ಜಂತರ್‌ಮಂತರ್‌ನಲ್ಲಿ ಕೆ.ಕವಿತಾ ಉಪವಾಸ ಸತ್ಯಾಗ್ರಹ

Social Share

ನವದೆಹಲಿ,ಮಾ.10-ಸಂಸತ್ತಿನಲ್ಲಿ ಮಹಿಳಾ ಮೀಸಲಾತಿ ಮಸೂದೆಯನ್ನು ಮಂಡಿಸುವಂತೆ ಒತ್ತಾಯಿಸಿ ಭಾರತ್ ರಾಷ್ಟ್ರ ಸಮಿತಿ ಪಕ್ಷದ ಹಿರಿಯ ನಾಯಕಿ ಕೆ.ಕವಿತಾ ಅವರು ಜಂತರ್‌ಮಂತರ್‌ನಲ್ಲಿ ಇಂದು ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ.

ಕಾಂಗ್ರೆಸ್, ತೃಣಮೂಲ ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷ ಸೇರಿದಂತೆ ಹಲವು ವಿರೋಧ ಪಕ್ಷಗಳ ನಾಯಕರು ರಾಷ್ಟ್ರ ರಾಜಧಾನಿಯ ಜಂತರ್ ಮಂತರ್‍ನಲ್ಲಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಭಾಗವಹಿಸುವ ನಿರೀಕ್ಷೆಯಿದೆ.
ದೆಹಲಿ ಮದ್ಯ ನೀತಿ ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು ಅವರನ್ನು ವಿಚಾರಣೆಗೆ ಒಳಪಡಿಸಿದ ಬೆನ್ನಲ್ಲೆ ಅವರು ಪ್ರತಿಭಟನೆಯ ಹಾದಿ ಹಿಡಿದಿರುವುದು ಕುತೂಹಲ ಕೆರಳಿಸಿದೆ.

ಈದ್ಗಾ ಮೈದಾನದಲ್ಲಿ ಕಾಮಣ್ಣ-ರತಿ ಪ್ರತಿಷ್ಠಾಪನೆಗೆ ಪಟ್ಟು : ಹುಬ್ಬಳ್ಳಿ ಉದ್ವಿಗ್ನ

ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ ರಾವ್ ಅವರ ಪುತ್ರಿಯೂ ಆಗಿರುವ ಕವಿತಾ ನಿನ್ನೆ ತಮ್ಮ ಪ್ರತಿಭಟನೆಗೆ 18 ಪಕ್ಷಗಳು ಬೆಂಬಲ ನೀಡಿವೆ ಎಂದು ಘೋಷಿಸಿಕೊಂಡಿದ್ದರು.

ವೃದ್ಧೆ ಕಿವಿ ಹರಿದು ಓಲೆ ದರೋಡೆ ಮಾಡಿದ್ದ ಖದೀಮನ ಬಂಧನ

ಮಹಿಳಾ ಮೀಸಲಾತಿ ಮಸೂದೆಗೆ ಸಂಬಂಸಿದಂತೆ ದೆಹಲಿಯಲ್ಲಿ ಉಪವಾಸ ಸತ್ಯಾಗ್ರಹದ ಕುರಿತು ಮಾರ್ಚ್ 2 ರಂದು ನಾವು ಪೋಸ್ಟರ್ ಅನ್ನು ಬಿಡುಗಡೆ ಮಾಡಿದ್ದೇವೆ. ಮಾರ್ಚ್ 9 ರಂದು ಇಡಿ ನನ್ನನ್ನು ಕರೆದಿದೆ. ನಾನು ಮಾರ್ಚ್ 16 ಕ್ಕೆ ವಿನಂತಿಸಿದೆ, ಆದರೆ ಅವರು ಯಾವ ತರಾತುರಿಯಲ್ಲಿದ್ದಾರೆಂದು ತಿಳಿದಿಲ್ಲ ಹೀಗಾಗಿ ನಾನು ವಿಚಾರಣೆ ಪೂರ್ಣಗೊಳಿಸಿದ ನಂತರ ಪ್ರತಿಭಟನೆ ನಡೆಸುತ್ತಿದ್ದೇನೆ ಎಂದು ಅವರು ಹೇಳಿದ್ದಾರೆ.

Kavitha, strike, Women’, Reservation Bill, Jantar Mantar,

Articles You Might Like

Share This Article