ಬೆಂಗಳೂರು,ಫೆ.7- ಸಂಚಾರಿ ನಿಯಮ ಉಲ್ಲಂಘನೆ ಪ್ರಕರಣಗಳಲ್ಲಿ ದಂಡ ಪಾವತಿಸಲು ಕರ್ನಾಟಕ ಪೊಲೀಸ್‍ನ ಕೆಎಸ್‍ಪಿ ಆ್ಯಪ್ ಬಳಸಬಹುದು ಎಂದು ಪೊಲೀಸ್ ಇಲಾಖೆ ತಿಳಿಸಿದೆ.
ದಂಡ ಪಾವತಿಯಷ್ಟೆ ಅಲ್ಲ ಪೊಲೀಸ್ ಇಲಾಖೆಯ ಆ್ಯಪ್‍ನಲ್ಲಿ ಹಲವು ಪ್ರಯೋಜನಗಳಿವೆ. ಕೆಎಸ್‍ಪಿ ಹೆಸರಿನ ಈ ಆ್ಯಪ್ ಅನ್ನು ಈಗಾಗಲೇ ಬಳಕೆ ಮಾಡುತ್ತಿರುವವರು, ಅಪ್‍ಡೆಟ್ ಅಥವಾ ರಿಇನ್ಸಟಾಲ್ ಮಾಡಿಕೊಂಡರೆ ಹೊಸ ಫ್ಯೂಚರ್‍ಗಳು ದೊರೆಯುತ್ತವೆ ಎಂದು ತಿಳಿಸಲಾಗಿದೆ.
ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳಲ್ಲಿ ವಿಧಿಸಲಾಗಿರುವ ದಂಡದಲ್ಲಿ ಶೇ.50ರಷ್ಟು ರಿಯಾಯಿತಿಯನ್ನು ಈಗಾಗಲೇ ಘೋಷಣೆ ಮಾಡಲಾಗಿದೆ. ರಿಯಾಯಿತಿ ಸಹಿತ ದಂಡ ಪಾವತಿಗೆ ಫೆ.11 ಕಡೆಯ ದಿನವಾಗಿದೆ. ಅರ್ಧದಷ್ಟು ರಿಯಾಯಿತಿ ನೀಡಿರುವುದರಿಂದ ಬಾಕಿ ಪ್ರಕರಣಗಳನ್ನು ಇತ್ಯರ್ಥ ಪಡಿಸಿಕೊಳ್ಳಲು ಜನ ಮುಗಿ ಬಿದ್ದಿದ್ದಾರೆ.
ಕೇಂದ್ರದ ಬಜೆಟ್‍ನಲ್ಲಿ ಸರ್ವ ಹಿತ ರಕ್ಷಣೆಗೆ ಆದ್ಯತೆ : ಪ್ರಧಾನಿ
ದಂಡ ಪಾವತಿದಾರರಿಗೆ ಅನಾನುಕೂಲವಾಗಬಾರದು ಎಂದು ಪೊಲೀಸ್ ಇಲಾಖೆ ಹಲವು ಮಾದರಿಗಳ ಸೌಲಭ್ಯ ಒದಗಿಸಿದೆ. ಆನ್‍ಲೈನ್, ಖಾಸಗಿ ಮೊಬೈಲ್ ಆ್ಯಪ್, ಸಂಚಾರಿ ಪೊಲೀಸ್ ಠಾಣೆ, ಸಂಚಾರ ನಿರ್ವಹಣೆ ಮಾಡುತ್ತಿರುವ ಪೊಲೀಸರ ಬಳಿ ಸೇರಿದಂತೆ ಅನೇಕ ಮಾದರಿಗಳಲ್ಲಿ ದಂಡ ಪಾವತಿಸಲು ಅವಕಾಶ ಕಲ್ಪಿಸಲಾಗಿದೆ.
ಮದ್ರಾಸ್ ಹೈಕೋರ್ಟ್ ಹೆಚ್ಚುವರಿ ನ್ಯಾಯಮೂರ್ತಿಯಾಗಿ ಗೌರಿ ಪ್ರಮಾಣ ವಚನ
ಪ್ರಮುಖವಾಗಿ ಬಹುತೇಕರು ಪೊಲೀಸ್ ಇಲಾಖೆಯ ಅಧಿಕೃತ ಆ್ಯಪ್‍ನಲ್ಲೇ ದಂಡ ಪಾವತಿಸಲು ಆಸಕ್ತಿ ತೋರಿಸುತ್ತಿದ್ದಾರೆ. ಅಂತಹವರಿಗೆ ಮತ್ತಷ್ಟು ಫ್ಯೂಚರ್ ಅನ್ನು ಪರಿಚಯಿಸಲು ಕ್ರಮ ಕೈಗೊಳ್ಳಲಾಗಿದೆ. ಆ್ಯಪ್ ಅನ್ನು ಪ್ಲೇಸ್ಟೋರ್ ಮತ್ತು ಐಫೋನ್‍ನ ಜಾಲತಾಣದಿಂದ ಅಪ್‍ಡೆಟ್ ಮಾಡಿಕೊಳ್ಳಲು ಸೂಚಿಸಲಾಗಿದೆ.
Karnataka, Police, KSP, app, update,