ಮತ್ತೆ ಚರ್ಚೆಯ ಕೇಂದ್ರ ಬಿಂದುವಾದ ಜಮೀರ್

Social Share

ಬೆಂಗಳೂರು,ಜ.21- ವಿವಾದಗಳಿಗೆ ಜಮೀರ್ ಅಹಮದ್ ಆಪ್ತರೋ ಅಥವಾ ಜಮೀರ್ ಅಹಮದ್‍ಖಾನ್‍ಗೆ ವಿವಾದಗಳು ಇಷ್ಟವೋ ಎಂಬ ಗೊಂದಲಗಳ ನಡುವೆ ಚುನಾವಣೆ ಕಾಲದಲ್ಲಿ ಪಕ್ಷಕ್ಕೆ ಮತ್ತೊಂದು ಮುಜುಗರದ ಸಂಗತಿಗೆ ಕಾರಣರಾಗಿದ್ದಾರೆ.

ಜೆಡಿಎಸ್‍ನಿಂದ ಕಾಂಗ್ರೆಸ್‍ಗೆ ವಲಸೆ ಬಂದಾಗಿನಿಂದಲೂ ಒಂದಲ್ಲ ಒಂದು ವಿವಾದಗಳ ಮೂಲಕ ಕಾಂಗ್ರೆಸ್ ವರ್ಚಸ್ಸಿಗೆ ಜಮೀರ್ ಧಕ್ಕೆಯುಂಟು ಮಾಡುತ್ತಲೇ ಇದ್ದಾರೆ. ಹೊಸದಾಗಿ ಕೆಸಿಆರ್ ಫಂಡಿಂಗ್ ವಿವಾದವಂತೂ ಭಾರೀ ಚರ್ಚೆಗೆ ಗ್ರಾಸವಾಗಿದೆ. ತೆಲಂಗಾಣದ ಮುಖ್ಯಮಂತ್ರಿ ಕೆ.ಸಿ.ಚಂದ್ರಶೇಖರ್‍ರಾವ್ ಟಿಆರ್‍ಎಸ್ ಪಕ್ಷವನ್ನು ಇತ್ತೀಚೆಗೆ ಬಿಆರ್‍ಎಸ್ ಆಗಿ ಪರಿವರ್ತಿಸಿ ರಾಷ್ಟ್ರ ರಾಜಕಾರಣಕ್ಕೆ ಕಾಲಿಟ್ಟಿದ್ದಾರೆ.

ಬಿಜೆಪಿಗೆ ಪರ್ಯಾಯವಾಗಿ ರಾಜಕೀಯ ಶಕ್ತಿ ರೂಪಿಸಲು ಎಲ್ಲಾ ರಾಜ್ಯಗಳಲ್ಲಿ ಪ್ರಬಲವಾಗಿರುವ ಪ್ರಾದೇಶಿಕ ಪಕ್ಷಗಳನ್ನು ಒಗ್ಗೂಡಿಸುವ ಯತ್ನ ನಡೆಯುತ್ತಿದ್ದಾರೆ. ಅದರ ಭಾಗವಾಗಿ ಮೊನ್ನೆ ಖಮ್ಮಂ ಜಲ್ಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ದೆಹಲಿಯ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್, ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್, ಕೇರಳದ ಮುಖ್ಯಮಂತ್ರಿ ಪಿಣರಾಜಿ ವಿಜಯನ್, ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್, ಸಿಪಿಐ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಡಿ.ರಾಜಾ ಸೇರಿ ಹಲವು ನಾಯಕರು ಭಾಗವಹಿಸಿದ್ದರು.

ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕಾರ್ಯಕ್ರಮದಿಂದ ದೂರ ಉಳಿದಿದ್ದರು. ಇದಕ್ಕೂ ಮೊದಲು ಕೆಸಿಆರ್ ತಮಿಳುನಾಡಿನ ಸ್ಟಾಲೀನ್ ಜೊತೆಯೂ ಕೆಲ ಸಭೆಗಳನ್ನು ನಡೆಸಿದ್ದರು. ಆದರೆ ನಿನ್ನೆಯ ಸಭೆಯಲ್ಲಿ ಅವರು ಭಾಗವಹಿಸದೇ ಇರುವುದು ಅಚ್ಚರಿಗೆ ಕಾರಣವಾಗಿತ್ತು.

ನಿನ್ನೆ ತೆಲಂಗಾಣ ಕಾಂಗ್ರೆಸ್‍ನ ರಾಜ್ಯಧ್ಯಕ್ಷ ರೆವಂತ್ ರೆಡ್ಡಿ ಗಂಭೀರ ಆರೋಪ ಮಾಡಿ, ಕೆ.ಸಿ.ಚಂದ್ರಶೇಖರ್ ರಾವ್ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಮಾರ್ಗದರ್ಶನದಂತೆ ಜಾತ್ಯತೀತ ಶಕ್ತಿಗಳನ್ನು ವಿಭಜಿಸಿ ಕಾಂಗ್ರೆಸ್ ಪಕ್ಷವನ್ನು ದುರ್ಬಲಗೊಳಿಸಲು ಯತ್ನಿಸುತ್ತಿದ್ದಾರೆ.

