ಕಾಶ್ಮೀರಿದಲ್ಲಿ ಮತ್ತೊಬ್ಬ ಪಂಡಿತನ ಹತ್ಯೆ

Social Share

ಜಮ್ಮು.ಅ.15-ದಕ್ಷಿಣ ಕಾಶ್ಮೀರದ ಶೋಪಿಯಾನ್ ಜಿಲ್ಲಾಯ ಚೌಧರಿ ಗುಂಡ್ ಪ್ರದೇಶದಲ್ಲಿ ಇಂದು ಬೆಳಿಗ್ಗೆ ಭಯೋತ್ಪಾದಕರು ಕಾಶ್ಮೀರಿ ಪಂಡಿತನೊಬ್ಬನನ್ನು ಗುಂಡಿಕ್ಕಿ ಕೊಂದಿದ್ದಾರೆ.

ನಿವಾಸದ ಬಳಿ ಬಂದ ಭಯೋತ್ಪಾದಕರು ರುಂಡು ಹಾರಿಸಿದ್ದು ಪುರನ್ ಕ್ರಿಶನ್ ಭಟ್ ಎಂಬುವವರು ತೀವ್ರವಾಗಿ ಗಾಯಗೊಂಡು ಶೋಪಿಯಾನ್ ಆಸ್ಪತ್ರೆಗೆ ಸ್ಥಳಾಂತರಿಸಿದ ನಂತರ ಚಿಕಿತ್ಸೆ ಪಲಿಸದೆ ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದರು ಎಂದು ಪೊಲೀಸರು ತಿಳಿಸಿದ್ದಾರೆ.

ಘಟನಾ ಪ್ರದೇಶವನ್ನು ಸುತ್ತುವರಿಯಲಾಗಿದೆ ಮತ್ತು ಅಪರಾಪೊಯ ಭೇಟೆಯನ್ನು ಪ್ರಾರಂಭಿಸಲಾಗಿದೆ ಎಂದು ಸೇನಾ ಪಡೆ ಹೇಳಿದೆ. ಭಟ್ ಅವರಿಗೆ ಇಬ್ಬರು ಮಕ್ಕಳಿದ್ದಾರೆ ಮಗಳು 7 ನೇ ತರಗತಿಯಲ್ಲಿ ಓದುತ್ತಿದ್ದು, ಪುತ್ರ5 ನೇ ತರಗತಿಯಲ್ಲಿ ಓದುತ್ತಿದ್ದಾನೆ ಎಂದು ಸಂಬಂಧಿಯೊಬ್ಬರು ಹೇಳಿದರು.

ಮಕ್ಕಲು ಮನೆಯಿಂದ ಹೊರಬರುತ್ತಲ್ಲ. ನಾವು ತುಂಬಾ ಹೆದರುತ್ತೇವೆ ಎಂದು ಅವರು ತಿಳಿಸಿದರು ಶೋಪಿಯಾನ್ ಜಿಲ್ಲೆಯಲ್ಲೇ ಸೇಬಿನ ತೋಟದಲ್ಲಿ ಕಾಶ್ಮೀರಿ ಪಂಡಿತನೊಬ್ಬ ಭಯೋತ್ಪಾದಕರ ಗುಂಡಿಗೆ ಬಲಿಯಾದ ಕೆಲವೇ ತಿಂಗಳ ನಂತರ ಇದು ಸಂಭವಿಸುತ್ತದೆ. ಗುಂಡಿನ ದಾಳಿಯಲ್ಲಿ ಆತನ ಸಹೋದರನೂ ಗಾಯಗೊಂಡಿದ್ದಾನೆ.

Articles You Might Like

Share This Article