ಬೆಂಗಳೂರು, ನ.27-ಮತದಾರರ ಪಟ್ಟಿ ಅಕ್ರಮದಲ್ಲಿ ಈವರೆಗೂ 11 ಮಂದಿ ಬಂಧನವಾಗಿದ್ದು, ಪೊಲೀಸರು ಹಗರಣದಲ್ಲಿನ ಹಣಕಾಸು ವಹಿವಾಟಿನ ಬಗ್ಗೆ ಮಾಹಿತಿ ಕಲೆಹಾಕಲಾರಂಭಿಸಿದ್ದಾರೆ. ಚುನಾವಣಾ ಆಯೋಗದ ಉಸ್ತುವಾರಿಯಲ್ಲಿ ನಡೆಯುತ್ತಿರುವ ತನಿಖೆ ದಿನೇ ದಿನೇ ಗಂಭೀರತೆ ಪಡೆದುಕೊಳ್ಳುತ್ತಿದೆ. ಹಗರಣದಲ್ಲಿ ಪ್ರಮುಖವಾಗಿ ಕೇಳಿ ಬಂದ ಚಿಲುಮೆ ಸಂಸ್ಥೆಯ ಮುಖ್ಯಸ್ಥರು ಸೇರಿದಂತೆ ಹಲವರನ್ನು ಬಂಧಿಸಲಾಗಿದೆ.
ನಿನ್ನೆ ಬಿಬಿಎಂಪಿ ನಾಲ್ಕು ಮಂದಿ ಚುನಾವಣಾಕಾರಿ(ಆರ್ಒ) ಮತ್ತು ಒಬ್ಬ ಮಧ್ಯವರ್ತಿಯನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ. ಚಿಲುಮೆ ಸಂಸ್ಥೆ ತನ್ನ ಸಿಬ್ಬಂದಿಗಳಿಂದ ಮತದಾರರ ಮಾಹಿತಿ ಸಂಗ್ರಹಿಸಲು ಅನುಕೂಲ ಮಾಡಿಕೊಡುವ ಸಲುವಾಗಿ ಬಿಬಿಎಂಪಿಯ ಅಧಿಕಾರಿಗಳು ಅಕ್ರಮವಾಗಿ ಗುರುತಿನ ಚೀಟಿಗಳನ್ನು ಮಾಡಿಕೊಟ್ಟಿದ್ದರು ಎಂದು ತಿಳಿದು ಬಂದಿದೆ.
ಮಧ್ಯವರ್ತಿ ಒಬ್ಬರು ವಿವಿಧ ಕ್ಷೇತ್ರಗಳ ಚುನಾವಣಾ ಅಧಿಕಾರಿಗಳಿಂದ ಮತದಾರರ ಗುರುತಿನ ಚೀಟಿಗಳನ್ನು ಸಂಗ್ರಹಿಸಿ ಚಿಲುಮೆ ಸಂಸ್ಥೆಗೆ ತಲುಪಿಸುತ್ತಿದ್ದರು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ಅಪರಾಧದ ತನಿಖೆ ಜತೆಗೆ ಹಣಕಾಸಿನ ವಹಿವಾಟು ಕುರಿತು ವಿಚಾರಣೆ ಆರಂಭಿಸಿದ್ದಾರೆ.
ಇಂಧೋರ್ ತಲುಪಿದ ಕಾಂಗ್ರೆಸ್ ‘ಐಕ್ಯತಾ ಯಾತ್ರೆ’
ಚಿಲುಮೆ ಸಂಸ್ಥೆ ದತ್ತಾಂಶ ಸಂಗ್ರಹ ಹಾಗೂ ಮತದಾರರ ಪಟ್ಟಿ ಪರಿಷ್ಕರಣೆಗೆ ನೆರವು ನೀಡುತ್ತಿದ್ದ ಅಧಿಕಾರಿಗಳು ಯಾವ ಆಮಿಷಕ್ಕೆ ಒಳಗಾಗಿದ್ದರು ಎಂಬ ಅಂಶಗಳನ್ನು ಪರಿಶೀಲಿಸಲಾಗುತ್ತಿದೆ.
ಅಧಿಕಾರಿಗಳು ಮತ್ತು ಚಿಲುಮೆ ಸಂಸ್ಥೆ ನಡುವೆ ಹಣಕಾಸು ವಹಿವಾಟು ನಡೆದಿದೆಯೇ ಎಂಬ ದೃಷ್ಟಿಕೋನದಿಂದಲೂ ಮಾಹಿತಿ ಕಲೆ ಹಾಕಲಾಗುತ್ತಿದೆ. ಪ್ರಮುಖವಾಗಿ ಚಿಲುಮೆ ಸಂಸ್ಥೆಯ ಆದಾಯ ಮೂಲಗಳೇನು ? ಮತದಾರರ ಪಟ್ಟಿ ಪರಿಷ್ಕರಣೆ ಮತ್ತು ದತಾಂಶ ಸಂಗ್ರಹಕ್ಕೆ ಸುಮಾರು 10 ಸಾವಿರಕ್ಕೂ ಹೆಚ್ಚು ಸಿಬ್ಬಂದಿಗಳನ್ನು ಬಳಸಿಕೊಳ್ಳಲಾಗಿತ್ತು. ಅಷ್ಟೂ ಮಂದಿಗೆ ವೇತನ ನೀಡಲು ಹಣ ಎಲ್ಲಿಂದ ಪಡೆಯಲಾಗಿದೆ ? ಯಾರೆಲ್ಲಾ ರಾಜಕೀಯ ವ್ಯಕ್ತಿಗಳಿಗೆ ದತ್ತಾಂಶಗಳನ್ನು ಮಾರಲಾಗಿದೆ ? ಎಷ್ಟು ಪ್ರಮಾಣದ ಹಣಕಾಸು ವಹಿವಾಟು ನಡೆದಿದೆ ಎಂಬೆಲ್ಲಾ ರಹಸ್ಯಗಳ ಬೆನ್ನತ್ತಿದ್ದಾರೆ.
