ಪ್ರಸಕ್ತ ವರ್ಷದಿಂದಲೇ ಸ್ತ್ರೀ ಸಾಮರ್ಥ್ಯ ಯೋಜನೆ ಜಾರಿ : ಬೊಮ್ಮಾಯಿ

Social Share

ಬೆಂಗಳೂರು,ನ.25-ಸ್ತ್ರೀಯರು ಸ್ವಯಂ ಉದ್ಯೋಗ ಕೈಗೊಂಡು ಪುರುಷರಿಗೆ ಸರಿಸಮಾನಾಗಿ ಜೀವನ ನಿರ್ವಹಣೆ ಮಾಡಲು ಅನುಕೂಲವಾಗಿ ಪ್ರಸಕ್ತ ವರ್ಷದಿಂದಲೇ ಸ್ತ್ರೀ ಸಾಮಥ್ರ್ಯ ಯೋಜನೆ ಜಾರಿ ಮಾಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಕಟಿಸಿದರು.

ವಿಧಾನಸೌಧದ ಬಾಂಕ್ವೆಟ್ ಹಾಲ್ನಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ಕರ್ನಾಟಕ ರಾಜ್ಯ ಮಹಿಳಾ ಆಯೋಗದ ರಜತ ಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಈ ಯೋಜನೆಯನ್ನು ಈ ವರ್ಷವೇ ಜಾರಿ ಮಾಡುತ್ತೇವೆ. ಪ್ರತಿ ಗ್ರಾಮದಲ್ಲೂ ಎರಡು ಮಹಿಳಾ ಸಂಘಗಳಿಗೆ ಈ ಯೋಜನೆಯಡಿ 5 ಲಕ್ಷ ರೂ. ಆರ್ಥಿಕ ನೆರವು ನೀಡಲಾಗುವುದು. ಇದರಿಂದ ಮಹಿಳೆಯರ ಸಬಲೀಕರಣವಾಗಲಿದೆ ಎಂದು ಸಿಎಂ ಅಭಿಪ್ರಾಯಪಟ್ಟರು.

ಅಮೆರಿಕದ ಬ್ಯಾಂಕ್ ಮತ್ತು ಜೀರಿಗೆ ಡಬ್ಬವನ್ನು ತಮ್ಮ ಭಾಷಣದಲ್ಲಿ ಉಲ್ಲೇಖ ಮಾಡಿದ ಬೊಮ್ಮಾಯಿ ಅವರು ಅಮೆರಿಕದ ಬಲಿಷ್ಠ ಬ್ಯಾಂಕ್ಗೆ ಹೋಲಿಸಿದರೆ ನಮ್ಮ ದೇಶದ ಜೀರಿಗೆ ಡಬ್ಬ ಅದಕ್ಕಿಂತಲೂ ಬಲಿಷ್ಠವಾಗಿದೆ. ಮಹಿಳೆಯರು ಅಷ್ಟು ಸ್ವಾವಲಂಬಿಯಾಗಿ ಕುಟುಂಬವನ್ನು ನಿರ್ವಹಣೆ ಮಾಡುತ್ತಿದ್ದಾರೆ ಎಂದು ಪ್ರಶಂಸಿಸಿದರು.

ಮಹಿಳಾ ಆಯೋಗವನ್ನು ಬಲಪಡಿಸಬೇಕೆಂಬ ಬೇಡಿಕೆ ಕೇಳಿಬಂದಿದೆ. ಇದಕ್ಕೆ ನಮ್ಮ ಸರ್ಕಾರ ಸಿದ್ದವಿದೆ. ನಾವು ನಿರ್ಭಯ ಕಾನೂನು ಜಾರಿಗೊಳಿಸಲು ಸಿದ್ದರಾಗಿದ್ದೇವೆ. ಕಾನೂನಿನ ಬಗ್ಗೆ ಪುರುಷರಿಗೆ ಮಾಹಿತಿ ನೀಡುವ ಅಗತ್ಯವಿದ್ದು, ಮುಂದಿನ ದಿನಗಳಲ್ಲಿ ಆ ಕೆಲಸವನ್ನು ಮಾಡಲಾಗುವುದು ಎಂದು ತಿಳಿಸಿದರು.

