ದಂಗೆಯಿಂದ ಹೊತ್ತಿ ಉರಿಡಿದ್ದ ಕಜಕಿಸ್ತಾನ ಸಹಜಸ್ಥಿತಿಯತ್ತ

Social Share

ಮಾಸ್ಕೋ,ಜ.7- ಇತ್ತೀಚಿನ ದಿನಗಳಲ್ಲಿ ಅಭೂತಪೂರ್ವ ದಂಗೆಯಿಂದ ಹೊತ್ತಿ ಉರಿದ ಕಜಕಿಸ್ತಾನ್ ದಲ್ಲಿ ಸಾಂವಿಧಾನಿಕ ಸುವ್ಯವಸ್ಥೆಯನ್ನು ಮರುಸ್ಥಾಪಿಸಲಾಗಿದೆ ಎಂದು ಆ ರಾಷ್ಟ್ರದ ಅಧ್ಯಕ್ಷರು ಹೇಳಿದ್ದಾರೆ. ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆ ಆರಂಭವಾಗಿದೆ. ಕಾನೂನು ಜಾರಿ ಸಂಸ್ಥೆಗಳು ಶ್ರಮವಹಿಸಿ ಕೆಲಸ ಮಾಡುತ್ತಿವೆ.
ದೇಶದ ಎಲ್ಲಾ ಭಾಗಗಳಲ್ಲಿ ಸಂವಿಧಾನಾತ್ಮಕ ಸುವ್ಯವಸ್ಥೆಯನ್ನು ಪುನರ್ ಸ್ಥಾಪಿಸಲಾಗಿದೆ. ಸ್ಥಳೀಯ ಪ್ರಾಧಿಕಾರಗಳು ಸನ್ನಿವೇಶವನ್ನು ನಿಯಂತ್ರಣಕ್ಕೆ ತೆಗೆದುಕೊಂಡಿದೆ ಎಂದು ಅಧ್ಯಕ್ಷ ಕಾಸಿಂ ಜೋಮಾರ್ಟ್ ಟೋಕಯೆವ್ ಅವರು ಹೇಳಿರುವುದಾಗಿ ಅವರ ವಕ್ತಾರರು ಇಂದು ತಿಳಿಸಿದ್ದಾರೆ.
ಹೀಗಿದ್ದರೂ ಭಯೋತ್ಪಾದಕರು ಈಗಲೂ ಶಾಸ್ತ್ರಾಸ್ತ್ರಗಳನ್ನು ಬಳಸುತ್ತಿದ್ದು, ಸಾರ್ವಜನಿಕ ಆಸ್ತಿಪಾಸ್ತಿಯನ್ನು ಹಾಳುಗೆಡುಹುತ್ತಿದ್ದಾರೆ. ಆದ್ದರಿಂದ ಭಯೋತ್ಪಾದನಾ ನಿಗ್ರಹ ಕ್ರಮಗಳ ಅನಿವಾರ್ಯತೆ ಇದೆ ಎಂದು ಕಾಸಿಂ ನುಡಿದಿದ್ದಾರೆ.

Articles You Might Like

Share This Article