ಬೆಂಗಳೂರು,ಆ.21- ಪ್ರಧಾನಮಂತ್ರಿ ಸೇರಿದಂತೆ ಗಣ್ಯರಿಗೆ ಒದಗಿಸುವ ವಿಶೇಷ ರಕ್ಷಣಾ ಪಡೆ(ಎಸ್‍ಪಿಜಿ)ಗೆ ಕರ್ನಾಟಕದ ದೇಶಿ ತಳಿ ಮುಧೋಳ ನಾಯಿ ಸೇರ್ಪಡೆಯಾಗಲಿದೆ. ಮುಧೋಳ ಹೌಂಡ್ ತಳಿ ಈ ಮೊದಲು ಭಾರತೀಯ ಸೇನೆ, ಭಾರತೀಯ ವಾಯುಪಡೆ, ಕೇಂದ್ರ ಸಶಸ್ತ್ರ ಮೀಸಲು ಅರೆಸೇನಾ ಪಡೆ, ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಘಟನೆ, ರಾಜ್ಯ ಪೊಲೀಸ್ ಮತ್ತು ಅರಣ್ಯ ಇಲಾಖೆಯ ಪಡೆಗಳಲ್ಲಿ ಮುಧೋಳ ತಳಿಯನ್ನು ಬಳಕೆ ಮಾಡಿಕೊಳ್ಳಲಾಗಿದೆ.
ಎಸ್‍ಪಿಜಿ ದೇಶದಲ್ಲಿ ವಿಶೇಷ ಎಂದು ಗುರುತಿಸಿಕೊಂಡಿದ್ದು, ಉತ್ಕøಷ್ಟ ಸೇವೆಗೆ ಹೆಸರಾಗಿದೆ. ಎಸ್‍ಪಿಜಿಯ ಅಧಿಕಾರಿಗಳು ಮುಧೋಳ ತಳಿಯ ಎರಡು ಮರಿಗಳನ್ನು ತರಬೇತಿ ಮತ್ತು ಪ್ರಯೋಗಾರ್ಥವಾಗಿ ಬಳಸಿಕೊಳ್ಳುತ್ತಿದ್ದಾರೆ. ಕನೈನ್ ರಿಸರ್ಚ್ ಅಂಡ್ ಇನ್‍ರ್ಫಾಮೇಷನ್ ಸೆಂಟರ್(ಸಿಆರ್‍ಐಸಿ) ಬಾಗಲಕೋಟೆ ಜಿಲ್ಲೆಯ ಮುಧೋಳ ತಳಿಯ ನಾಯಿಗಳನ್ನು ಎಸ್‍ಪಿಜಿಗೆ ಹಸ್ತಾಂತರಿಸಿದೆ.
ಸಿಆರ್‍ಐಸಿಯ ನಿರ್ದೇಶಕರಾದ ಸುಶಾಂತ್ ಅಂಡೆ, ಎಸ್‍ಪಿಜಿಯ ಅಗತ್ಯತೆಗಳೇನು ಎಂಬುದು ನಮಗೆ ಗೊತ್ತಿಲ್ಲ. ಆದರೆ ಮುಧೋಳ ತಳಿಯ ಸಾಮಥ್ರ್ಯದ ಅಧಿಕಾರಿಗಳಲ್ಲಿ ಮೆಚ್ಚುಗೆ ಇದೆ ಎಂದಿದ್ದಾರೆ. ಈವರೆಗೂ ಮುಧೋಳ ತಳಿ ಭಾರತೀಯ ಸೇನೆ ಸೇರಿದಂತೆ ವಿವಿಧ ಕಡೆ ಕೆಲಸ ಮಾಡಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ದೇಶದ ಯಾವುದೇ ಹವಾಮಾನ ಪರಿಸ್ಥಿತಿ ಇದ್ದರೂ ಇದು ಹೊಂದಿಕೊಳ್ಳುತ್ತದೆ.ಹಿಮಾಲಯದಂತಹ ದುರ್ಗಮ ಪ್ರದೇಶದಲ್ಲೂ ಮುಧೋಳ ತಳಿ ಸಮರ್ಥವಾಗಿ ಕೆಲಸ ಮಾಡುವ ಸಾಮಥ್ರ್ಯ ಹೊಂದಿದೆ ಎಂದಿದ್ದಾರೆ.
ಕರ್ನಾಟಕ ಪಶುವೈದ್ಯಕೀಯ ವಿವಿಯ ನಿರ್ದೇಶಕ ಬಿ.ವಿ.ಶಿವಪ್ರಕಾಶ್ ಅವರು ಮುಧೋಳ ತಳಿಯನ್ನು ಈ ಮೊದಲು ಸೀ ಹೌಂಡ್ ಎಂದು ಕರೆಯಲಾಗುತ್ತಿದ್ದು, ಅದು ತುಂಬ ದೂರದವರೆಗೂ ನೋಡುವ ಸಾಮಥ್ರ್ಯ ಹೊಂದಿದೆ. ಅದರ ಓಟದ ಶಕ್ತಿ ಅದ್ಭುತವಾಗಿದೆ. ಎತ್ತರ ಮತ್ತು ಬಲದಲ್ಲಿ ಬೇರೆ ಯಾವುದೂ ಹೋಲಿಕೆಯಾಗುವುದಿಲ್ಲ ಎಂದು ಹೇಳಿದ್ದಾರೆ.
ಪ್ರಧಾನಿ ನರೇಂದ್ರಮೋದಿ ಅವರು ಮೇಕಿನ್ ಇಂಡಿಯಾ ಅಭಿಯಾನದಲ್ಲಿ ದೇಶೀಯ ವಸ್ತುಗಳು ಮತ್ತು ತಳಿಗೆ ಆದ್ಯತೆ ನೀಡಿದ್ದಾರೆ. ಅದರ ಅಂಗವಾಗಿ ಮುಧೋಳ ತಳಿಯನ್ನು ಎಸ್‍ಪಿಜಿ ಬಳಕೆ ಮಾಡಿಕೊಳ್ಳಲು ಮುಂದಾಗಿದೆ.
1985ರಿಂದಲೂ ಎಸ್‍ಪಿಜಿ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಗಣ್ಯರಿಗೆ ಭದ್ರತೆ ಒದಗಿಸುತ್ತಿದೆ.