BIG NEWS : ನೀಟ್ ಕೌನ್ಸೆಲಿಂಗ್ ನೋಂದಣಿ ದಿನಾಂಕ ವಿಸ್ತರಣೆ

Social Share

ನವದೆಹಲಿ,ಅ.23- ನೀಟ್ ಕೌನ್ಸೆಲಿಂಗ್ ಆನ್‍ಲೈನ್ ನೋಂದಣಿ ದಿನಾಂಕವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಎರಡು ದಿನಗಳ ಕಾಲ ವಿಸ್ತರಿಸಿದೆ. ಅಭ್ಯರ್ಥಿಗಳು ಈಗ ಅ.25 ರವರೆಗೆ ವೈದ್ಯಕೀಯ ಕಾಲೇಜುಗಳಲ್ಲಿ ರಾಜ್ಯ ಕೋಟಾದ ಮೇಡಿಕಲ್ ಸೀಟುಗಳಿಗೆ ಪ್ರವೇಶಕ್ಕಾಗಿ ನೋಂದಾಯಿಸಿಕೊಳ್ಳಬಹುದಾಗಿದೆ ಎಂದು ಕೆಇಎ ಪ್ರಕಟಣೆಯಲ್ಲಿ ತಿಳಿಸಿದೆ.

ಈ ಮೊದಲು ನೀಟ್ ಕೌನ್ಸೆಲಿಂಗ್ ಆನ್‍ಲೈನ್ ನೋಂದಣಿಗೆ ಇಂದು ಕೊನೆ ದಿನವಾಗಿತ್ತು. ಇದೀಗ ಮತ್ತೆ ಎರಡು ದಿನಗಳ ಕಾಲವಕಾಶ ದೊರೆತಿರುವುದು ಹಲವಾರು ಅಭ್ಯರ್ಥಿಗಳಿಗೆ ವರದಾನವಾಗಿ ಪರಿಣಮಿಸಿದೆ.

ವಿಧಾನಸಭೆ ಡೆಪ್ಯುಟಿ ಸ್ಪೀಕರ್ ಆನಂದ್ ಮಾಮನಿ ನಿಧನ

ನೀಟ್ ಕೌನ್ಸೆಲಿಂಗ್‍ನಲ್ಲಿ ಭಾಗವಹಿಸಲು ಆಸಕ್ತರಾಗಿರುವ ಅಭ್ಯರ್ಥಿಗಳು ಅಕೃತ ವೆಬ್‍ಸೈಟ್ ಮೂಲಕ ತಮ್ಮ ಹೆಸರುಗಳನ್ನು ನೋಂದಾಯಿಸಿಕೊಳ್ಳಬಹುದಾಗಿದೆ.

Articles You Might Like

Share This Article