2022ನೇ ಸಾಲಿನ ಕರ್ನಾಟಕ ಸ್ಟ್ಯಾಂಪ್ ( 2ನೇ ತಿದ್ದುಪಡಿ) ವಿಧೇಯಕ ವಿಧಾನಸಭೆಯಲ್ಲಿ ಅಂಗೀಕಾರ

Social Share

ಬೆಂಗಳೂರು,ಫೆ.21-ರಾಜ್ಯದಲ್ಲಿ ಕೈಗಾರಿಕೆಗಳನ್ನು ಉತ್ತೇಜಿಸುವ ನಿಟ್ಟಿನಲ್ಲಿ ನೋಂದಣಿ ಶುಲ್ಕ 25 ಕೋಟಿಗೆ ಸೀಮಿತಗೊಳಿಸುವ 2022ನೇ ಸಾಲಿನ ಕರ್ನಾಟಕ ಸ್ಟ್ಯಾಂಪ್ (2ನೇ ತಿದ್ದುಪಡಿ) ವಿಧೇಯಕವನ್ನು ವಿಧಾನಸಭೆಯಲ್ಲಿ ಇಂದು ಅಂಗೀಕರಿಸಲಾಯಿತು.
ಇನ್ನು ಮುಂದೆ ರಾಜ್ಯದಲ್ಲಿ ಕೈಗಾರಿಕೆ ಸ್ಥಾಪನೆ ಮಾಡಲು ಹೊರ ರಾಜ್ಯಗಳಿಂದ ಬರುವ ಕೈಗಾರಿಕೋದ್ಯಮಿಗಳಿಗೆ ನೋಂದಣಿ ಶುಲ್ಕದ ಮೊತ್ತವನ್ನು 25 ಕೋಟಿಗಿಂತ ಹೆಚ್ಚು ವಿಸುವುದನ್ನು ನಿಯಂತ್ರಿಸುವುದೇ ಈ ವಿಧೇಯಕದ ಮುಖ್ಯ ಉದ್ದೇಶವಾಗಿದೆ.
ವಿಧೇಯಕದ ಮೇಲೆ ಮಾತನಾಡಿದ ಕಂದಾಯ ಸಚಿವ ಅಶೋಕ್, ಗುಜರಾತ್ ಮತ್ತು ಮಹಾರಾಷ್ಟ್ರದಲ್ಲಿ ಕೈಗಾರಿಕೆಗಳನ್ನು ಸ್ಥಾಪನೆ ಮಾಡಲು ಬರುವ ಹೊರರಾಜ್ಯಗಳ ಉದ್ಯಮಿಗಳಿಗೆ ನೋಂದಣಿ ಶುಲ್ಕವನ್ನು 25 ಕೋಟಿಗೂ ಹೆಚ್ಚು ವಿಧಿಸುವುದಿಲ್ಲ. ನಮ್ಮಲ್ಲಿ ಇದರ ಪ್ರಮಾಣ ಹೆಚ್ಚಳವಾಗಿದ್ದರಿಂದ ರಾಜ್ಯಕ್ಕೆ ಬರುವ ಅನೇಕ ಕೈಗಾರಿಕೆಗಳು ಕೈತಪ್ಪಿ ಹೋಗತ್ತಿದ್ದವು ಎಂದು ಹೇಳಿದರು.
ನಮ್ಮ ರಾಜ್ಯಕ್ಕೆ ಹೆಚ್ಚಿನ ಬಂಡವಾಳ ಆಕರ್ಷಿಸಿ ಕೈಗಾರಿಕೆಗಳನ್ನು ಸ್ಥಾಪನೆ ಮಾಡುವ ಉದ್ದೇಶದಿಂದ ಇನ್ನು ಮುಂದೆ ಕೈಗಾರಿಕೆಗಳನ್ನು ಸ್ಥಾಪನೆ ಮಾಡುವವರಿಗೆ ನೋಂದಣಿ ಶುಲ್ಕವಾಗಿ 25 ಕೋಟಿಗಿಂತ ಅಕ ಶುಲ್ಕವನ್ನು ವಿಸದಂತೆ ನಿಯಂತ್ರಣ ತರುವ ವಿಧೇಯಕ ಇದಾಗಿದೆ .
ಇದರಿಂದ ರಾಜ್ಯದಲ್ಲಿ ಹೆಚ್ಚಿನ ಕೈಗಾರಿಕೆಗಳು ಸ್ಥಾಪನೆಯಾಗಲಿದ್ದು, ಉದ್ಯೋಗ ಅವಕಾಶಗಳು ಸೃಷ್ಟಿಯಾಗಲಿದೆ ಎಂಬ ವಿಶ್ವಾಸವನ್ನು ಅಶೋಕ್ ವ್ಯಕ್ತಪಡಿಸಿದರು.

Articles You Might Like

Share This Article