ಪಾಟ್ನಾ, ಸೆ .1- ಅಪರಾಧ ಹಿನ್ನಲೆಯ ಬಿಹಾರ ಕಾನೂನು ಸಚಿವ ಕೊನೆಗೂ ರಾಜಿನಾಮೆ ನೀಡಿದ್ದಾರೆ. ಕಳೆದ 2014ರ ಅಪಹರಣ ಪ್ರಕರಣದ ಆರೋಪಿಯಾಗಿದ್ದ ಆರ್‍ಜೆಡಿ ಶಾಸಕ ಕಾರ್ತಿಕ್ ಕುಮಾರ್‍ಅವರನ್ನು ಮಹಾಘಟಬಂಧನ್‍ಅಸ್ತಿತ್ವಕ್ಕೆ ಬಂದ ನಂತರ ಸಿಎಂ ನಿತೀಶ್ ಕುಮಾರ್ ಸರ್ಕಾರದಲ್ಲಿ ರಾಜ್ಯದ ಕಾನೂನು ಸಚಿವರಾಗಿದ್ದರು ,ಇದ್ದಕ್ಕೆ ಪ್ರತಿಪಕ್ಷ ಬಿಜೆಪಿ ಪ್ರತಿಭಟನೆ ನಡೆಸಿ ಟೀಕಾಪ್ರಹಾರ ನಡೆಸಿತ್ತು.
ಡಿಸಿಎಂ ತೇಜಸ್ವಿ ಯಾದವ್ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿದ್ದ ಆರ್‍ಜೆಡಿಯ ಮೇಲ್ಮನೆ ಸದಸ್ಯ ಕಾರ್ತಿಕ್ ಕುಮಾರ್ ಇದರಿಂದ ಮುಚುಗರಕ್ಕೆ ಈಡಾಗಿದ್ದರು ಮಹತ್ವದ ಬೆಳವಣಿಗೆಯಲ್ಲಿ ಬುಧವಾರ ರಾತ್ರಿ ಅವರ ಖಾತೆ ಬದಲಿಸಿ ಕಬ್ಬು- ಸಕ್ಕರೆ ಖಾತೆ ನೀಡಲಾಗಿತ್ತು ನಂತರ ಅವರು ರಾಜೀನಾಮೆ ನೀಡಿದರು ಎಂದು ಮೂಲಗಳು ತಿಳಿಸಿವೆ.
ಹೊಸ ಸರ್ಕಾರ ಬಂದ ದ ಒಂದೇ ತಿಂಗಳು ಮುಗಿಯುವ ವೇಳೆಗೆ ನಿತೀಶ್ ಮೊದಲ ವಿಕೆಟ್ ಪತನಗೊಂಡಿದೆ. ರಾಜೀನಾಮೆಯನ್ನು ಅಂಗೀಕರಿಸಿ ರಾಜ್ಯಪಾಲರಿಗೆ ರವಾನಿಸಲಾಗಿದೆ ಎಂದು ಮುಖ್ಯಮಂತ್ರಿ ಕಚೇರಿಯ ತಿಳಿಸಿದೆ.
ಕಂದಾಯ ಮತ್ತು ಭೂ ಸುಧಾರಣಾ ಸಚಿವ ಅಲೋಕ್ ಕುಮಾರ್ ಮೆಹ್ತಾ ಅವರಿಗೆ ಕಬ್ಬು ಖಾತೆ ಹೆಚ್ಚುವರಿ ಹೊಣೆ ನೀಡಲಾಗಿದೆ ಎಂದು ಅಕಾರಿಗಳು ತಿಳಿಸಿದ್ದಾರೆ.
ಕಳೆದ ತಿಂಗಳ ಆರಂಭದಲ್ಲಿ ಬಿಹಾರದಲ್ಲಿ ರಾಜಕೀಯ ಕ್ರಾಂತಿಯ ನಂತರ ಅಕಾರವನ್ನು ಕಳೆದುಕೊಂಡ ಕೇಸರಿ ಪಕ್ಷ, ಅಪಹರಣ ಪ್ರಕರಣದಲ್ಲಿ ಕಾರ್ತಿಕ್ ಕುಮಾರ್ ಸಂಪುಟ ಸೇರಿ ಕಾನೂನು ಖಾತೆ ನೀಡಿದ್ದಕ್ಕೆ ಟೀಕಾಪ್ರಹಾರ ನಡೆಸಿತ್ತು,ಇದು ದೇಶ ವ್ಯಾಪಿ ಚರ್ಚೆಯಾಗಿತ್ತು.