾರೆ ಎಂದು ಆರೋಪಿಸಿದರು.
ನ್ಯಾಯಾಕರಣ ರಚನೆ ಮಾಡಲು ಹೊರಟ್ಟಿದ್ದಾರೆ. ದೆಹಲಿಗೆ ತೆರಳಿದ ಮುಖ್ಯಮಂತ್ರಿ ಬರಿಗೈಲಿ ಬಂದಿದ್ದಾರೆ. ನಮಗೆ ನೀರು ಕೊಡದೆ, ಎರಡೂ ರಾಷ್ಟ್ರೀಯ ಪಕ್ಷಗಳು ದ್ರೋಹ ಮಾಡುತ್ತಿವೆ. 2023ಕ್ಕೆ ಕರ್ನಾಟಕಕ್ಕೆ ಪರಿಹಾರ ಜೆಡಿಎಸ್. ಪ್ರಾದೇಶಿಕ ಸರ್ಕಾರ ಅಂತ ನಾವು ಘೋಷಣೆ ಮಾಡಿದ್ದೇವೆ. ರಾಷ್ಟ್ರೀಯ ಪಕ್ಷದ ಗುಲಾಮಗಿರಿಗೆ ನಾಡನ್ನು ಬಲಿಕೊಟ್ಟರೆ ಸುಮ್ಮನೆ ಬಿಡಲ್ಲ ಎಂದು ಆಕ್ರೋಶ ವಕ್ತಪಡಿಸಿದರು.
ಜನಸಂಕಲ್ಪ ರ್ಯಾಲಿ ಹೊರಟಿದ್ದಾರೆ. ವಿಧಾನಸೌಧದಲ್ಲಿ ಇಲ್ಲ. ಎಲ್ಲಾ ಲೂಟಿ ಹೊಡೆದಾಗಿದೆ. 150 ಸೀಟು ಅಂತ ಹೇಳಿಕೊಂಡು ಈಗ ಜನರ ಬಳಿ ಮತ ಕೊಡಿ ಅಂತ ಹೊಗುತ್ತಿದ್ದಾರೆ. ಸರ್ಕಾರ ಇರೋದು ಎಲ್ಲರ ಹಿತ ಕಾಯಲು. ಧರ್ಮ ಹೊಡೆಯಲು ಅಲ್ಲ ಎಂದು ವಾಗ್ದಾಳಿ ನಡೆಸಿದರು.
ಚಂದ್ರನ ಅಂಗಳದಲ್ಲಿ ಪರಮಾಣು ಶಕ್ತಿ ಚಾಲಿತ ನೆಲೆ ಸ್ಥಾಪಿಸಲಿದೆ ಚೀನಾ
ವೋಟರ್ ಐಡಿ ವಿಚಾರದಲ್ಲಿ ಇಬ್ಬರು ಐಎಎಸ್ ಅಧಿಕಾರಿಗಳ ಅಮಾನತ್ತು ಮಾಡಿದ್ದಾರೆ. ಅಧಿಕಾರಿಗಳ ಬಲಿ ಮಾಡೋದಲ್ಲ. ಇದರಲ್ಲಿ ಯಾವ ರಾಜಕಾರಣಿ ಪಾತ್ರವಿದೆ. ಅವರನ್ನು ಸಂಪುಟದಿಂದ ಹೊರಗೆ ಹಾಕಿ, ದುಡ್ಡಲ್ಲಿ ಮತ ಗಳಿಸುತ್ತೇವೆ ಎಂಬ ಭ್ರಮೆಯಿಂದ ಹೊರಗೆ ಬನ್ನಿ. ಇಲ್ಲದಿದ್ದರೆ ಜನರೇ ನಿಮ್ಮನ್ನು ಹೊರಗೆ ಕಳಿಸುತ್ತಾರೆ ಎಂದರು.
ಕಾಂಗ್ರೆಸ್ ಕೂಡ ರಥಯಾತ್ರೆ ಮಾಡುವ ವಿಚಾರಕ್ಕೆ ಪ್ರತಿಕ್ರಿಯಿಸಿ ಯಾರು ಏನು ಬೇಕಾದ್ರೂ ಮಾಡಿಕೊಳ್ಳಲಿ. ಜೆಡಿಎಸ್ನಲ್ಲಿ ಕಾರ್ಯಕರ್ತರಿಲ್ಲದಿದ್ದರೆ, ಆರುವರೆ ಕೋಟಿ ಜನರೇ ನಮ್ಮ ಕಾರ್ಯಕರ್ತರು. ಅವರೇ ನಮ್ಮನ್ನು ಗೆಲ್ಲಿಸುತ್ತಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
Karnataka, Maharashtra, border, row, BJP, HD Kumaraswamy,