ನಕ್ಸಲ್ ಕಾರ್ಯಾಚರಣೆ ವೇಳೆ ನೆಲಬಾಂಬ್ ಸ್ಪೋಟಗೊಂಡು ಕರ್ನಾಟಕ ಯೋಧ ಹುತಾತ್ಮ

Karwar--01

ಕಾರವಾರ, ಜು.10- ಛತ್ತೀಸ್‍ಗಢದಲ್ಲಿ ನಕ್ಸಲ್ ಕಾರ್ಯಾಚರಣಾ ವೇಳೆ ನೆಲಬಾಂಬ್ ಸ್ಫೋಟಗೊಂಡು ಕರ್ನಾಟಕ ಮೂಲದ ಬಿಎಸ್‍ಎಫ್ ಯೋಧನೊಬ್ಬ ಅಸು ನೀಗಿದ್ದಾನೆ. ಉತ್ತರ ಕನ್ನಡ ಜಿಲ್ಲೆ ಕಾರವಾರ ಮೂಲದ ವಿಜಯಾನಂದ (28) ಹುತಾತ್ಮರಾದ ಯೋಧನಾಗಿದ್ದಾನೆ. ನಗರದ ಸುರೇಶ್ ನಾಯ್ಕ ಎಂಬುವರ ಪುತ್ರರಾದ ವಿಜಯಾನಂದ ಕಳೆದ 2014ರಲ್ಲಿ ಸೇನೆಗೆ ಸೇರಿದ್ದರು. ಛತ್ತೀಸ್‍ಗಢದಲ್ಲಿ ಅವರು ಸೇವೆ ಸಲ್ಲಿಸುತ್ತಿದ್ದರು. ನಿನ್ನೆ ಕಾರ್ಯಾಚರಣೆ ವೇಳೆ ನಕ್ಸಲರು ಹುದುಗಿಸಿಟ್ಟಿದ್ದ ನೆಲಬಾಂಬ್ ಸ್ಫೋಟಗೊಂಡು ವಿಜಯಾನಂದ ಸ್ಥಳದಲ್ಲೇ ಹುತಾತ್ಮರಾಗಿದ್ದಾರೆ ಎಂದು ಸೇನಾ ಮೂಲಗಳು ತಿಳಿಸಿವೆ.  ನಾಳೆ ಯೋಧನ ಮೃತದೇಹ ನಗರಕ್ಕೆ ಬರುವ ಸಾಧ್ಯತೆ ಇದ್ದು , ಮಗನ ಸಾವಿನ ಸುದ್ದಿ ಕೇಳಿ ಕುಟುಂಬದವರು ಹಾಗೂ ಸ್ಥಳೀಯರು ಕಂಬನಿ ಮಿಡಿದಿದ್ದಾರೆ.

Sri Raghav

Admin