ಕರವೇ ಪ್ರತಿಭಟನೆ, ಬೆಳಗಾವಿ ಗಡಿ ಉದ್ವಿಗ್ನ

Social Share

ಬೆಂಗಳೂರು,ಡಿ. 6- ಗಡಿ ವಿವಾದದಿಂದ ಕಾವೇರಿದ ಪರಿಸ್ಥಿತಿಯಲ್ಲಿರುವ ಬೆಳಗಾವಿಯಲ್ಲಿ ಕನ್ನಡ ರಕ್ಷಣಾ ವೇದಿಕೆ ಕಾರ್ಯಕರ್ತರು ಇಂದು ಪ್ರತಿಭಟನೆ ನಡೆಸಿದ್ದಾರೆ. ಅದರ ಬೆನ್ನಲ್ಲೆ ಮಹಾರಾಷ್ಟ್ರದ ಸಚಿವರು ಇಂದಿನ ಬೆಳಗಾವಿ ಭೇಟಿಯನ್ನು ಮುಂದೂಡುವುದಾಗಿ ಸ್ಪಷ್ಟಪಡಿಸಿದ್ದಾರೆ.

ಮಹಾರಾಷ್ಟ್ರದ ಸಚಿವರ ಬೆಳಗಾವಿಯ ಭೇಟಿ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತಲ್ಲದೇ ಸಂಘರ್ಷಮಯ ವಾತಾವರಣವನ್ನು ನಿರ್ಮಿಸಿತ್ತು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹಲವು ಬಾರಿ ಮನವಿ ಮಾಡಿ, ಪ್ರಸ್ತುತ ಸಂದರ್ಭದಲ್ಲಿ ಮಹಾರಾಷ್ಟ್ರ ಸಚಿವರ ಬೆಳಗಾವಿ ಭೇಟಿ ಸ್ವೀಕಾರರ್ಹವಲ್ಲ. ಗಡಿ ಭಾಗದಲ್ಲಿ ಇದು ಕಾನೂನು ಸುವ್ಯವಸ್ಥೆಗೆ ಭಂಗ ಉಂಟು ಮಾಡಲಿದೆ ಎಂದು ಹೇಳಿದ್ದರು ಮತ್ತು ಮಹಾರಾಷ್ಟ್ರದ ಮುಖ್ಯಮಂತ್ರಿಯೊಂದಿಗೂ ಸಮಾಲೋಚನೆ ನಡೆಸಿ ಸಚಿವರು ಬೆಳಗಾವಿ ಭೇಟಿಗೆ ಕಡಿವಾಣ ಹಾಕುವಂತೆ ಒತ್ತಡ ಹೇರಿದರು.

ಲಾಲೂಗೆ ಪುತ್ರಿಗೆ ಆದರ್ಶ ಪುತ್ರಿ ಎಂದು ಕೊಂಡಾಡಿದ ರಾಜಕೀಯ ವಿರೋಧಿಗಳು

ಇದರ ಜೊತೆಗೆ ಕರವೇ ಅಧ್ಯಕ್ಷ ಟಿ.ಎ. ನಾರಾಯಣಗೌಡ ನೇತೃತ್ವದಲ್ಲಿ ಸಾವಿರಾರು ಕನ್ನಡ ರಕ್ಷಣಾ ವೇದಿಕೆಯ ಕಾರ್ಯಕರ್ತರು ಬೆಳಗಾವಿಗೆ ತೆರಳಿ ಮಹಾರಾಷ್ಟ್ರದ ಸಚಿವರ ಭೇಟಿಯನ್ನು ತಡೆಯಲು ಮುಂದಾಗಿದ್ದರು. ಜೊತೆಗೆ ಬೆಳಗಾವಿಯಲ್ಲಿ ಸಮಾವೇಶವನ್ನು ಹಮ್ಮಿಕೊಂಡಿದ್ದರು. ಈ ವೇಳೆ ಮಾತನಾಡಿದ ನಾರಾಯಣಗೌಡ ಅವರು ಮಹಾರಾಷ್ಟ್ರದ ಸಚಿವರು ಬೆಳಗಾವಿಗೆ ಕಾಲಿಡಲು ಬಿಡುವುದಿಲ್ಲ. ಮುಂದೆ ಯಾವುದೇ ದಿನ ಅವರು ಆಗಮಿಸಿದ್ದರೂ ನಾವು ಅದನ್ನು ತಡೆಯುತ್ತೇವೆ ಎಂದು ಪ್ರತಿಜ್ಞೆ ಮಾಡಿದ್ದರು. ಇಂದು ಧಾರವಾಡದಿಂದ ಸಾವಿರಾರು ಸಂಖ್ಯೆಯ ಕರವೇ ಕಾರ್ಯಕರ್ತರು ಕನ್ನಡ ಧ್ವಜದೊಂದಿಗೆ ಬೆಳಗಾವಿವರೆಗೂ ಬೃಹತ್ ರ್ಯಾಲಿ ನಡೆಸಿದರು.

