ಶಿವಮೊಗ್ಗ,ಫೆ.21-ಪ್ರಧಾನಿ ನರೇಂದ್ರ ಮೋದಿ ಅವರು ಶಿವಮೊಗ್ಗ ವಿಮಾನ ನಿಲ್ದಾಣ ಉದ್ಘಾಟನೆಗೆ ಫೆ.27 ರಂದು ಆಗಮಿಸುತ್ತಿದ್ದು ಇದಕ್ಕಾಗಿ ಜಿಲ್ಲಾಡಳಿತ ಮತ್ತು ಬಿಜೆಪಿ ಸಕಲ ತಯಾರಿ ನಡೆಸಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ತಿಳಿಸಿದ್ದಾರೆ.
ಅಂದು ಬೆಳಗ್ಗೆ 11.15 ಕ್ಕೆ ಪ್ರಧಾನಿ ಮೋದಿ ಅವರು ಶಿವಮೊಗ್ಗ ವಿಮಾನ ನಿಲ್ದಾಣದ ಹೊಸ ರನ್ ವೇಗೆ ವಿಮಾನದಲ್ಲಿ ಬಂದಿಳಿಯಲಿದ್ದಾರೆ.ನಂತರ ಮಧ್ಯಾಹ್ನ 1 ಗಂಟೆಗೆ ಬೆಳಗಾವಿಗೆ ತೆರಳಲಿದ್ದಾರೆ.
ಈಗಾಗಲೇ ಡಿಜಿಸಿಎಯಿಂದ ವಿಮಾನ ನಿಲ್ದಾಣಕ್ಕೆ ಲೈಸೆನ್ಸï ಸಿಕ್ಕಿದೆ. ರಾಜ್ಯದಲ್ಲಿಯೇ ಮೊದಲ ಹಂತದಲ್ಲಿಯೇ ಲೈಸೆನ್ಸï ಸಿಕ್ಕ ಮೊದಲ ವಿಮಾನ ನಿಲ್ದಾಣ ಇದಾಗಿದೆ. ಸುಮಾರು 3 ಲಕ್ಷಕ್ಕಿಂತ ಹೆಚ್ಚು ಜನರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. 10 ಗಂಟೆಯೊಳಗೆ ವಿಮಾನ ನಿಲ್ದಾಣದ ಒಳಗೆ ಸಾರ್ವಜನಿಕರು ಆಗಮಿಸಬೇಕಿದೆ. ಬಳಿಕ ಗೇಟ್ ಮುಚ್ಚಲಾಗುತ್ತದೆ.
ಹೀಗಾಗಿ ಮೊದಲೇ ಸಾರ್ವಜನಿಕರು ಏರ್ ಪೋರ್ಟ್ ಒಳಗೆ ಆಗಮಿಸಬೇಕಾಗಿದೆ ಎಂದು ಸಾರ್ವಜನಿಕರಿಗೆ ಬೇಗ ಬರುವಂತೆ ಸಂಸದ ಬಿ.ವೈ. ರಾಘವೇಂದ್ರ ಮನವಿ ಮಾಡಿಕೊಂಡಿದ್ದಾರೆ. ಈ ನಡುವೆ ಇಂದು ವಾಯು ಪಡೆಯ ವಿಮಾನ ಇಳಿದು ಸುರಕ್ಷತೆ ಬಗ್ಗೆ ಪರಿಶೀಲಿಸಿದೆ.ವಿಮಾನ ನಿಲ್ದಾಣದ ಭಧ್ರತಾ ಮತ್ತು ಇತರೆ ಸಿಬ್ಬಂದಿ ನೇಮಕ ಪ್ರಕ್ರಿಯೆ ಕೂಡ ನಡೆದಿದೆ.
ಏರ್ ಪೋರ್ಟ್ ಗೆ ಕುವೆಂಪು ಅವರ ಹೆಸರನ್ನು ನಾಮಕರಣ ಮಾಡಲು ತೀರ್ಮಾನಿಸಲಾಗಿದೆ. ರಾಜ್ಯ ಸರ್ಕಾರ ಕೇಂದ್ರಕ್ಕೆ ಈ ಹೆಸರು ಪ್ರಸ್ತಾವನೆಗೆ ಕಳಿಸಲಾಗಿದೆ. ಶಿವಮೊಗ್ಗ, ತಾಳಗುಪ್ಪ, ಸಾಗರ ರೈಲು ನಿಲ್ದಾಣಗಳನ್ನು ಅಪ್ ಗ್ರೇಡ್ ಮಾಡಲು ತೀರ್ಮಾನಿಸಲಾಗಿದೆ.
ಸೋಗಾನೆ ರೈತರಿಗೆ ಆದಷ್ಟು ಬೇಗ ಪರಿಹಾರ ನಿವೇಶನ ನೀಡಲಾಗುತ್ತದೆ. ವಿಮಾನ ನಿಲ್ದಾಣಕ್ಕೆ ಭೂಮಿ ನೀಡಿದವರಿಗೆ ನಿವೇಶನ ನೀಡಲು ಸರ್ಕಾರ ನಿರ್ಧರಿಸಿದೆ ಎಂದು ಬಿ.ವೈ. ರಾಘವೇಂದ್ರ ತಿಳಿಸಿದರು.
#Karnataka, #AviationVision, #Shivamogga, #Airport,