ಏಕನಾಥ್ ಶಿಂಧೆಗೆ ಕರ್ನಾಟಕ ಸಿಎಂ ವಿರುದ್ಧ ಮಾತನಾಡುವ ಧೈರ್ಯವಿಲ್ಲ: ಠಾಕ್ರೆ

ನಿರ್ಭಯ ನಿಧಿ ಯೋಜನೆಯಡಿ ಬೆಂಗಳೂರಿನಲ್ಲಿ 7000 ಸಿಸಿ ಕ್ಯಾಮರಾ ಅಳವಡಿಸಲಾಗಿದೆ. ಮಹಿಳೆಯರ ರಕ್ಷಣೆಗೆ ಪಿಂಕ್ ಸ್ಕ್ವಾಡ್ ಮಾಡಲಾಗಿದೆ. ಮಹಿಳಾ ಆಯೋಗಕ್ಕೆ ಸಮರ್ಥ ವಕೀಲರ ನೇಮಕ, ಮಹಿಳಾ ಆಯೊಗದಿಂದ ಬರುವ ಪ್ರಕರಣಗಳನ್ನು ಅದೇ ದಿನ ಏಳೆಂಟು ಗಂಟೆಯಲ್ಲಿ ದಾಖಲಿಸಿ ತನಿಖೆ ಆರಂಭಿಸಲು ಸೂಚನೆ ನೀಡಲಾಗುವುದು ಎಂದು ಹೇಳಿದರು.

ಮಹಿಳೆಯರ ಪೌಷ್ಟಿಕತೆ ಹೆಚ್ಚಿಸಲು, ಕಾಲೇಜು ಯುವತಿಯರಿಗೆ ಸ್ವಯಂ ರಕ್ಷಣೆ ತರಬೇತಿ, ಮಹಿಳೆಯರಿಗೆ ಸ್ತ್ರೀ ಶಕ್ತಿ ಸಂಘಗಳಿಗೆ ಸ್ರ್ತೀ ಸಾಮಾಥ್ರ್ಯ ಯೋಜನೆ ಜರಿಗೆ ತಂದಿದ್ದೇವೆ. ಮಹಿಳೆಯರಿಗೆ ವಿಶೇಷ ತರಗತಿ ಕೊಠಡಿ, ಆಶಾ ಕಾರ್ಯಕರ್ತೆಯರ ಗೌರವಧನ ಹೆಚ್ಚಳ ಮಾಡಿದ್ದೇವೆ ಎಂದು ಸರ್ಕಾರದ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು.

ಈ ಭೂಮಿ ಮೇಲೆ ಜನ್ಮ ಪೂರ್ವದ ಸಂಬಂಧ ತಾಯಿಯೊಂದಿಗೆ ಇರುತ್ತದೆ. ತಾಯಿತನ ಎಲ್ಲಕ್ಕಿಂತ ಶ್ರೇಷ್ಟ, ತಾಯಿಯ ಪ್ರೀತಿ ಮಿತಿ ಇಲ್ಲದ್ದು, ನೂರುಕ್ಕೆ ನೂರು ಶುದ್ದವಾಗಿರುತ್ತದೆ. ಹೀಗಾಗಿ ಹೆಣ್ಣು ಮಕ್ಕಳು ಶ್ರೇಷ್ಠ. ನಿಸರ್ಗ, ಪುರಾಣ, ಇತಿಹಾಸ ದೊಡ್ಡ ಸ್ಥಾನ ಕೊಟ್ಡಿದ್ದರೂ ಸಮಾಜ ಗೌರವ ಕೊಡುತ್ತಿಲ್ಲ. ಸಮಾಜ ಯಾವಾಗ ಸಮಾನತೆ ಕೊಡುತ್ತದೆ ಅವಾಗ ಮಹಿಳೆಗೆ ಗೌರವ ಬರುತ್ತದೆ ಎಂದು ಅಭಿಪ್ರಾಯಪಟ್ಟರು.