ಚಿಲುಮೆ ಸಂಸ್ಥೆಯಿಂದ ವಶಪಡಿಸಿಕೊಳ್ಳಲಾಗಿರುವ ಕಂಪ್ಯೂಟರ್ಗಳು, ಲ್ಯಾಪ್ಟಾಪ್, ಟ್ಯಾಬ್ ಮತ್ತು ಮೊಬೈಲ್ಗಳನ್ನು ವಿಶ್ಲೇಷಿಸಣೆ ನಡೆಸಲಾಗುತ್ತಿದೆ. ಯಾವ ಯಾವ ರಾಜಕಾರಣಿಗಳ ಜತೆ ಸಂಪರ್ಕ ನಡೆಸಲಾಗಿದೆ, ಯಾವ ಮಟ್ಟಿನ ವ್ಯವಹಾರ ನಡೆದೆ, ಚಿಲುಮೆ ಸಂಸ್ಥೆಯಿಂದ ನೀಡಲಾದ ಸೇವೆ ಯಾವುದು, ಅದಕ್ಕೆ ಪ್ರತಿಯಾಗಿ ಸಂಗ್ರಹಿಸಿದ ಹಣವೆಷ್ಟು ಎಂಬೆಲ್ಲಾ ಮಾಹಿತಿಗಳು ಪ್ರಕರಣದಲ್ಲಿ ಪ್ರಮುಖವಾಗಿದ್ದು, ಆ ಕುರಿತು ಮಾಹಿತಿ ಸಂಗ್ರಹಿಸಲಾಗುತ್ತಿದೆ ಎಂದು ತಿಳಿದು ಬಂದಿದೆ.
ಲಾಕ್ಡೌನ್ ಖಂಡಿಸಿ ಪಂಜು ಹಿಡಿದು ಬೀದಿಗಿಳಿದ ಚೀನಾ ಜನ
ಕೇಂದ್ರ ಚುನಾವಣಾ ಆಯೋಗ ಪ್ರತಿ ಹಂತದಲ್ಲೂ ತನಿಖೆ ಉಸ್ತುವಾರಿ ನಿರ್ವಹಿಸುತ್ತಿರುವುದರಿಂದ ಎಚ್ಚರಿಕೆ ವಹಿಸಲಾಗಿದೆ. ಹಿರಿಯ ಅಧಿಕಾರಿಗಳೇ ಎಲ್ಲಾ ಮಾಹಿತಿಗಳನ್ನು ಕೂಲಕಂಷವಾಗಿ ಪರಿಶೀಲಿಸಿ ಖಚಿತ ಪಡಿಸಿಕೊಳ್ಳುತ್ತಿದ್ದಾರೆ.
ಚಿಲುಮ ಸಂಸ್ಥೆ ಜತೆ ರಾಜಕೀಯ ವ್ಯಕ್ತಿಗಳು ವಹಿವಾಟು ನಡೆಸಿರುವುದು ಮುಂದಿನ ದಿನಗಳಲ್ಲಿ ಗಂಭೀರ ಸ್ವರೂಪ ಪಡೆದುಕೊಳ್ಳುವ ಸಾಧ್ಯತೆ ಇದೆ. ಚುನಾವಣಾ ಆಯೋಗ ದತ್ತಾಂಶ ಸ್ವೀಕಾರ ಅಪರಾಧ ಎಂದು ಪರಿಗಣಿಸಿದ್ದೇ ಆದರೆ ಹಲವಾರು ಮಂದಿ ರಾಜಕಾರಣಿಗಳು, ಪ್ರಭಾವಿಗಳು ಇಕ್ಕಟ್ಟಿಗೆ ಸಿಲುಕುತ್ತಾರೆ.
ಪ್ಲಾಸ್ಟಿಕ್ ಮುಕ್ತವಾಗಿರಲಿದೆ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ
ಘಟಾನುಘಟಿ ರಾಜಕೀಯ ನಾಯಕರು ತಮ್ಮ ಕ್ಷೇತ್ರಗಳ ಸಮೀಕ್ಷೆಗೆ ಚಿಲುಮೆ ಸಂಸ್ಥೆಯ ನೆರವು ಪಡೆದಿದ್ದಾರೆ. ಇದಕ್ಕೆ ಕೆಲವರು ಹಣಕಾಸು ರೂಪದಲ್ಲಿ ಶುಲ್ಕ ಪಾವತಿಸಿದ್ದಾರೆ. ಇನ್ನು ಕೆಲವರು ತಮ್ಮ ಪ್ರಭಾವ ಬಳಸಿ ಸರ್ಕಾರಿ ಗುತ್ತಿಗೆ ಸೇರಿದಂತೆ ಹಲವು ನೆರವು ಕೊಡಿಸುವ ಮೂಲಕ ಸಂಸ್ಥೆಯಿಂದ ಸೇವೆ ಪಡೆದಿದ್ದಾರೆ ಎನ್ನಲಾಗಿದೆ. ಈ ಎಲ್ಲಾ ವಿಚಾರಗಳ ಕುರಿತು ತನಿಖೆ ಪ್ರಗತಿಯಲ್ಲಿದೆ.
Karnataka, Voter, ID, Scam, Chilume, Investigation, financial,