ನವದೆಹಲಿ,ಡಿ.14- ತೆಲಂಗಾಣದಲ್ಲಿ ಆಡಳಿತಾರೂಢ ಪಕ್ಷವಾಗಿರುವ ಕೆ.ಸಿ.ಆರ್ ನೇತೃತ್ವದ ತೆಲಂಗಾಣ ರಾಷ್ಟ್ರ ಸಮಿತಿ ರಾಷ್ಟ್ರ ರಾಜಕಾರಣದತ್ತ ಮುಖ ಮಾಡಿದ್ದು, ಇಂದು ದೆಹಲಿಯಲ್ಲಿ ಪಕ್ಷದ ಕಚೇರಿ ಉದ್ಘಾಟಿಸಿದೆ.
ಸರ್ದಾರ್ ಪಟೇಲ್ ಮಾರ್ಗದಲ್ಲಿ ಆರಂಭಿಸಲಾಗಿರುವ ನೂತನ ಕಚೇರಿಯಲ್ಲಿ ಇಂದು ತೆಲಂಗಾಣದ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್, ಪಕ್ಷದ ಧ್ವಜವನ್ನು ಅನಾವರಣಗೊಳಿಸಿದರು ಮತ್ತು ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿ ಔಪಚಾರಿಕವಾಗಿ ಆಸನ ಅಲಂಕರಿಸಿದರು.
ಭಾರತ್ ರಾಷ್ಟ್ರ ಸಮಿತಿ (ಬಿಆರ್‌ಎಸ್) ಇಂದಿನಿಂದ ರಾಷ್ಟ್ರ ರಾಜಕಾರಣದಲ್ಲೂ ತನ್ನ ಹೆಜ್ಜೆಗಳನ್ನು ಮೂಡಿಸಲಿದೆ ಎಂದು ಬಿಆರ್‌ಎಸ್ ಸಂಸದ ರಂಜಿತ್ ರೆಡ್ಡಿ ತಿಳಿಸಿದ್ದಾರೆ.
ಭಾರತ-ಚೀನಾ ಗಡಿ ಸಂಘರ್ಷ ಕುರಿತು ಅಮೇರಿಕ ಪ್ರತಿಕ್ರಿಯೆ ಏನು ಗೊತ್ತೇ..?
ಆಂಧ್ರ ಪ್ರದೇಶದಿಂದ ತೆಲಂಗಾಣವನ್ನು ಪ್ರತ್ಯೇಕಿಸಿ ರಾಜ್ಯ ಸ್ಥಾನ ಮಾನ ಪಡೆದುಕೊಳ್ಳುವ ಏಕೈಕ ಉದ್ದೇಶದೊಂದಿಗೆ 2001ರಲ್ಲಿ ತೆಲಂಗಾಣದಲ್ಲಿ ಆರಂಭವಾದ ತೆಲಂಗಾಣ ರಾಷ್ಟ್ರ ಸಮಿತಿ ಅದರಲ್ಲಿ ಯಶಸ್ಸು ಸಾಧಿಸಿತ್ತು. 2014ರಲ್ಲಿ ತೆಲಂಗಾಣ ಪ್ರತ್ಯೇಕ ರಾಜ್ಯವಾದ ಬಳಿಕ ವ್ಯಾಪಕ ಅಲೆಯಲ್ಲಿ ಚುನಾವಣೆಯಲ್ಲಿ ಗೆದ್ದು ರಾಜ್ಯದಲ್ಲಿ ಅಧಿಕಾರವನ್ನು ಹಿಡಿಯಿತು.
ಕೆಸಿಆರ್ ಮುಖ್ಯಮಂತ್ರಿಯೂ ಆದರು. ಸಂಸ್ಥಾಪನೆಗೊಂಡು 20 ವರ್ಷಗಳ ಬಳಿಕ ಈಗ ರಾಷ್ಟ್ರ ರಾಜಕಾರಣದತ್ತ ಟಿಎಸ್‍ಆರ್ ಮುಖ ಮಾಡಿದೆ. 2018ರಿಂದಲೂ ಕಾಂಗ್ರೆಸ್ ಮತ್ತು ಬಿಜೆಪಿಗೆ ಪರ್ಯಾಯ ಶಕ್ತಿ ಹುಟ್ಟು ಹಾಕುವತ್ತ ಗಮನ ಹರಿಸಿರುವ ಪಕ್ಷ, ಹಲವು ಪ್ರಾದೇಶಿಕ ಪಕ್ಷಗಳ ಮುಖಂಡರ ಜೊತೆ ಸರಣಿ ಸಭೆಗಳನ್ನು ನಡೆಸಿದೆ. ಇತ್ತೀಚೆಗೆ ರಾಷ್ಟ್ರಪತಿ ಚುನಾವಣೆ ವೇಳೆಯಲ್ಲೂ ಬಿಜೆಪಿಯೇತರ ಪಕ್ಷಗಳನ್ನು ಒಗ್ಗೂಡಿಸುವ ಪ್ರಯತ್ನ ನಡೆಸಿತ್ತು.
ಚಿಕನ್ ರೋಲ್ ಕೊಡದಿದ್ದಕ್ಕೆ ಹೊಟೇಲ್ ಮಾಲಿಕನ ಮನೆಗೆ ಬೆಂಕಿ
ಬಿಹಾರದಲ್ಲಿ ನಿತೀಶ್ ಕುಮಾರ್ ನೇತೃತ್ವದ ಜೆಡಿಯು, ತಮಿಳುನಾಡಿನಲ್ಲಿ ಮುಖ್ಯಮಂತ್ರಿ ಎಂ.ಕೆ.ಸ್ಟಾಲೀನ್ ನೇತೃತ್ವದ ಡಿಎಂಕೆ, ಕರ್ನಾಟಕದಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ನೇತೃತ್ವದ ಜೆಡಿಎಸ್ ಸೇರಿದಂತೆ ಹಲವು ಪ್ರಾದೇಶಿಕ ಪಕ್ಷಗಳ ಜೊತೆ ಕೆಸಿಆರ್ ಚರ್ಚೆ ನಡೆಸಿದ್ದಾರೆ. ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿ ಕೂಡ ಕೆಲವೊಮ್ಮೆ ತೃತೀಯ ಶಕ್ತಿ ಉದಯಕ್ಕೆ ಬೆಂಬಲವಾಗಿದ್ದರು.
ಇಂದು ದೆಹಲಿಯಲ್ಲಿ ಪಕ್ಷದ ರಾಷ್ಟ್ರೀಯ ಕಚೇರಿ ಉದ್ಘಾಟನೆಯಲ್ಲಿ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರ ಸ್ವಾಮಿ ಭಾಗವಹಿಸಿದ್ದರು.
KCR, inaugurate, BRS office, New Delhi,