ಕರ್ನಾಟಕಕ್ಕೆ ಶೀಘ್ರದಲ್ಲೇ ‘ಹುಲಿ ರಾಜ್ಯ’ ಪಟ್ಟ..!

Social Share

ಭೋಪಾಲ್,ಜ.8- ಪ್ರಸಕ್ತ ವರ್ಷದಲ್ಲಿ ಕರ್ನಾಟಕ ಅತಿ ಹೆಚ್ಚು ಹುಲಿಗಳನ್ನು ಹೊಂದಿರುವ ರಾಜ್ಯ ಎಂಬ ಕೀರ್ತಿಗೆ ಪಾತ್ರವಾಗುವ ಸಾಧ್ಯತೆಗಳಿವೆ.

ಇದುವರೆಗೂ ಅತಿ ಹೆಚ್ಚು ಹುಲಿಗಳನ್ನು ಹೊಂದಿರುವ ರಾಜ್ಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ಮಧ್ಯಪ್ರದೇಶದಲ್ಲಿ ಕಳೆದ ವರ್ಷ 34 ಹುಲಿಗಳು ಸಾವನ್ನಪ್ಪಿವೆ ಅದೇ ರೀತಿ ಕರ್ನಾಟಕದಲ್ಲಿ ಕೇವಲ 15 ಹುಲಿಗಳು ಪ್ರಾಣ ಕಳೆದುಕೊಂಡಿರುವುದರಿಂದ ಕರ್ನಾಟಕವೇ ಅತಿ ಹೆಚ್ಚು ಹುಲಿ ಹೊಂದಿರುವ ರಾಜ್ಯ ಎಂಬ ಹೆಗ್ಗಳಿಕೆ ಪಾತ್ರವಾಗುವ ಸಾಧ್ಯತೆಗಳಿವೆ.

ಪ್ರಸಕ್ತ ವರ್ಷದ ಹುಲಿ ಗಣತಿ ಪ್ರಕಟವಾದ ನಂತರ ಕರ್ನಾಟಕ ಅತಿ ಹೆಚ್ಚು ಹುಲಿಗಳನ್ನು ಹೊಂದಿರುವ ರಾಜ್ಯ ಎಂದು ಘೋಷಿಸುವ ಸಾಧ್ಯತೆಗಳಿವೆ.

ಕಾಸರಗೂಡಿನಲ್ಲಿ ಬೀಡಿ ಕಟ್ಟುತ್ತಿದ್ದ ವ್ಯಕ್ತಿ ಇಂದು ಟೆಕ್ಸಾಸ್ ಜಿಲ್ಲಾ ನ್ಯಾಯಾಧೀಶ..!

2018ರ ಹುಲಿಗಣತಿಯಲ್ಲಿ ಮಧ್ಯಪ್ರದೇಶದಲ್ಲಿ 526 ಹಾಗೂ ಕರ್ನಾಟಕದಲ್ಲಿ 524 ಹುಲಿಗಳಿದ್ದವು ಎಂದು ಕಂಡು ಬಂದಿದೆ. ಇದೀಗ ಮಧ್ಯಪ್ರದೇಶದಲ್ಲಿ ಅತಿ ಹೆಚ್ಚು ಹುಲಿಗಳು ನಿಗೂಢ ರೀತಿಯಲ್ಲಿ ಸಾವನ್ನಪ್ಪಿರುವುದು ಏಕೆ ಎನ್ನುವುದು ತಿಳಿದುಬಂದಿಲ್ಲ ಎನ್ನುತ್ತಾರೆ ಅಲ್ಲಿನ ಹಿರಿಯ ಅರಣ್ಯ ಇಲಾಖೆಯ ಅಧಿಕಾರಿಯೊಬ್ಬರು.

ನಾಲ್ಕು ವರ್ಷಗಳಿಗೊಮ್ಮೆ ನಡೆಸಲಾಗುವ ಹುಲಿ ಗಣತಿ 2022ರಲ್ಲಿ ಆರಂಭವಾಗಿದ್ದು, ಅದಷ್ಟು ಬೇಗ ವರದಿ ಬಿಡುಗಡೆಯಾಗಲಿದ್ದು, ಆ ನಂತರವೇ ಹುಲಿ ರಾಜ್ಯ ಎಂಬ ಪಟ್ಟ ಕರ್ನಾಟಕಕ್ಕೆ ಒಲಿಯುವ ಸಾಧ್ಯತೆಗಳಿವೆ.

Karnataka, nearest, rival, tiger state, tag,

Articles You Might Like

Share This Article