ಈ ಹಿನ್ನೆಲೆಯಲ್ಲಿ ಪರಿಸ್ಥಿತಿ ಮತ್ತಷ್ಟು ಉದ್ವಿಘ್ನಗೊಂಡಿತ್ತು. ನಿನ್ನೆ ಬೆಳಗಾವಿ ಜಿಲ್ಲಾಧಿಕಾರಿ ನಿತಿಶ್ ಪಾಟೀಲ್, ಮಹಾರಾಷ್ಟ್ರದ ಇಬ್ಬರು ಸಚಿವರು ಮತ್ತು ಒಬ್ಬ ರಾಜ್ಯಸಭಾ ಸದಸ್ಯರು ಬೆಳಗಾವಿಗೆ ಆಗಮಿಸುವುದನ್ನು ನಿಬರ್ಂಸಿ ಆದೇಶ ಹೊರಡಿಸಿದರು. ಸಚಿವರ ಭೇಟಿ ಹಿನ್ನೆಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಎಲ್ಲಾ ಕಾರ್ಯಕ್ರಮಗಳು ರದ್ದುಗೊಂಡಿದ್ದವು.

ಆದರೆ ಇಷ್ಟಕ್ಕೆ ಸುಮ್ಮನಾಗದ ಮಹಾರಾಷ್ಟ್ರದ ಸಚಿವರು ತಾವು ಮುಂದೊಂದು ದಿನ ಬೆಳಗಾವಿಗೆ ಭೇಟಿ ನೀಡೇ ನೀಡುತ್ತೇವೆ ಎಂದು ಪಟ್ಟು ಹಿಡಿದಿದ್ದಾರೆ. ಇಂದು ಬೆಳಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಮಹಾರಾಷ್ಟ್ರದ ಸಚಿವ ಶಂಭುರಾಜ್ ದೇಸಾಯಿ, ನಾವಿಬ್ಬರು ಸಚಿವರು ಬೆಳಗಾವಿಗೆ ಭೇಟಿ ನೀಡುವ ಬಗ್ಗೆ ಈ ಮೊದಲೇ ಕರ್ನಾಟಕ ಸರ್ಕಾರಕ್ಕೆ ಅಧಿಕೃತವಾಗಿ ಮಾಹಿತಿ ನೀಡಿದ್ದೇವು. ಅಲ್ಲಿನ ರಾಜ್ಯಸರ್ಕಾರ ನಮ್ಮ ಭೇಟಿಯಿಂದ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗಲಿದೆ ಎಂದು ಹೇಳಿದೆ. ಹಾಗಾಗಿ ನಮ್ಮ ಭೇಟಿಯನ್ನು ಮುಂದೂಡಿದ್ದೇವೆ. ರದ್ದುಮಾಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡ ರಾಜಕೀಯ ಬದ್ಧ ವೈರಿಗಳು

ಶೀಘ್ರವೇ ಬೆಳಗಾವಿಗೆ ಭೇಟಿ ನೀಡುವ ದಿನಾಂಕವನ್ನು ನಿರ್ಧರಿಸುತ್ತೇವೆ. ಬೆಳಗಾವಿ ಜಿಲ್ಲೆಯ 850 ಹಳ್ಳಿಗಳಲ್ಲಿ ಮರಾಠಿ ಮಾತನಾಡುವ ಜನರಿದ್ದಾರೆ. ಅವರಿಗೆ ಮಹಾರಾಷ್ಟ್ರದ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಯವರು ನೀಡುವ ಪ್ಯಾಕೇಜ್ ಬಗ್ಗೆ ಮಾಹಿತಿ ನೀಡುತ್ತೇವೆ. ಬೆಳಗಾವಿ ವಿಷಯದಲ್ಲಿ ನಮ್ಮ ನಿಲುವು ಬದಲಾಗುವುದಿಲ್ಲ ಎಂದು ತಿಳಿಸಿದ್ದಾರೆ.

