ಶ್ರೀನಗರ,ಮಾ.12- ಜಮ್ಮು ಮತ್ತು ಕಾಶ್ಮೀರದ ಅನಂತನಾಗ್ ಜಿಲ್ಲೆಯಲ್ಲಿ ಲಷ್ಕರ್-ಎ-ತೊಯ್ಬಾ (ಎಲ್‍ಇಟಿ) ಅಡಗುತಾಣವನ್ನು ಪತ್ತೆ ಮಾಡಲಾಗಿದ್ದು, ಅಪಾರ ಪ್ರಮಾಣದ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ.
ದಕ್ಷಿಣ ಕಾಶ್ಮೀರ ಜಿಲ್ಲೆಯ ಬಿಜ್‍ಬೆಹರಾದಲ್ಲಿರುವ ರಾಖ್ ಮೊಮಿನ್ ದಂಗಿ ಪ್ರದೇಶದಲ್ಲಿ ಭಾನುವಾರ ರಾತ್ರಿ ಖಚಿತ ಮಾಹಿತಿ ಆಧಾರದ ಮೇಲೆ ಶೋಧ ಕಾರ್ಯಾಚರಣೆ ನಡೆಸಲಾಯಿತು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಶೋಧ ಕಾರ್ಯಾಚರಣೆಯಲ್ಲಿ ಅಡಗುತಾಣವನ್ನು ಪತ್ತೆಹಚ್ಚಲಾಯಿತು. ಜೊತೆಗೆ ಐದು ಐಇಡಿಗಳು, ಪ್ರೋಗ್ರಾಮ್ಡ್ ಟೈಮರ್ ಸಾಧನಗಳು (ಪಿಟಿಡಿಗಳು) ಮತ್ತು ರೇಡಿಯೊ ನಿಯಂತ್ರಿತ ಸುಧಾರಿತ ಸ್ಪೋಟಕ ಸಾಧನಗಳು, ಆರು ಡಿಟೋನೇಟರ್‍ಗಳು,
ಆಸ್ಕರ್ ಅಂಗಳದಲ್ಲಿ ಭಾರತೀಯ ಚಿತ್ರಗಳ ಸದ್ದು, ಇಲ್ಲಿದೆ ಪ್ರಶಸ್ತಿಗಳ ಕಂಪ್ಲೀಟ್ ಡೀಟೇಲ್ಸ್
ಮೂರು ಪಿಸ್ತೂಲ್‍ಗಳು, ಐದು ಪಿಸ್ತೂಲ್ ಮ್ಯಾಗಜೀನ್‍ಗಳು, 9 ಒಂಬತ್ತು ಎಂಎಂ 124 ಸುತ್ತು ಗುಂಡುಗಳು, ನಾಲ್ಕು ರಿಮೋಟ್ ಕಂಟ್ರೋಲ್‍ಗಳು, 13 ಬ್ಯಾಟರಿಗಳು ಸೇರಿ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳು, ಮದ್ದುಗುಂಡುಗಳು ಮತ್ತು ಇತರ ಯುದ್ಧ ಸಲಕರಣೆಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ. ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ಪ್ರಗತಿಯಲ್ಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Kashmir, police, busts, LeT, militant, hideout, Anantnag,