ನವದೆಹಲಿ.ಅ.12- ಕ್ಯಾನ್ಸರ್‍ನಿಂದ ಬಳಲುತ್ತಿದ್ದ ಕಾಶ್ಮೀರಿ ಪ್ರತ್ಯೇಕತಾವಾದಿ ನಾಯಕ, ಅಲ್ತಾಫ್ ಅಹ್ಮದ್ ಶಾ (66) ಇಂದು ಮುಂಜಾನೆ ಇಲ್ಲಿನ ಏಮ್ಸ್‍ನಲ್ಲಿ ನಿಧನರಾದರು. ಭಯೋತ್ಪಾದಕರಿಗೆ ಆರ್ಥಿಕ ನೆರವಿನ ಆರೋಪದ ಮೇಲೆ ಶ್ರೀನಗರದ ಸೌರಾ ಪ್ರದೇಶದ ನಿವಾಸಿಯಾದ ಶಾ ಹಾಗು ಇತರ ಆರು ಮಂದಿಯೊಂದಿಗೆ ಕಳೆದ 2017ರ ಜುಲೈ 25, ರಂದು ರಾಷ್ಟ್ರೀಯ ತನಿಖಾ ಸಂಸ್ಥೆ ಬಂಧಿಸಿತ್ತು ತಿಹಾರ್ ಜೈಲಿನಲ್ಲಿದ್ದ ಇತನನ್ನು ದೆಹಲಿ ಹೈಕೋರ್ಟ್ ಆದೇಶದ ಮೇರೆಗೆ ಏಮ್ಸ್ (ಎನ್‍ಐಎ) ದಾಖಲಿಸಲಾಗಿತ್ತು.
ಹುರಿಯತ್ ನಾಯಕ ಸೈಯದ್ ಅಲಿ ಶಾ ಗಿಲಾನಿ ಅವರ ಅಳಿಯ ಅಲ್ತಾಫ್ ಅಹ್ಮದ್ ಶಾಗೆ ಕಳೆದ ಅಕ್ಟೋಬರ್ 5 ರಂದು, ಅವರಿಗೆ ಕ್ಯಾನ್ಸರ್ ಇರುವುದು ಪತ್ತೆಯಾದ ನಂತರ ಸೂಕ್ತ ಚಿಕಿತ್ಸೆಗಾಗಿ ದೆಹಲಿಯ ಏಮ್ಸ್‍ಗೆ ಸ್ಥಳಾಂತರಿಸಲು ನ್ಯಾಯಾಲಯಆದೇಶಿಸಿತ್ತು