ಈ ಮೂಲಕ ಸದ್ಯಕ್ಕೆ ಎದುರಾಗಿದ್ದ ಸಂಘರ್ಷಮಯ ವಾತಾವರಣವೊಂದು ಮುಂದೂಡಿಕೆಯಾದಂತಾಗಿದೆ. ಬೆಳಗಾವಿಯ ಗಡಿ ವಿವಾದಕ್ಕೆ ಸಂಬಂಧಪಟ್ಟಂತೆ ತಗಾದೆ ಸುಪ್ರೀಂಕೋರ್ಟ್‍ನ ವಿಚಾರಣೆಗೆ ಬಾಕಿ ಇದೆ. ಈ ಹಂತದಲ್ಲಿ ಎಂಇಎಸ್ ಪ್ರಚೋದಿತ ರಾಜಕಾರಣಿಗಳು ಬೆಳಗಾವಿಗೆ ಬಂದು ಗೊಂದಲ ಸೃಷ್ಟಿಸುವ ಪ್ರಯತ್ನ ಮಾಡುತ್ತಿದ್ದಾರೆ.

ಕರ್ನಾಟಕ ಸರ್ಕಾರ ಗಡಿ ವಿವಾದ ಮುಗಿದ ಅಧ್ಯಾಯವಾಗಿದ್ದು, ರಾಜ್ಯದ ಒಂದಿಂಚು ಭೂಮಿಯನ್ನು ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ ಪದೇ ಪದೇ ಸ್ಪಷ್ಟಪಡಿಸತ್ತಲೇ ಇದೆ. ಆದರೂ ಮಹಾರಾಷ್ಟ್ರದ ರಾಜಕಾರಣಿಗಳು ಮರಾಠಿ ಭಾಷಾಧಾರಿತ ವರ್ಗೀಕರಣದ ಮೇಲೆ ಗಡಿಭಾಗದಲ್ಲಿ ಉದ್ವಿಘ್ನತೆ ನಿರ್ಮಿಸಲು ಪ್ರಯತ್ನ ಮಾಡುತ್ತಿದ್ದಾರೆ. ಪದೇ ಪದೇ ಪ್ರಚೋದನಾಕಾರಿ ಹೇಳಿಕೆಗಳನ್ನು ನೀಡುತ್ತಿದ್ದಾರೆ.

ವಿದ್ಯಾರ್ಥಿನಿಯ ಕತ್ತು ಕೊಯ್ದು ಕೊಂದ ಬಗ್ನ ಪ್ರೇಮಿ

ಹೀಗಾಗಿ ಗಡಿ ಜಿಲ್ಲೆಯಲ್ಲಿ ಶಾಂತಿ, ಸುವ್ಯವಸ್ಥೆಯ ಸಮಸ್ಯೆಗಳು ಎದುರಾಗುತ್ತಿವೆ. ಇದೇ ತಿಂಗಳ 19ರಿಂದ ಬೆಳಗಾವಿಯಲ್ಲಿ ವಿಧಾನಮಂಡಲ ಅವೇಶನ ಶುರುವಾಗುತ್ತಿದೆ. ಪ್ರತಿಬಾರೀ ಅಧಿವೇಶನದ ವೇಳೆ ಎಂಇಎಸ್‍ನ ಪುಂಡರು ಉದ್ದೇಶಪೂರಕವಾಗಿ ಗೊಂದಲ ಸೃಷ್ಟಿಸುತ್ತಿರುವುದು ಸಾಮಾನ್ಯವಾಗಿದೆ.

Karnataka, Maharashtra, border row, karave, protest,

Articles You Might Like

Share This Article