ಶಿಕ್ಷಕರನ್ನು ಅಪಮಾನಿಸುತ್ತಿರುವ ಲೆಫ್ಟಿನೆಂಟ್ ಗೌರ್ನರ್ : ಸಿಸೋಡಿಯ ಆಕ್ರೋಶ

ಇದಕ್ಕಾಗಿ ಕರ್ನಾಟಕ ಕಾಂಗ್ರೆಸ್‍ನ ಕಾಂಗ್ರೆಸ್ ನಾಯಕರನ್ನು ಕರೆಸಿಕೊಂಡು 500 ಕೋಟಿ ರೂಪಾಯಿಗಳ ಆಫರ್ ಮಾಡಿದ್ದಾರೆ. ಆದರೆ ನಮ್ಮ ನಾಯಕರು ಅದನ್ನು ಒಪ್ಪಿಕೊಂಡಿಲ್ಲ. ಈ ಎಲ್ಲಾ ಬೆಳವಣಿಗೆಗಳ ಮಾಹಿತಿ ಪಡೆದಿರುವ ಎಚ್.ಡಿ.ಕುಮಾರ್‍ಸ್ವಾಮಿ ಕೆಸಿಆರ್ ಅವರಿಂದ ದೂರ ಉಳಿದಿದ್ದಾರೆ ಎಂದು ಹೇಳಿದ್ದಾರೆ.

ಈ ಆರೋಪ ರಾಜ್ಯ ರಾಜಕೀಯದಲ್ಲಿ ಕೋಲಾಹಲ ಸೃಷ್ಟಿಸಿದೆ . 500 ಕೋಟಿ ರೂಪಾಯಿ ಡೀಲ್ ಕುರಿತು ಪ್ರತಿಕ್ರಿಯಿಸಿರುವ ರಾಜ್ಯ ಕಾಂಗ್ರೆಸ್‍ನ ಮಾಜಿ ಸಚಿವ ಜಮೀರ್ ಅಹಮದ್ ಖಾನ್ ತಾವು ಕೆಸಿಆರ್ ಅವರನ್ನು ಭೇಟಿ ಮಾಡಿದ್ದು ನಿಜ. ಆದರೇ ಹಣದ ಬಗ್ಗೆ ಮಾಹಿತಿ ಇಲ್ಲ ಎಂದು ಮೈಸೂರಿನಲ್ಲಿ ಹೇಳಿದ್ದಾರೆ.

ಬೆಂಗಳೂರಿನ ಚಾಮರಾಜಪೇಟೆ ಕ್ಷೇತ್ರದ ಶಾಸಕರಾಗಿರುವ ಜಮೀರ್, ಮೈಸೂರಿನಲ್ಲಿ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಹೋಗಿದ್ದು ಅಲ್ಲಿ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರೊಂದಿಗೆ ರಹಸ್ಯ ಸಭೆ ನಡೆಸಿದ್ದಾರೆ.

ನಿನ್ನೆಯಿಂದ ಕೆಸಿಆರ್ ಫಂಡಿಂಗ್ ಡೀಲ್ ಭಾರೀ ಸಂಚಲನ ಮೂಡಿಸಿದ್ದರೂ ಜಮೀರ್ ಪಕ್ಷದ ಅಧ್ಯಕ್ಷರನ್ನು ಭೇಟಿ ಮಾಡಿ ಸ್ಪಷ್ಟನೇ ನೀಡುವ ಗೋಜಿಗೆ ಹೋಗಿಲ್ಲ. ಮೊದಲಿನಿಂದಲೂ ಜಮೀರ್ ತಾವೇ ಬೇರೆ ತಮ್ಮ ಸ್ಟೈಲೇ ಬೇರೆ ಎಂಬಂತೆ ವರ್ತಿಸುತ್ತಿದ್ದಾರೆ. ಪಕ್ಷದ ಪ್ರಮುಖ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳದೆ ಕುತೂಹಲ ಮೂಡಿಸಿದ್ದಾರೆ.

