ಕಾಶ್ಮೀರಿ ಫೈಲ್ ಚಿತ್ರದ ಟೀಕೆಗೆ ವ್ಯಾಪಕ ಖಂಡನೆ

Social Share

ಮುಂಬೈ,ನ.29- ಕಾಶ್ಮೀರಿ ಫೈಲ್ಸ್ ಚಿತ್ರ ಕುರಿತು ಪ್ರತಿಷ್ಠಿತ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ತೀರ್ಪುಗಾರರ ಮುಖ್ಯಸ್ಥ ನಡ್ವ ಲಾಪಿಡ್ ನೀಡಿದ ಹೇಳಿಕೆ ಭಾರೀ ಚರ್ಚೆಗೆ ಗ್ರಾಸವಾಗಿದೆ.

53ನೇ ಚಲನಚಿತ್ರೋತ್ಸವದ ಸಮಾರೋಪ ಸಮಾರಂಭ ನಿನ್ನೆ ನಡೆದಿತ್ತು. ಅದರಲ್ಲಿ ಮಾತನಾಡಿದ ನಡ್ವಾ, ಕಾಶ್ಮೀರಿ ಫೈಲ್ ಚಿತ್ರ ಅಪಪ್ರಚಾರ ಮತ್ತು ಅಸಹ್ಯವಾಗಿದೆ. ಇಂತಹ ಚಿತ್ರ ಪ್ರತಿಷ್ಠಿತ ಚಲನಚಿತ್ರೋತ್ಸವದ ಸ್ಪರ್ಧಾ ವಿಭಾಗದಲ್ಲಿ ಕಾಣಿಸಿಕೊಂಡಿರುವುದು ನನಗೆ ಆಘಾತ ತರಿಸಿದೆ ಎಂದು ಹೇಳಿಕೆ ನೀಡಿದ್ದರು.

ನಡ್ವಾ ಇಸ್ರೇಲಿನ ಚಲನಚಿತ್ರ ಕ್ಷೇತ್ರದ ಪ್ರತಿಷ್ಠಿತ ವ್ಯಕ್ತಿಯಾಗಿದ್ದಾರೆ. ಚಿತ್ರೋತ್ಸವಕ್ಕೆ ಅವರನ್ನು ತೀರ್ಪುಗಾರರ ತಂಡದ ಮುಖ್ಯಸ್ಥರನ್ನಾಗಿ ನೇಮಿಸಲಾಗಿತ್ತು. ಆದರೆ ಸಮಾರೋಪ ಸಮಾರಂಭದಲ್ಲಿ ಅವರು ಕಾಶ್ಮೀರಿ ಫೈಲ್ಸ್ ಕುರಿತ ಹೇಳಿಕೆ ಸಮಾರಂಭದ ಆಯೋಜಕರಿಗೆ ದಿಗ್ಬ್ರಮೆ ಉಂಟು ಮಾಡಿದೆ. ಅನಿರೀಕ್ಷಿತವಾದ ಈ ಹೇಳಿಕೆಗಳು ಪರ-ವಿರೋಧಕ್ಕೆ ಕಾರಣವಾಗಿದೆ.

ಸೈಲೆಂಟ್ ಸುನಿಲ್ ಬಿಜೆಪಿ ಸೇರ್ಪಡೆಗೆ ಅವಕಾಶವಿಲ್ಲ: ಕಟೀಲ್

ಚಿತ್ರದ ಪ್ರಮುಖ ಭೂಮಿಕೆಯಲ್ಲಿ ನಟಿಸಿರುವ ಅನುಪಮ್ ಖೇರ್, ನಡ್ವಾ ಅವರ ಹೇಳಿಕೆಯನ್ನು ನಾಚಿಕೆಗೇಡು ಎಂದು ಟೀಕಿಸಿದ್ದಾರೆ. ಕಾಶ್ಮೀರ ಪಂಡಿತರ ಮಾರಣಹೋಮ ನಡೆದಿದೆ. ನಡ್ವಾ ಅವರ ಹೇಳಿಕೆಗಳು ಅಲ್ಲಿ ಜೀವ ಕಳೆದುಕೊಂಡವರಿಗೆ ಅಗೌರವ ಉಂಟು ಮಾಡಿದೆ.

