ಖ್ಯಾತ ಕಥಕ್ ನೃತ್ಯಗಾರ ಬಿರ್ಜು ಮಹಾರಾಜ್ ನಿಧನ

Social Share

ನವದೆಹಲಿ, ಜ. 17 – ಖ್ಯಾತ ಕಥಕ್ ನೃತ್ಯಗಾರ ಬಿರ್ಜು ಮಹಾರಾಜ್ ಇಂದು ಮುಂಜಾನೆ ತಮ್ಮ ಮನೆಯಲ್ಲಿ ನಿಧನರಾಗಿದ್ದಾರೆ. ಅವರಿಗೆ 83 ವರ್ಷ ವಯಸ್ಸಾಗಿತ್ತು ಮುಂದಿನ ತಿಂಗಳು ಹುಟ್ಟುಹಬ್ಬವಿತ್ತು ರಾತ್ರಿ ಊಟದ ನಂತರ ಅವರು ಶಿಶ್ಯ ವೃಂದದ ಜೊತೆ ಅಂತಕ್ಷರಿ ಆಡುತ್ತಿದ್ದಾಗ ಅವರು ಇದ್ದಕ್ಕಿದ್ದಂತೆ ಅನಾರೋಗ್ಯಕ್ಕೆ ಒಳಗಾದರು ಎಂದು ಬಿರ್ಜು ಅವರ ಮೊಮ್ಮಗಳು ರಾಗಿಣಿ ಮಹಾರಾಜ್ ತಿಳಿಸಿದ್ದಾರೆ.
ಮೂತ್ರಪಿಂಡದ ಕಾಯಿಲೆಯಿಂದ ಬಳಲುತ್ತಿದ್ದರು ಮತ್ತು ಡಯಾಲಿಸಿಸ್ ಚಿಕಿತ್ಸೆಯಲ್ಲಿದ್ದರು. ಅವರು ಬಹುಶಃ ಹೃದಯ ಸ್ತಂಭನದಿಂದ ಸಾವನ್ನಪ್ಪಿದ್ದಾರೆ ಎಂದು ಅವರ ಕುಟುಂಬ ಮೂಲಗಳು ತಿಳಿಸಿವೆ.  ಏಕಾ ಏಕಿ ಅಸ್ವಸ್ಥರಾದ ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲು ತೆರಳಿದವು ಆದರೆ ನಾವು ಅವನನ್ನು ಉಳಿಸಲು ಸಾಧ್ಯವಾಗಲಿಲ್ಲ ಎಂದು ರಾಗಿಣಿ ಮಹಾರಾಜ್ ಹೇಳಿದರು

Articles You Might Like

Share This Article