ಕರ್ನಾಟಕ ರತ್ನ ಮೂಲಕವೂ ಹಲವು ದಾಖಲೆ ಬರೆಯಲಿದ್ದಾರೆ ಅಪ್ಪು

Social Share

ಬೆಂಗಳೂರು,ಅ.31- ಅಭಿಮಾನಿಗಳ ಪಾಲಿನ ಪವರ್ ಸ್ಟಾರ್ ಸ್ಯಾಂಡಲ್ ವುಡ್‍ನ ಪ್ರತಿಭಾವಂತ ನಟ ಪುನೀತ್ ರಾಜ್‍ಕುಮಾರ್ ಅವರಿಗೆ ಮರಣೋತ್ತರವಾಗಿ ನಾಳೆ ಪ್ರತಿಷ್ಠಿತ ಕರ್ನಾಟಕ ರತ್ನ ಪ್ರಶಸ್ತಿಯನ್ನು ರಾಜ್ಯ ಸರ್ಕಾರ ನೀಡಲಿದೆ.

ಈ ಮೂಲಕ ಮರಣೋತ್ತರವಾಗಿ ಕರ್ನಾಟಕ ರತ್ನ ಪ್ರಶಸ್ತಿ ಪಡೆದ ಮೊದಲ ಚಿತ್ರನಟ ಎಂಬ ಹೆಗ್ಗಳಿಕೆಗೆ ಪುನೀತ್ ರಾಜ್‍ಕುಮಾರ್ ಪಾತ್ರರಾಗಲಿದ್ದಾರೆ.ಈವರೆಗೂ ಎಂಟು ಮಂದಿಗೆ ಕರ್ನಾಟಕ ರತ್ನ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗಿತ್ತು. ಆದರೆ ಇದು ಜೀವಿತಾವಯಲ್ಲೇ ಈ ಪ್ರಶಸ್ತಿ ಲಭಿಸಿತ್ತು.

ಪುನೀತ್ ರಾಜ್‍ಕುಮಾರ್ ಅವರಿಗೆ ಮರಣೋತ್ತರವಾಗಿ ಪ್ರಶಸ್ತಿ ನೀಡಲಾಗಿದೆ. ನಾಳೆ ಸಂಜೆ 4 ಗಂಟೆಗೆ ವಿಧಾನಸೌಧದ ಮುಂಭಾಗದಲ್ಲಿ ನಡೆಯಲಿರುವ ವರ್ಣರಂಜಿತ ಸಮಾರಂಭದಲ್ಲಿ ತಮಿಳುನಾಡಿನ ಸೂಪರ್ ಸ್ಟಾರ್ ರಜನಿಕಾಂತ್, ಆಂಧ್ರಪ್ರದೇಶದ ಜೂನಿಯರ್ ಎನ್‍ಟಿಆರ್ ಎಂದೇ ಖ್ಯಾತಿಯಾಗಿರುವ ನಂದಮುರಿ ತಾರಕ ರಾಮರಾವ್, ಕನ್ನಡ ಚಿತ್ರರಂಗದ ಪ್ರಮುಖ ನಟ-ನಟಿಯರು, ನಿರ್ಮಾಪಕರು, ನಿರ್ದೇಶಕರು, ವರನಟ ಡಾ.ರಾಜ್‍ಕುಮಾರ್ ಕುಟುಂಬದ ಬಹುತೇಕ ಎಲ್ಲ ಸದಸ್ಯರು ಸಮಾರಂಭದಲ್ಲಿ ಹಾಜರಿರುವರು.

ಪ್ರೀತಿಸಿದವನನ್ನು ಮನೆಗೆ ಕರೆಸಿ ವಿಷವಿಟ್ಟು ಕೊಂದ ಪ್ರೇಯಸಿ..!

2021ರ ಅಕ್ಟೋಬರ್ 29ರಂದು ಕನ್ನಡ ಚಿತ್ರರಂಗ ಮರೆಯಲಾಗದಂತಹ ಆಘಾತ ಉಂಟಾಗಿತ್ತು. ಅತ್ಯಲ್ಪ ಕಾಲದಲ್ಲಿ ಕರ್ನಾಟಕ ಮಾತ್ರವಲ್ಲದೆ ದೇಶ-ವಿದೇಶಗಳಲ್ಲೂ ತಮ್ಮ ಮನೋಜ್ಞ ಅಭಿನಯನದ ಮೂಲಕ ಎಲ್ಲರ ಪ್ರೀತಿಗೆ ಪಾತ್ರರಾಗಿದ್ದ ಪುನೀತ್‍ರಾಜ್‍ಕುಮಾರ್ ಹಠಾತ್ ನಿಧನರಾಗಿದ್ದರು.

ಕನ್ನಡ ಚಿತ್ರರಂಗಕ್ಕೆ ಸಲ್ಲಿಸಿದ ಅನುಪಮ ಸೇವೆಯನ್ನು ಪರಿಗಣಿಸಿ ಕರ್ನಾಟಕ ಸರ್ಕಾರ ಕನ್ನಡ ರಾಜ್ಯೋತ್ಸವದ ದಿನವಾದ ನಾಳೆ ಅಗಲಿದ ಮೇರುನಟನಿಗೆ ಪ್ರತಿಷ್ಟಿತ ಕರ್ನಾಟಕ ರತ್ನ ನೀಡಿ ಗೌರವಿಸಲಾಗುತ್ತಿದೆ. ಅತ್ಯಂತ ಚಿಕ್ಕ ವಯಸ್ಸಿನಲ್ಲೇ ಈ ಪ್ರಶಸ್ತಿ ಪಡೆದ ದಾಖಲೆಯು ಪುನೀತ್ ರಾಜ್‍ಕುಮಾರ್ ಅವರಿಗೆ ಸಲ್ಲುತ್ತದೆ.

Articles You Might Like

Share This Article