ಈ ಹೇಳಿಕೆ ಪೂರ್ವ ನಿಯೋಜಿತವಾಗಿದೆ. ಇದು ಟೂಲ್‍ಕಿಟ್ ಗ್ಯಾಂಗ್ ಸಕ್ರಿಯವಾಗಿರುವುದರ ಸಂಕೇತ. ಧರ್ಮ ಸಂಘರ್ಷದಲ್ಲಿ ಸಂಕಷ್ಟಕ್ಕೊಳಗಾದ ಜುಹು ಸಮುದಾಯದಿಂದ ಬಂದ ನಡ್ವಾ ಕಾಶ್ಮೀರಿ ಪಂಡಿತರ ಸಮಸ್ಯೆ ಕುರಿತ ಚಿತ್ರದ ಬಗ್ಗೆ ಟೀಕೆ ಮಾಡಿರುವುದು ಅಕ್ಷಮ್ಯ.

ಚಲನಚಿತ್ರೋತ್ಸವ ವೇದಿಕೆ ಸಂಕಷ್ಟಕ್ಕೊಳಗಾದ ಸಾವಿರಾರು ಜನರ ಆಶೋತ್ತರಗಳಿಗೆ ಸ್ಪಂದಿಸಬೇಕಿತ್ತು. ಆದರೆ ಅದಾಗಲಿಲ್ಲ. ಯಾರು ಎಷ್ಟು ಎತ್ತರ ಎನ್ನುವುದು ಮುಖ್ಯವಲ್ಲ. ಸತ್ಯದ ಮುಂದೆ ಎಲ್ಲರೂ ಚಿಕ್ಕವರೇ ಎಂದು ಹೇಳಿದ್ದಾರೆ.

ಚಿತ್ರದ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ , ಸತ್ಯ ಯಾವಗಲೂ ಅಪಾಯಕಾರಿ ಸಂಗತಿ. ಸೃಜನಶೀಲ ಪ್ರಜ್ಞಾವಂತಿಕೆಯಲ್ಲಿ ಜನರನ್ನು ಸುಳ್ಳಗಾರರನ್ನಾಗಿ ಮಾಡಬಹುದು ಎಂದು ಟ್ವೀಟ್ ಮಾಡಿದ್ದಾರೆ.
ಮತ್ತೊಬ್ಬ ನಟ ದರ್ಶನ್‍ಕುಮಾರ್ ಮತ್ತು ಬಿಜೆಪಿ ಯುವ ಮೋರ್ಚಾ ಉಪಾಧ್ಯಕ್ಷ ಅಭಿನವ್ ಪ್ರಕಾಶ್ ಮತ್ತಿತರರು ನಡ್ವಾ ಅವರ ಹೇಳಿಕೆಗಳನ್ನು ಖಂಡಿಸಿದ್ದಾರೆ.

