ಗಣರಾಜ್ಯೋತ್ಸವ ಸ್ತಬ್ಧ ಚಿತ್ರ ಪ್ರದರ್ಶನದಲ್ಲಿ ಕರ್ನಾಟಕ ದಾಖಲೆ

Social Share

ನವದೆಹಲಿ,ಜ.26- ಗಣರಾಜ್ಯೋತ್ಸವದ ವೇಳೆ ನಡೆಯುವ ಸ್ತಬ್ಧ ಚಿತ್ರ ಪ್ರದರ್ಶನದಲ್ಲಿ ಸತತ 14 ವರ್ಷ ಪಾಲ್ಗೊಳ್ಳುವ ಮೂಲಕ ಕರ್ನಾಟಕ ಹೊಸ ದಾಖಲೆ ಬರೆದಿದೆ.

ಯಾವುದೇ ರಾಜ್ಯ ಇಷ್ಟು ವರ್ಷಗಳ ಕಾಲ ಸತತವಾಗಿ 14 ವರ್ಷ ಭಾಗಿಯಾಗಿರುವ ನಿದರ್ಶನಗಳು ಇಲ್ಲ. 2009ರಿಂದ 2023ರವರೆಗೂ ನಿರಂತರವಾಗಿ ಸ್ತಬ್ಧ ಚಿತ್ರದಲ್ಲಿ ಭಾಗಿಯಾಗುವ ಅವಕಾಶವನ್ನು ಉಳಿಸಿಕೊಂಡಿರುವ ಏಕೈಕ ರಾಜ್ಯ ಕರ್ನಾಟಕವಾಗಿದೆ.

ಅತ್ಯುತ್ತಮ ಸ್ತಬ್ಧ ಚಿತ್ರ ಪ್ರದರ್ಶನಕ್ಕಾಗಿ ಕೆಲವು ಬಾರಿ ರಾಜ್ಯಕ್ಕೆ ಪ್ರಥಮ ಪ್ರಶಸ್ತಿ ಬಂದಿದ್ದರೆ, ಉಳಿದ ಸಂದರ್ಭದಲ್ಲಿ ದ್ವಿತೀಯ ಪ್ರಶಸ್ತಿಯೂ ದಕ್ಕಿದೆ.

ಇದೇ ಮೊದಲ ಬಾರಿಗೆ ಚಾಮರಾಜಪೇಟೆ ಈದ್ಗಾ ಮೈದಾನದಲ್ಲಿ ಹಾರಾಡಿದ ತಿರಂಗಾ

ಈ ವರ್ಷ ಕರ್ನಾಟಕದ ಸ್ತಬ್ಧ ಚಿತ್ರಕ್ಕೆ ಪಾಲ್ಗೊಳ್ಳುವ ಅಕವಾಶ ಕೈ ತಪ್ಪಿತ್ತು. ಬೇರೆ ರಾಜ್ಯಗಳಿಗೆ ಅವಕಾಶ ನೀಡುವ ಕಾರಣಕ್ಕಾಗಿ ಮೊದಲು ನಿರಾಕರಿಸಲಾಗಿತ್ತು. ನಂತರ ತೀವ್ರ ವಿವಾದ ಸೃಷ್ಟಿಯಾಗಿ ಕನ್ನಡಿಗರಿಂದ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಕೊನೆ ಕ್ಷಣದಲ್ಲಿ ಅವಕಾಶ ನೀಡಿತ್ತು.

ಪ್ರಸಕ್ತ ವರ್ಷ ಕರ್ನಾಟಕ ನಾರಿಶಕ್ತಿ ಸ್ತಬ್ಧ ಚಿತ್ರ ಪ್ರದರ್ಶಿಸಿದ್ದು, ಮಾದರಿ ಮಹಿಳೆಯರಾದ ಸೂಲಗಿತ್ತಿ ನರಸಮ್ಮ, ತುಳಸಿಗೌಡ, ಸಾಲುಮರದ ತಿಮ್ಮಕ್ಕ ಅವರ ಸ್ತಬ್ಧ ಚಿತ್ರ ಪ್ರದರ್ಶನಗೊಂಡಿದೆ.

Karnataka, Republic Day, tableau, New Delhi, record,

Articles You Might Like

Share This Article