ಒಕ್ಕಲಿಗ ಸಮುದಾಯಕ್ಕೆ ಮೀಸಲಾತಿಗಾಗಿ ಅಶೋಕ್ ಆಗ್ರಹ

Social Share

ಬೆಳಗಾವಿ, ಡಿ.22- ಕೃಷಿಯನ್ನು ನಂಬಿರುವ ಒಕ್ಕಲಿಗ ಸಮುದಾಯಕ್ಕೂ ಮೀಸಲಾತಿ ನೀಡಬೇಕೆಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಮಾಡಲಾ ಗುತ್ತದೆ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ಬೇರೆ ಸಮುದಾಯದವರಿಗೆ ಮೀಸಲಾತಿ ಕೊಡಬೇಡಿ ಎಂದು ಹೇಳುವುದಿಲ್ಲ. ಇತರೆ ಸಮುದಾಯದಂತೆ ನಮಗೂ ಕೂಡ ಸಂವಿಧಾನಬದ್ದವಾದ ಮೀಸಲಾತಿ ಕೊಡಬೇಕು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇದನ್ನು ಗಂಭೀರವಾಗಿ ಪರಿಗಣಿಸಬೇಕೆಂದು ಸಮುದಾಯದ ಪರವಾಗಿ ಮನವಿ ಮಾಡುವುದಾಗಿ ತಿಳಿಸಿದರು.

ಈಗಾಗಲೇ ಹಿಂದೆ ನಮ್ಮ ಸಮುದಾಯದ ನಿರ್ಮಲಾನಂದ ಶ್ರೀಗಳು, ಶ್ರೀ ಚಂದ್ರಶೇಖರನಾಥ ಸ್ವಾಮೀಜಿ, ನಂಜಾವಧೂತ ಸ್ವಾಮೀಜಿ ಸೇರಿದಂತೆ ಸಮುದಾಯದ ಮುಖಂಡರೆಲ್ಲರೂ ಸಭೆ ಸೇರಿ ನಮಗೆ ಮನವಿ ಮಾಡಿದ್ದಾರೆ. ಈ ಮನವಿಯನ್ನು ಮುಖ್ಯಮಂತ್ರಿಗೆ ಈಗಾಗಲೇ ಹಸ್ತಾಂತರ ಮಾಡಲಾಗಿದೆ ಎಂದರು.

ಮತ್ತೆ ಕರೋನಾ ಹಾವಳಿ : ಚೀನಾ ಪರಿಸ್ಥಿತಿ ಭಾರತಕ್ಕೆ ಬರಲ್ಲ ಎಂದ ತಜ್ಞರು

ಒಕ್ಕಲಿಗರಲ್ಲಿ ಅನೇಕರು ಆರ್ಥಿಕವಾಗಿ ಹಿಂದುಳಿದಿದ್ದಾರೆ. ನಾವು ಯಾವುದೇ ಸಮುದಾಯದ ಮೀಸಲಾತಿ ವಿರೋಧಿಗಳಲ್ಲ. ಸಂವಿಧಾನಬದ್ದವಾಗಿ ಯಾರ್ಯಾರಿಗೆ ಈ ಸವಲತ್ತು ಸಿಗಬೇಕೋ ಅದು ಸಿಗಲೇಬೇಕು. ಮುಖ್ಯಮಂತ್ರಿಗಳು ನಿನ್ನೆ ಸಮುದಾಯದ ಪರವಾಗಿ ಸೂಕ್ತವಾದ ಕ್ರಮಗಳನ್ನು ತೆಗೆದುಕೊಳ್ಳಲಿದ್ದಾರೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.

ಸಚಿವರಾದ ಗೋಪಾಲಯ್ಯ, ನಾರಾಯಣಗೌಡ, ಎಸ್.ಟಿ.ಸೋಮಶೇಖರ್, ಅಶ್ವತ್ಥ ನಾರಾಯಣ ಸೇರಿದಂತೆ ಶಾಸಕರು ಮತ್ತಿತರರು ಸಭೆ ನಡೆಸಲಿದ್ದೇವೆ. ಮುಖ್ಯಮಂತ್ರಿಗಳ ಚರ್ಚಿಸಬೇಕೆಂದು ಶ್ರೀಗಳು ಸೂಚನೆ ಕೊಟ್ಟಿದ್ದಾರೆ. ಸಮುದಾಯದ ಹಿತದೃಷ್ಟಿಯಿಂದ ನಮ್ಮ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸೂಕ್ತವಾದ ನಿರ್ಧಾರ ತೆಗೆದುಕೊಳ್ಳುವ ವಿಶ್ವಾಸವಿದೆ ಎಂದರು.

ಗ್ರಾಮೀಣ ಭಾಗದಲ್ಲಿರುವ ಒಕ್ಕಲಿಗರಿಗೆ ಇಡಬ್ಲ್ಯುಎಸ್ ಅನ್ವಯವಾಗುತ್ತದೆ. ಇದು ನಗರ ಭಾಗದ ಒಕ್ಕಲಿಗರಿಗೂ ನೀಡಬೇಕೆಂಬ ಮನವಿ ಬಂದಿದೆ. ಇದನ್ನು ಕೂಡ ಪರಿಗಣಿಸುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡುತ್ತೇವೆ ಎಂದರು.

ಗಡಿಯಲ್ಲಿ ಹೆಚ್ಚಾಯ್ತು ಡ್ರಗ್ಸ್, ಶಸ್ತ್ರಾಸ್ತ್ರ ಸಾಗಿಸುವ ಪಾಕ್ ಡ್ರೋನ್ ಹಾವಳಿ

ಪಂಚಮಸಾಲಿ ಹೋರಾಟ ವಿಚಾರದ ಬಗ್ಗೆ ನಿನ್ನೆ ಮುಖ್ಯಮಂತ್ರಿಗಳು ಸುದೀರ್ಘ ಚರ್ಚೆ ಮಾಡಿದ್ದಾರೆ. ಕಾನೂನು ಇಲಾಖೆಯಿಂದ ಮಾಹಿತಿ ಪಡೆದಿದ್ದಾರೆ. ಪಂಚಮಸಾಲಿಯವರಿಗೆ ನ್ಯಾಯ ಕೊಡುತ್ತಾರೆ ಎಂದು ಭರವಸೆ ನೀಡಿದರು.

Karnataka, Vokkaliga Community, Hike Reservation, Minister Ashok,

Articles You Might Like

Share This Article