ಸಮಾಜದಲ್ಲಿ ಮೌಲ್ಯಗಳ ಪರಿವರ್ತನೆ ಆಗುವುದು ಅಗತ್ಯವಿದೆ. ಸಮಾಜದಲ್ಲಿ ಮೊದಲು ಮಹಿಳೆಯರಿಗೆ ಸಿಗುತ್ತಿದ್ದ ಗೌರವ ಸಿಗುವಂತಾಗಬೇಕು. ಮಹಿಳೆಯರ ಮೇಲೆ ದೌಜ್ಯನ್ಯ, ಅತ್ಯಾಚಾರ ಮಾಡುವವರ ವಿರುದ್ದ ಉಗ್ರ ಶಿಕ್ಷೆ ಕೊಡುವ ಕಾನೂನು ಇತ್ತೀಚೆಗೆ ಬಂದಿದೆ. ಆದರೆ ಆ ಕಾನೂನು ಮಹಿಳೆಯರ ದೌರ್ಜನ್ಯ ಕಡಿಮೆಯಾಗಿಲ್ಲ.
ಕೇಂದ್ರ ಸಚಿವ ಶೋಭಾ ಕರಂದ್ಲಾಜೆ ಮಾತನಾಡಿ, ಮಹಿಳಾ ಆಯೋಗ ಹಲ್ಲಿಲ್ಲದ ಹಾವಿನಂತಾಗಿದೆ. ಅದನ್ನು ಬಲಿಪಡಿಸುವ ಕೆಲಸವನ್ನು ರಾಜ್ಯ ಸರ್ಕಾರ ಮಾಡಬೇಕೆಂದು ಒತ್ತಾಯಿಸಿದರು.

ಹೆಚ್ಚಿನ ಅನುದಾನ ಕೊಟ್ಟು ಆಯೋಗ ವನ್ನು ಗಟ್ಟಿಗೊಳಿಸಬೇಕು. ಮಹಿಳೆಯರ ಮೇಲೆ ಬೇರೆ ಬೇರೆ ಅಶ್ಲೀಲವಾದ ಪ್ರಕರಣಗಳು ಕಂಡು ಬರುತ್ತಿವೆ. ಸೈಬರ್ ಕ್ರೈಮ್ ಮಾಡುವವರಿಗೆ ಸರ್ಕಾರ ಬಲವಾದ ಶಿಕ್ಷೆ ಕೊಡಬೇಕು ಎಂದು ಒತ್ತಾಯಿಸಿದರು.

ಕಾಂಗ್ರೆಸ್‌ ಸಭೆಯಲ್ಲೇ ಹೃದಯಾಘಾತದಿಂದ ಮಾಜಿ ಶಾಸಕ ಶ್ರೀಶೈಲಪ್ಪ ಬಿದನೂರು ನಿಧನ

ಮಹಿಳಾ ಆಯೋಗಕ್ಕೆ ಹೆಚ್ಚು ಪ್ರಕರಣಗಳು ಬಾರದೆ ಇರಲಿ. ಮಹಿಳೆಯರನ್ನು ಸುರಕ್ಷತೆಯಾಗಿ ಇಡಲು ಕ್ರಮ ವಹಿಸಬೇಕು. ಮಹಿಳೆ, ಸ್ತ್ರೀ ಬಹಳ ವಿಶೇಷವಾದ ಸೃಷ್ಟಿಕರ್ತನ ಸೃಷ್ಟಿ. ಎಲ್ಲ ಸಂಬಂಧಗಳು ನಾವು ಹುಟ್ಟಿದ ನಂತರ ಸೃಷ್ಟಿ ಅಗುತ್ತದೆ. ಆದರೆ ತಾಯಿ ಸಂಬಂಧ ಮಾತ್ರ ಜನ್ಮ ಪೂರ್ವ ಸಂಬಂಧ ಕರಾರು ರಹಿತವಾದ ಪ್ರೀತಿ ಕೇವಲ ತಾಯಿಯಿಂದ ಮಾತ್ರ ಬರಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.