ಕೆಲ ಕಾಲ ಅವರು ಜೆಡಿಎಸ್‍ನತ್ತ ಮುಖ ಮಾಡಿದ್ದಾರೆ ಎಂಬ ವದ್ಧಂತಿಗಳು ಹರಡಿದ್ದವು. ಆದರೂ ಅದಕ್ಕೆ ಸ್ಪಷ್ಟನೆ ನೀಡುವ ಗೋಜಿಗೆ ಜಮೀರ್ ಹೋಗಿಲ್ಲ. ಈಗ 500 ಕೋಟಿ ಡೀಲ್ ಕಾಂಗ್ರೆಸ್ ಕಾರ್ಯಕರ್ತರಲ್ಲಿ ದುಡುಗವನ್ನು ಹೆಚ್ಚಿಸಿದೆ. ಬಿಜೆಪಿ ಕಾಂಗ್ರೆಸ್ ಸೋಲಿಸಲು ನಾನಾ ತಂತ್ರಗಾರಿಕೆಯನ್ನು ಅನುಸರಿಸುವುದು ಹೊಸದೇನಲ್ಲ.
ಅದರಲ್ಲೂ ನಮ್ಮ ಪಕ್ಷ ನಾಯಕರೇ ಇಂದು ಸಂಚಿನಲ್ಲಿ ತೊಡಗಿಸಿಕೊಂಡರೆ ನಂಬುವುದು ಯಾರನ್ನು ಎಂಬ ಪ್ರಶ್ನೆಯನ್ನು ಕಾರ್ಯಕರ್ತರು ಕೇಳುತ್ತಿದ್ದಾರೆ. ಮುಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಎಂಬುದರಿಂದ ಹಿಡಿದು ಜಮೀರ್ ಕಾಂಗ್ರೆಸ್‍ನ ಐಕ್ಯತೆಗೆ ಧಕ್ಕೆಯಾಗುವ ಹಲವು ಹೇಳಿಕೆಗಳನ್ನು ನೀಡಿ ಮುಜುಗರ ಉಂಟು ಮಾಡುತ್ತಲೇ ಬಂದಿದ್ದಾರೆ.

ಅದ್ಧೂರಿ ಗಣರಾಜ್ಯೋತ್ಸವಕ್ಕೆ ಎಲ್ಲೆಡೆ ಭದ್ರತೆ

ಡಿ.ಜೆ.ಹಳ್ಳಿ ಮತ್ತು ಕೆ.ಜಿ.ಹಳ್ಳಿ ಗಲಭೆಯಲ್ಲಿ ಪಕ್ಷದ ನಾಯಕರಾದ ಸಂಪತ್ ರಾಜ್ ಸೇರಿದಂತೆ ಇತರರ ವಿರುದ್ಧ ಆರೋಪ ಮಾಡಿದ ಶಾಸಕ ಅಖಂಡ ಪ್ರಸನ್ನ ಕುಮಾರ್‍ರನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ದೂರ ಇಡುವ ಪ್ರಯತ್ನ ನಡೆಸಿದರು. ಆದರೆ ಅಖಂಡ ಅವರೊಂದಿಗೆ ಜಮೀರ್ ಕಾಣಿಸಿಕೊಳ್ಳುವ ಮೂಲಕ ಅವರನ್ನು ಸಿದ್ದರಾಮಯ್ಯ ಅವರ ಮನೆಗೆ ಕರೆದುಕೊಂಡು ಹೋಗುವ ಮೂಲಕ ಹಲವು ಪ್ರಶ್ನೆಗಳನ್ನು ಹುಟ್ಟು ಹಾಕಿದರು.

ಇದು ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ನಡುವೆ ಹೊಂದಾಣಿಕೆ ಇಲ್ಲ ಎಂಬ ಚರ್ಚೆಯನ್ನೂ ಹುಟ್ಟು ಹಾಕಿತ್ತು. ಈಗ ಪಕ್ಷವನ್ನೇ ಸೋಲಿಸಲು ರಾಷ್ಟ್ರ ಮಟ್ಟದಲ್ಲಿ ನಡೆದಿದೆ ಎಂದು ಹೇಳಲಾದ ಸಂಚಿನಲ್ಲಿ ಜಮೀರ್ ಹೆಸರು ಕೇಳಿ ಬಂದಿದೆ. ನನಗೂ ಆರೋಪಕ್ಕೂ ಸಂಬಂಧ ಇಲ್ಲ ಎಂದು ಜಮೀರ್ ಸಮರ್ಥಿಸಿಕೊಂಡಿದ್ದಾರೆ.

ಮೆಟ್ರೋ ಪಿಲ್ಲರ್ ಕುಸಿತಕ್ಕೆ ಗುತ್ತಿಗೆದಾರ ಎಂಜಿನಿಯರ್‌ಗಳೇ ಹೊಣೆ

ಆದರೆ ನೆರೆಯ ರಾಜ್ಯದ ಅವರದೇ ಪಕ್ಷದ ನಾಯಕರು ಮಾಡಿರುವ ಗಂಭೀರ ಆರೋಪಕ್ಕೆ ಸ್ಪಷ್ಟ ಉತ್ತರ ನೀಡಿ ಕಾರ್ಯಕರ್ತರಲ್ಲಿನ ಗೊಂದಲಗಳನ್ನು ನಿವಾರಿಸಬಹುದು ಎಂಬ ನಿರೀಕ್ಷೆಗಳು ಸುಳ್ಳಾಗಿವೆ. ಗೊಂದಲ ಮುಂದುವರೆದಿದೆ. ಜಮೀರ್ ಮತ್ತೆ ಪಕ್ಷಕ್ಕೆ ಮುಜುಗರ ಉಂಟು ಮಾಡಲಾರಂಭಿಸಿದ್ದಾರೆ.

KCR, funding, controversy, mla, Zameer Ahmed Khan, Congress,

Articles You Might Like

Share This Article