ಗುಜರಾತ್‍ನಲ್ಲಿ ಕಾಂಗ್ರೆಸ್ ಮರಳಿ ಅಧಿಕಾರಕ್ಕೆ: ಖರ್ಗೆ ವಿಶ್ವಾಸ

ಇಸ್ರೇಲ್‍ನ ಭಾರತೀಯ ರಾಯಭಾರಿ ನೌರ್‍ಗಿಲೋನ್ ಅವರು ಸರಣಿ ಟ್ವೀಟ್‍ಗಳ ಮೂಲಕ ನಡ್ವಾರ ಹೇಳಿಕೆಗಳನ್ನು ಖಂಡಿಸಿದ್ದಾರೆ. ನೀವು ಈ ರೀತಿ ಮಾತನಾಡಿರುವುದಕ್ಕೆ ನಾಚಿಕೆಪಟ್ಟುಕೊಳ್ಳಬೇಕು. ನಿಮ್ಮಂಥವರನ್ನು ಅತಿಥಿಯನ್ನಾಗಿ ಕರೆದಿರುವುದು ಭಾರತೀಯ ಸಂಸ್ಕøತಿ. ಆದರೆ ಅದಕ್ಕೆ ಪ್ರತಿಯಾಗಿ ಕೆಟ್ಟ ಟೀಕೆ ಮಾಡಿದ್ದೀರ. ನಿಮ್ಮ ಮೇಲೆ ಭಾರತೀಯರಿಟ್ಟ ನಂಬಿಕೆ ಮತ್ತು ಗೌರವವನ್ನು ಕಳೆದುಕೊಂಡಿದ್ದೀರ. ಗೌರವಾಧರಗಳ ಆತಿಥ್ಯವನ್ನು ಅಗೌರವಿಸಿದ್ದೀರ ಎಂದು ವಾಗ್ದಾಳಿ ನಡೆಸಿದ್ದಾರೆ.

ನಡ್ವಾ ಅವರ ಹೇಳಿಕೆ ಸಂಪೂರ್ಣ ವೈಯಕ್ತಿಕವಾಗಿದ್ದು, ಇಸ್ರೇಲಿಗಳು ಇದನ್ನು ಒಪ್ಪುವುದಿಲ್ಲ. ಉತ್ತಮವಾದ ಚಿತ್ರದ ಬಗ್ಗೆ ಭಾರತೀಯರ ನಂಬಿಕೆಗಳು ದೃಢವಾಗಿದೆ. ಭಾವನಾತ್ಮಕ ವಿಚಾರಗಳ ಬಗ್ಗೆ ಸೂಕ್ಷ್ಮವಾಗಿ ಪ್ರತಿಕ್ರಿಯಿಸಬೇಕಿತ್ತು ಎಂದು ಹೇಳುವ ಜೊತೆಗೆ ಕಟು ಶಬ್ದಗಳಲ್ಲಿ ತರಾಟೆಗೆ ತೆಗೆದುಕೊಂಡಿದ್ದಾರೆ.

ಆಫ್ತಾಬ್ ಪ್ರಕರಣ ಲವ್ ಜಿಹಾದ್ ಅಲ್ಲ: ಓವೈಸಿ

ನಡ್ವಾ ಅವರು ಹೇಳಿಕೆ ನೀಡುವಾಗ ಕೇಂದ್ರ ಸಚಿವ ಅನುರಾಗ್ ಸಿಂಗ್ ಠಾಕೂರ್ ವೇದಿಕೆಯಲ್ಲಿ ಜೊತೆಯಲ್ಲೇ ನಿಂತಿದ್ದರು. ಆದರೂ ಅವರು ಯಾವುದೇ ಪ್ರತಿರೋಧ ವ್ಯಕ್ತಪಡಿಸದೆ ಇರುವುದು ಭಾರತೀಯರ ಸೌಜನ್ಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

2022ರಲ್ಲಿ ಬಿಡುಗಡೆಯಾದ ಹಿಂದಿ ಚಲನಚಿತ್ರ ಕಾಶ್ಮೀರಿ ಫೈಲ್ಸ್ ಭಾರೀ ಸಂಚಲನ ಮೂಡಿಸಿತ್ತು. ಬಿಜೆಪಿ ಸರ್ಕಾರಗಳು ತೆರಿಗೆ ವಿನಾಯ್ತಿ ನೀಡಿ ಚಿತ್ರಕ್ಕೆ ಬೆಂಬಲ ವ್ಯಕ್ತಪಡಿಸಿದ್ದರು. 1990ರಲ್ಲಿ ಕಾಶ್ಮೀರಿ ಪಂಡಿತರ ಕುಟುಂಬಗಳ ಮೇಲೆ ನಡೆದ ದೌರ್ಜನ್ಯದ ಕಥಾ ಹಂದರವನ್ನು ಈ ಚಿತ್ರ ಒಳಗೊಂಡಿತ್ತು.

Kashmiri File, Anupam Kher, slams, IFFI, jury, Nadav Lapid,

Articles You Might Like

Share This Article