ಮಹಿಳಾ ಆಯೋಗದ 25 ವರ್ಷ ಆಚರಣೆ ಮಾಡುತ್ತಿದ್ದೇವೆ. ಯಾವುದೇ ಪ್ರಕರಣ ಬಂದಾಗ 6 ತಿಂಗಳ ಒಳಗೆ ಇತ್ಯರ್ಥ ಆಗಬೇಕು ಎಂದು ಸಿಎಂ ಬೊಮ್ಮಾಯಿಗೆ ಅವರು ಮನವಿ ಮಾಡಿದರು.

ಪ್ರಕರಣಗಳನ್ನು ನಡೆಸಲು ನುರಿತ ಅಡ್ವೋಕೇಟ್ ತಂಡವನ್ನು ನೇಮಕ ಮಾಡಬೇಕು. ಮಹಿಳಾ ಶಸ್ತ್ರವಿಲ್ಲದ ಸೈನಿಕರಾಗಬಾರದು ಫಾಸ್ಟ್ ರ್ಯಾಕ್ ಕೋರ್ಟ್ , ಮಹಿಳಾ ಪೊಲೀಸ್ ಅಧಿಕಾರಿಗಳನ್ನ ನೇಮಕ ಮಾಡಬೇಕು ಎಂದು ಆಗ್ರಹಿಸಿದರು.

ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷ ರೇಖಾ ಶರ್ಮಾ ಮಾತನಾಡಿ, ನನ್ನನ್ನ ಇಲ್ಲಿಗೆ ಆಹ್ವಾನಿಸಿದ್ದಕ್ಕೆ ಪ್ರಮೀಳಾ ಜೀ, ಸಿಎಂ ಬೊಮ್ಮಾಯಿಗೆ ಧನ್ಯವಾದಗಳನ್ನ ತಿಳಿಸುತ್ತೇನೆ. ಹೆಣ್ಣುಮಕ್ಕಳು ಸ್ವಾವಲಂಬಿಗಳಾಗಬೇಕು. ಅನ್ಯಾಯದ ವಿರುದ್ಧ ಹೋರಾಡಬೇಕು. ಪೋಷಕರು ಹೆಣ್ಣುಮಕ್ಕಳಿಗೆ ಸಮಾನವಾಗಿ ಆಸ್ತಿ ಹಂಚಿಕೆ ಮಾಡಬೇಕು ಎಂದರು.

ಬೆಲ್ಟ್ ಹಾಗೂ ದೊಣ್ಣೆಯಿಂದ ವಸತಿ ಶಾಲೆಯ ಮಕ್ಕಳ ಮೇಲೆ ಹಲ್ಲೆ

ಆರ್ಥಿಕವಾಗಿ, ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಹೆಣ್ಣುಮಕ್ಕಳು ಸಬಲರಾಗಬೇಕು. ಹೆಣ್ಣು ಮಕ್ಕಳು ಸಂಪಾದನೆ ಮಾಡುವಂತಾರಬೇಕು. ಹಣ ತುಂಬಾನೇ ಮುಖ್ಯ, ಹಣವನ್ನ ಸಂಪಾದಿಸುವ ಸಾಮಥ್ರ್ಯ ಮಹಿಳೆಗೆ ಬರಬೇಕು. ಮಹಿಳೆಯೂ ಹಣ ಸಂಪಾದಿಸುವಂತಾರಾಗಿ ಮದುವೆಯಾಗುವುದು ಸೂಕ್ತ ಎಂದು ಸಲಹೆ ಮಾಡಿದರು.

Karnataka, women, Stree Samarthya, CM Basavaraj bommai,

Articles You Might Like

Share This Article