ಏಕನಾಥ್ ಶಿಂಧೆಗೆ ಕರ್ನಾಟಕ ಸಿಎಂ ವಿರುದ್ಧ ಮಾತನಾಡುವ ಧೈರ್ಯವಿಲ್ಲ: ಠಾಕ್ರೆ

Social Share

ಮುಂಬೈ, ನ.25- ಮಹಾರಾಷ್ಟ್ರದ ಮುಖ್ಯಮಂತ್ರಿ ಏಕನಾಥ್ ಶಿಂಧೆಗೆ ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿರುದ್ಧ ಮಾತನಾಡಲು ಧೈರ್ಯವಿಲ್ಲ ಎಂದು ಉದ್ದವ್ ಬಾಳಸಾಹೇಬ್ ಠಾಕ್ರೆ ಬಣದ ಶಿವಸೇನೆ ಮುಖ್ಯಸ್ಥ ಹಾಗೂ ಮಾಜಿ ಮುಖ್ಯಮಂತ್ರಿ ಉದ್ದವ್ ಠಾಕ್ರೆ ಲೇವಡಿ ಮಾಡಿದ್ದಾರೆ.

ಕರ್ನಾಟಕದ ಮುಖ್ಯಮಂತ್ರಿ ಗಡಿ ಭಾಗದ ಗ್ರಾಮಗಳು ತಮಗೆ ಸೇರಬೇಕು ಎಂದು ಹೇಳಿಕೆ ನೀಡಿದ್ದಾರೆ.ಈ ಹೇಳಿಕೆ ಕುರಿತಂತೆ ಮಹಾರಾಷ್ಟ್ರದಲ್ಲಿ ರಾಜಕೀಯ ಕೆಸರೆರಚಾಟ ತೀವ್ರವಾಗಿದೆ.

ಕರ್ನಾಟಕದ ಬಸ್‍ಗಳಿಗೆ ಕಲ್ಲು ತೂರಿ ಮರಾಠಿಗರ ಪುಂಡಾಟ

ಉದ್ದವ್ ಠಾಕ್ರೆ ಅವರು ಪ್ರತಿಕ್ರಿಯೆ ನೀಡಿ, ಮಹಾರಾಷ್ಟ್ರ ಕುರಿತಂತೆ ಕರ್ನಾಟಕದ ರಾಜಕಾರಣಿಗಳ ಹೇಳಿಕೆಗೆ ತಿರುಗೇಟು ನೀಡಲು ನಾವು ಧೈರ್ಯ ಕಳೆದುಕೊಂಡಿದ್ದೇವೆ. ಬಹುಶಃ ದೆಹಲಿಯ ನಾಯಕರಿಂದ ಬಸವರಾಜ ಬೊಮ್ಮಾಯಿ ಆಶೀರ್ವಾದ ಪಡೆದುಕೊಂಡಿರಬಹುದು. ಹಾಗಾಗಿ ಮಹಾರಾಷ್ಟ್ರದ ಭಾಗಗಳು ಕರ್ನಾಟಕಕ್ಕೆ ಸೇರಬೇಕೆಂದು ಹೇಳುತ್ತಿರಬಹುದು ಅಥವಾ ಕೇಂದ್ರ ಸರ್ಕಾರವು ಇದೇ ನಿಲುವನ್ನು ಹೊಂದಿರಬಹುದು ಎಂದು ಹೇಳಿದ್ದಾರೆ.

ಆಯ್ಕೆ ಮಾಡಿದ ಅಭ್ಯರ್ಥಿಯನ್ನು ಒಪ್ಪಿಕೊಂಡು ಒಟ್ಟಾಗಿ ಕೆಲಸ ಮಾಡಿ : ಡಿಕೆಶಿ

ನ್ಯಾಷನಲ್ ಕಾಂಗ್ರೆಸ್ ಪಾರ್ಟಿ (ಎನ್‍ಸಿಪಿ )ಮುಖ್ಯಸ್ಥ ಶರದ್‍ಫವಾರ್, ಬಿಜೆಪಿ ಕರ್ನಾಟಕ-ಮಹರಾಷ್ಟ್ರ ಗಡಿ ವಿವಾದದಿಂದ ಪಲಾಯನ ಮಾಡಲು ಸಾಧ್ಯವಿಲ್ಲ. ಕರ್ನಾಟಕ ಸರ್ಕಾರ ನಿಪ್ಪಾಣಿ, ಬೆಳಗಾವಿಯ ಗ್ರಾಮಗಳು ವಾಪಸ್ ಬೇಕು ಎಂದು ಬಯಸುವುದಾದರೆ ಕೆಲವು ವಿನಿಯಮಗಳ ಬಗ್ಗೆ ಚರ್ಚಿಸಬೇಕಾಗುತ್ತದೆ ಎಂದಿದ್ದಾರೆ.
ಮಹರಾಷ್ಟ್ರದ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಪ್ರತಿಪಕ್ಷಗಳಿಗೆ ತಿರುಗೇಟು ನೀಡಿದ್ದು, ಮಹಾರಾಷ್ಟ್ರ-ಕರ್ನಾಟಕದ ಗಡಿ ವಿವಾದ ಕಾಂಗ್ರೆಸ್ ಕಾಲದಿಂದಲೂ ಬಾಕಿ ಉಳಿದಿವೆ.

ಇ-ಕಾಮರ್ಸ್ ದೈತ್ಯ ಅಮೆಜಾನ್‍ಗೆ ಸಂಕಷ್ಟ

ಬಿಜೆಪಿಗಿಂತಲೂ ಕಾಂಗ್ರೆಸ್ ಹೆಚ್ಚು ಕಾಲ ಅಕಾರದಲ್ಲಿತ್ತು. ಈವರೆಗೂ ಇದು ಇತ್ಯರ್ಥವಾಗಿಲ್ಲ. ಪ್ರಕರಣ ನ್ಯಾಯಾಲಯದಲ್ಲಿದೆ. ಮಹಾರಾಷ್ಟ್ರದ ಒಂದೇ ಒಂದು ಗ್ರಾಮವೂ ಕರ್ನಾಟಕಕ್ಕೆ ಸೇರಲು ಬಿಡುವುದಿಲ್ಲ ಎಂದಿದ್ದಾರೆ.

Karnataka, Maharashtra, row, Uddhav Thackeray, Basavraj Bommai, Eknath Shinde,

Articles You Might Like

Share This Article