ನ್ಯೂಯಾರ್ಕ್ ಗವರ್ನರ್ ಆಗಿ ಕ್ಯಾಥಿ ಹೊಚುಲ್ ಅಧಿಕಾರ ಸ್ವೀಕಾರ

Social Share

ಅಲ್ಬನಿ , ಜ. 2 – ಅಮೆರಿಕದ ಪ್ರತಿಷ್ಠಿತ ರಾಜ್ಯ ನ್ಯೂಯಾರ್ಕ್‍ನ ಗವರ್ನರ್ ಆಗಿ ಕ್ಯಾಥಿ ಹೊಚುಲ್ ಅಧಿಕಾರ ಸ್ವೀಕರಿಸಿದ್ದು ,ಈ ಸ್ಥಾನಕ್ಕೆ ಆಯ್ಕೆಯಾದ ಮೊದಲ ಮಹಿಳೆ ಎಂಬ ಇತಿಹಾಸ ನಿರ್ಮಿಸಿದ್ದಾರೆ.

ಡೆಮೋಕ್ರಾಟ್ ಪಕ್ಷದ ನಾಯಕಿ ನ್ಯೂಯಾರ್ಕ್‍ನ 57 ನೇ ಗವರ್ನರ್ ಆಗಿ ಪ್ರಮಾಣ ವಚನ ಸ್ವೀಕರಿಸಿದ ನಂತರ ಮಾತನಾಡಿ ಸಾರ್ವಜನಿಕ ಸುರಕ್ಷತೆಯನ್ನು ಹೆಚ್ಚಿಸುವುದು ಮತ್ತು ರಾಜ್ಯದ ಪ್ರತಿಷ್ಠೆ ಹೆಚ್ಚಿಸುವುದು ಮುದಲ ಗುರಿಯಾಗಿದೆ ಎಂದು ಹೇಳಿದರು.

ಬೆಲೆ ಏರಿಕೆ ತಗ್ಗಿಸಿ ಜೀವನ ಮಟ್ಟವನ್ನು ಹೆಚ್ಚಿಸಲು ಎಲ್ಲರು ಕೈಜೋಡಿಸಬೇಕು ಎಂದರು ಇದೇ ವೇಳೆ ಲೆಫ್ಟಿನೆಂಟ್ ಗವರ್ನರ್‍ರಾಗಿ ಆಂಟೋನಿಯೊ ಡೆಲ್ಗಾಡೊ ಕೂಡ ಪ್ರಮಾಣ ವಚನ ಸ್ವೀಕರಿಸಿದರು.

ರಿಷಭ್‍ಪಂತ್ ಜೀವ ರಕ್ಷಿಸಿದ ಚಾಲಕ ಸುಶೀಲ್‍ಮಾನ್‍ಗೆ ಸನ್ಮಾನ

ಬಫಲೋ ಮೂಲದ 64 ವರ್ಷದ ಹೋಚುಲï ಅವರು ನವೆಂಬರ್‍ನಲ್ಲಿ ನಡೆದ ಚುನಾವಣೆಯಲ್ಲಿ ಡೊನಾಲ್ಡ ಟ್ರಂಪ್ ಅವರ ಮಿತ್ರ ರಿಪಬ್ಲಿಕನ್ ಕಾಂಗ್ರೆಸ್‍ನ ಲೀ ಜೆಲ್ಡಿನ್ ಅವರನ್ನು ಸೋಲಿಸಿದರು.

ಕಳೆದ 2021 ಆಗಸ್ಟ್‍ನಲ್ಲಿ ಲೆಫ್ಟಿನೆಂಟ್ ಗವರ್ನರ್ ಆಗಿ ಸೇವೆ ಸಲ್ಲಿಸಿದರು ಆದರೆ ಲೈಂಗಿಕ ಕಿರುಕುಳದ ಆರೋಪಗಳ ನಡುವೆ ಅವರು ರಾಜೀನಾಮೆ ನೀಡಿದರು.

Kathy Hochul, sworn, New York, governor,

Articles You Might Like

Share This Article